ಚಾರ ನವೋದಯ ವಿದ್ಯಾಲಯದಲ್ಲಿ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡ ನಾಟಿ

ಹೆಬ್ರಿ: ಸಾಲುಮರದ ತಿಮ್ಮಕ್ಕ ಉಡುಪಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ನೀಡಿದ ಅಳಿವಿನಂಚಿನಲ್ಲಿರುವ ಶ್ರೀತಾಳೆ ಗಿಡಗಳನ್ನು ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆಸುವಂತೆ ಕರೆ ನೀಡಿದ್ದರು. ಈ ನಿಟ್ಟಿನಲ್ಲಿ ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ಮಹತ್ವವಿರುವ ಶ್ರೀತಾಳೆ ಗಿಡಗಳನ್ನು ಎಲ್ಲರೂ ಬೆಳೆಸಿ ಉಳಿಸಿ ಎಂದು ಉಡುಪಿಯ ‘ನಮ್ಮ ಮನೆ ನಮ್ಮ ಮರ’ ತಂಡದ ರೂವಾರಿ ಅವಿನಾಶ್ ಕಾಮತ್ ಹೇಳಿದರು. ಅವರು ಜು. 28 ರಂದು ಹೆಬ್ರಿ ಚಾರ ಜವಾಹರ ನವೋದಯ ವಿದ್ಯಾಲಯ ಹಾಗೂ ರಕ್ಷಕ-ಶಿಕ್ಷಕ ಸಮಿತಿಯ ನೇತೃತ್ವದಲ್ಲಿ ಉಡುಪಿಯ ನಮ್ಮ ಮನೆ ನಮ್ಮ […]

ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ

ಮಣಿಪಾಲ: ವೈರಲ್ ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು, ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಮತ್ತು ರೋಗದ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸಲು ಪ್ರತೀ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಜಾಗತಿಕವಾಗಿ ಆಚರಿಸಲಾಗುತ್ತದೆ. ವಿಶ್ವ ಹೆಪಟೈಟಿಸ್ ದಿನದ ಈ ವರ್ಷದ ಘೋಷ ವಾಕ್ಯ ‘ನಾವು ಕಾಯುತ್ತಿಲ್ಲ’. ಈ ರೋಗದ ಬಗ್ಗೆ ಮಾಹಿತಿ ಇಲ್ಲದವರು ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಮತ್ತು ತಕ್ಷಣವೇ ಜೀವರಕ್ಷಕ ಚಿಕಿತ್ಸೆಯನ್ನು ಪಡೆಯಬೇಕು. ವಿಶ್ವ ಆರೋಗ್ಯ ಸಂಸ್ಥೆಯು 2030 ರ ವೇಳೆಗೆ ಹೆಪಟೈಟಿಸ್ ಕಾಯಿಲೆಯನ್ನು […]

ಶಿವಪುರದಲ್ಲಿ ನೇಣು ಬಿಗಿದುಕೊಂಡು ವಿವಾಹಿತ ಆತ್ಮಹತ್ಯೆ

ಹೆಬ್ರಿ: ಜೀವನದಲ್ಲಿ ಮನನೊಂದ ವಿವಾಹಿತನೋರ್ವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಹಾಡಿಯಲ್ಲಿ ನಡೆದಿದೆ. ಹೆಬ್ರಿ ಶಿವಪುರ ನಿವಾಸಿ ರಂಗನಾಥ್ ಶೆಟ್ಟಿ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಹಿರಿಯಡ್ಕ ಸೌಹಾರ್ದ ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಯಾವುದೋ ವಿಚಾರಕ್ಕೆ ಸಂಬಂಧಿಸಿ ಮನನೊಂದಿದ್ದು, ಯಾರ ಬಳಿಯೂ‌ ಹೇಳಿಕೊಂಡಿರಲಿಲ್ಲ. ಇದೇ ವಿಚಾರದಲ್ಲಿ ಮನನೊಂದು ಶಿವಪುರ ಗ್ರಾಮದ ಮೇಲ್ಮುಕ್ಕಾಣಿ ಹಾಡಿಯಲ್ಲಿರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]

ಉಡುಪಿ ಪ್ರಕರಣ ಗಂಭೀರ ಸ್ವರೂಪದ ಆರೋಪ; ಸಮಗ್ರ ತನಿಖೆಗೆ ಶಿರಿಯಾರ ಪ್ರಭಾಕರ್ ನಾಯಕ್ ಆಗ್ರಹ 

ಉಡುಪಿ: ಉಡುಪಿ ಪ್ರಕರಣ ಗಂಭೀರ ಸ್ವರೂಪದ ಆರೋಪವಾಗಿದ್ದು, ಪೊಲೀಸರು ಕಾಟಾಚಾರಕ್ಕೆ ಎಫ್. ಐ.ಆರ್   ಸಲ್ಲಿಸಿ ಆರೋಪಿಗಳನ್ನು ಪರೋಕ್ಷವಾಗಿ ರಕ್ಷಿಸುತ್ತಿರುವುದು ಕಂಡು ಬರುತ್ತಿದೆ. ಈ ಕೃತ್ಯದ ಹಿಂದೆ ಸಾಮಾಜಿಕ ಶಾಂತಿ ಕದಡಿಸುವ ಹಲವಾರು ಸಂಘ ಮತ್ತು ಸಂಘಟನೆಗಳು ಇದ್ದು, ಇದರ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸಿ ಶಿಕ್ಷೆ ನೀಡಬೇಕೆಂದು ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ, ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯ ನ್ಯಾಯವಾದಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ಪತ್ರಿಕಾ […]

ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವತಿಯಿಂದ ವರ್ಕ್-ಲೈಫ್ ಬ್ಯಾಲೆನ್ಸಿಂಗ್ ಕಾರ್ಯಾಗಾರ

ಮಂಗಳೂರು: ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ‘ರಚನಾ’ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ‘ಮೈಂಡ್ ಮ್ಯಾಪಿಂಗ್ ಮತ್ತು ವರ್ಕ್-ಲೈಫ್ ಬ್ಯಾಲೆನ್ಸಿಂಗ್’ ಕುರಿತು ಕಾರ್ಯಾಗಾರ ನಡೆಯಿತು ಕಾರ್ಯಕ್ರಮದ ಗೌರವ ಭಾಷಣಕಾರರಾಗಿ ಖ್ಯಾತ ವಾಗ್ಮಿ ಡಾ. ಸರ್ಫರಾಜ್‌ ಜೆ.ಹಸೀನ್ ಆಗಮಿಸಿ ಮಾತನಾಡಿ,ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಮತ್ತು ನಿರ್ಧರಿಸಲು ನೀವೇ ಉತ್ತಮ ವ್ಯಕ್ತಿ, ನೀವು ಧನಾತ್ಮಕವಾಗಿ ಯೋಚಿಸಿದರೆ, ನಿಮ್ಮ ಉಪಪ್ರಜ್ಞೆಯು ಸಕಾರಾತ್ಮಕ ಆಲೋಚನೆಗಳನ್ನು ರೂಪಿಸುತ್ತದೆ, ನೀವು ನಕಾರಾತ್ಮಕವಾಗಿ ಯೋಚಿಸಿದರೆ, ಅದೇ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು […]