ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಮಹಿಳಾ ಘಟಕ ವತಿಯಿಂದ ವರಮಹಾಲಕ್ಷ್ಮೀ ಪೂಜೆ

ಉಡುಪಿ: ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ(ರಿ) ಮತ್ತು ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಮಹಿಳಾ ಘಟಕ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮೀ ಪೂಜೆಯು ಶುಕ್ರವಾರದಂದು ಸಂಜೆ ಶಿವಪಾಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನದ ಪೂರ್ಣಾನಂದ ಸ್ಮೃತಿ ಮಂಟಪದಲ್ಲಿ ಜರುಗಿತು. ನೂರಾರು ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡು ಕೃತಾರ್ಥರಾದರು.

ಬೆಳ್ಮಣ್: ಆ.27 ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರ

ಬೆಳ್ಮಣ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು, ಬೆಳ್ಮಣ್ ವಲಯ, ಶ್ರೀ ಹರಿ ನೇತ್ರಾಲಯ, ಅಂಬಲಪಾಡಿ, ಉಡಿಪಿ, ಬೆಳ್ಮಣ್ ನೇತ್ರ ಚಿಕಿತ್ಸಾಲಯ, ಗ್ರಾಮ ಪಂಚಾಯತ್ ಬೆಳ್ಮಣ್ ಇವರ ಸಂಯುಕ್ತ ಆಶ್ರಯದಲ್ಲಿ ಆ.27 ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರವು ಬೆಳ್ಮಣಿನ ದಾಮೋದರ ಕಾಂಪ್ಲೆಕ್ಸ್ ನಲ್ಲಿರುವ ಬೆಳ್ಮಣ್ ಕಣ್ಣಿನ ಕ್ಲಿನಿಕ್ ನಲ್ಲಿ ಬೆಳಿಗ್ಗೆ 9.30 ರಿಂದ 1.30 ರವರೆಗೆ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಆಗಸ್ಟ್ 29 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ

ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಆಗಸ್ಟ್ 29 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಹಿರಿಯಡ್ಕದಲ್ಲಿ 110 ಕೆ.ವಿ ಬಸ್ಬಾರ್ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಧುವನ-ಕುಂದಾಪುರ-ನಾವುಂದ ಮಾರ್ಗದ ಮಾರ್ಗ ಮುಕ್ತತೆ ಇರುವುದರಿಂದ 110/11 ಕೆ.ವಿ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ ಹಾಗೂ 33/11 ಕೆ.ವಿ […]

ಜಿಲ್ಲಾ ಮಟ್ಟದ  ಈಜು ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ  ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕುಂದಾಪುರ : ಉಡುಪಿ ಜಿಲ್ಲಾ ಪದವಿ  ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಂ. ಜಿ. ಎಮ್ ಕಾಲೇಜು ಉಡುಪಿ ಇವರ  ಜಂಟಿ ಆಶ್ರಯದಲ್ಲಿ ಆ 24 ರಂದು ಮಣಿಪಾಲ್  ಮರೀನಾ  ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ  ಶ್ರೀ ವೆಂಕಟರಮಣ  ಪದವಿ  ಪೂರ್ವ ಕಾಲೇಜಿನ  ಶಶಾಂಕ್ Breast stroke ನಲ್ಲಿ ಪ್ರಥಮ, ಶ್ರವಣ್ Freestyle ನಲ್ಲಿ ದ್ವಿತೀಯ, ಅಶ್ವಿನ್  Back stroke ನಲ್ಲಿ ದ್ವಿತೀಯ, ಓಂಕಾರ್ Butterfly ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ […]

ಫ್ರೆಂಡ್ಸ್ ಫಾರೆವರ್‌ ಇಂಟರ್‌ ನ್ಯಾಷನಲ್ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ಯಾರ್ಥಿನಿ ಸೋನಿಯಾ ಕ್ಯಾಥಿ ಲಸ್ರಾದೊ ಭಾಗಿ

ಮಂಗಳೂರು: ಬಿಜೈ ನಿವಾಸಿ ಕ್ಲಿಫರ್ಡ್ ಮತ್ತುಕ್ವೀನಿ ಲಸ್ರಾದೊ ದಂಪತಿಗಳ ಮಗಳಾದ ಸೋನಿಯಾ ಕ್ಯಾಥಿ ಲಸ್ರಾದೊ ಇವರು ಅಮೆರಿಕದ ಡರ್ಹಮ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ‘ಫ್ರೆಂಡ್ಸ್ ಫಾರೆವರ್‌ ಇಂಟರ್‌ ನ್ಯಾಷನಲ್’(ಎಫ್‌ಎಫ್‌ಐ) ಸಂಸ್ಥೆಯು ನಡೆಸುತ್ತಿರುವ 10 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ್ದರು. ಈ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ವೃತ್ತಿಪರ ನಾಯಕತ್ವದ ಗುಂಪುಗಳು, ನಾಗರಿಕ ಸಂಸ್ಥೆಗಳು ಇತ್ಯಾದಿಗಳೊಂದಿಗೆ ಕೆಲಸ ಮಾಡುತ್ತದೆ. ಇದು ವೈಯಕ್ತಿಕ ನಾಯಕತ್ವ ಮತ್ತು ಸಮುದಾಯದ ಮಟ್ಟದ ಕ್ರಿಯಾಶೀಲತೆಯನ್ನು ಗಮನಿಸುವ ಒಂದು ವಿಶ್ವವಿದ್ಯಾಲಯೋತ್ತರ ಸಂಸ್ಥೆಯಾಗಿದೆ. ಎಫ್‌ಎಫ್‌ಐ ಲಾಭರಹಿತ […]