ದಕ್ಷಿಣ ಕನ್ನಡ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆಸಂಬoಧಿಸಿದoತೆ, ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು,ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳಪ್ರಮುಖರು ಆದ ನಾವು ‘ದಕ್ಷಿಣ ಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇಮುಂದುವರಿಸುವoತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ.ಈ ಕುರಿತು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ಈ ಬೇಡಿಕೆಮಂಗಳೂರಿನ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರು ಈಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು,ತನ್ನದೇ ಆದ ವಿಶಿಷ್ಟ ಅಸ್ತಿತ್ವ ಮತ್ತು ಮಹತ್ವವನ್ನು ಹೊಂದಿದೆ. ಆದರೆ‘ದಕ್ಷಿಣ […]

ಸಂಕಷ್ಟಿ ಚತುರ್ಥಿ: ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಉದ್ಯಾವರ: ಸಂಕಷ್ಟಿ ಚತುರ್ಥಿ ಅಂಗವಾಗಿ ಉದ್ಯಾವರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಳಿಗ್ಗೆಯಿಂದಲೇ ದೇವರ ದರ್ಶನ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದರು. ಸಂಕಷ್ಟಿ ಪ್ರಯುಕ್ತ ಬೆಳಿಗ್ಗೆ ಗಣಹೋಮ, ವಿಶೇಷ ಪೂಜೆ ಹಾಗೂ ಅಪ್ಪ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರದ್ಧಾಭಕ್ತಿಯಿಂದ ಸೇವೆಗಳನ್ನು ಸಲ್ಲಿಸಿ ಶ್ರೀ ಸಿದ್ಧಿವಿನಾಯಕನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಂಕಷ್ಟಿ ಚತುರ್ಥಿಯ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರ […]

ಆಯುರ್ವೇದ ಕ್ಷೇತ್ರದಲ್ಲಿ ಶತಮಾನಗಳ ಸೇವೆಗೆ ಕೆ.ರಘುಪ್ರಸಾದ್ ಪ್ರಭು ಅವರಿಗೆ “Ayur Bhushana Award 2026” ಪುರಸ್ಕಾರ

ಉಡುಪಿ: ಕನ್ನಡಪ್ರಭ-ಏಶಿಯಾ ನೆಟ್ ಸುವರ್ಣ ಮಾಧ್ಯಮ ನೀಡುವ ಆಯುರ್ ಭೂಷಣ ಪುರಸ್ಕಾರವನ್ನು 100 ವರ್ಷಗಳ ನಿರಂತರ ಸೇವೆ, ಶುದ್ಧತೆ ಹಾಗೂ ಗುಣಮಟ್ಟದ ಬದ್ಧತೆಗೆ ‘ಸ್ವದೇಶಿ ಔಷಧ ಭಂಡಾರ’ದ ಕೆ.ರಘುಪ್ರಸಾದ್ ಪ್ರಭು, ಭರತ್ ಪ್ರಭು, ಕೆ.ಮನೋಜ್ ಪ್ರಭು ಹಾಗೂ ಮನೆಯವರ ಈ ಅಪೂರ್ವ ಸಾಧನೆಗಾಗಿ ನೀಡಲಾಯಿತು.

ಮಲ್ಪೆಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಉಡುಪಿ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಮಲ್ಪೆಯಲ್ಲಿ ನಡೆದಿದೆ.ಮೃತರನ್ನು ಆಂಧ್ರಪ್ರದೇಶದ ಪರಮೇಶ್ ಎಂದು ಗುರುತಿಸಲಾಗಿದೆ. ಗುಜರಿ ಹೆಕ್ಕುವ ಕೆಲಸ ಮಾಡುತ್ತಿದ್ದ ಪರಮೇಶ್, ತಾನು ಪ್ರತಿದಿನ ಮಲಗುವ ಜಾಗದಲ್ಲಿಯೇ ಕೊಲೆಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಬೆಳಕಿಗೆ ಮುತ್ತಿಗೆ ಹಾಕಿದ ಸಾವಿರಾರು ರೆಕ್ಕೆ ಗೆದ್ದಲುಗಳು

ಉಡುಪಿಯಲ್ಲಿ ಮಳೆ ಬಳಿಕ ಕಂಡುಬಂದ ‘ಟರ್ಮೈಟ್ ಸ್ವಾರ್ಮಿಂಗ್’ ದೃಶ್ಯ ಉಡುಪಿ: ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯ ಅಂಗಡಿಗಳಲ್ಲಿ ಬೆಳಕಿಗೆ ಆಕರ್ಷಿತಗೊಂಡು ಸಾವಿರಾರು ರೆಕ್ಕೆ ಹೊಂದಿರುವ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವಿದ್ಯುತ್ ದೀಪಗಳು ಹಾಗೂ ದಾರಿದೀಪಗಳಿಗೆ ಆಕರ್ಷಿತಗೊಂಡ ಗೆದ್ದಲುಗಳು ಗುಂಪು ಗುಂಪಾಗಿ ಹಾರಾಡುತ್ತಿದ್ದವು. ಕೆಲ ಸಮಯದ ಬಳಿಕ ರೆಕ್ಕೆಗಳನ್ನು ಕಳಚಿಕೊಂಡ ಗೆದ್ದಲುಗಳು ಹಾಗೂ ಉದುರಿದ ಸಾವಿರಾರು ರೆಕ್ಕೆಗಳು ದೀಪಗಳ ಕೆಳಗೆ ಹಾಗೂ ರಸ್ತೆಯಂಚಿನಲ್ಲಿ ಕಂಡುಬಂದವು. ಮಳೆ ಹಾಗೂ ತೇವಾಂಶದ […]