ಕಾರ್ಕಳ: ಸುವರ್ಣ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಉಡುಪಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ನಡೆದಿದೆ.ಮೃತರನ್ನು ಹಿರ್ಗಾನದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿ.ಮೀ. ದುರ್ಗಮ ದಾರಿಯಲ್ಲಿ ನಡೆದು ಸುವರ್ಣ ನದಿಗೆ ತೆರಳಿದ್ದರು. ಈ ವೇಳೆ ಆಳವಾದ ನೀರಿಗೆ ತೆರಳಿದ ಭರತ್ ಹಾಗೂ ಹರ್ಷನ್ ನೀರಿನಲ್ಲಿ ಮುಳುಗಿದ್ದಾರೆ […]

ಆರೋಗ್ಯಕರ ಜೀವನಕ್ಕಾಗಿ ಮಣಿಪಾಲದಲ್ಲಿದೆ ರಿಹ್ಯಾಬ್ ಥೆರಪೀಸ್ ಹಬ್ :ನಿಮ್ಮ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿದೆ ಒಳ್ಳೆಯ ಪರಿಹಾರ

ಮಣಿಪಾಲ: ಆರೋಗ್ಯಕರ ಜೀವನಕ್ಕಾಗಿ ಸಮಗ್ರ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಮಣಿಪಾಲದ ವೇಣುಗೋಪಾಲ್ ಟೆಂಪಲ್ ರಸ್ತೆಯಲ್ಲಿ ‘ರಿಹ್ಯಾಬ್ ಥೆರಪೀಸ್ ಹಬ್’ಕಾರ್ಯನಿರ್ವಹಿಸುತ್ತಿದೆ. ಬೆನ್ನು ನೋವು, ಕತ್ತಿನ ನೋವು, ಮೊಣಕಾಲು ಮತ್ತು ಪಾದದ ನೋವು, ಭುಜದ ನೋವು ಸೇರಿದಂತೆ ವಿವಿಧ ರೀತಿಯ ನೋವುಗಳಿಗೆ ಇಲ್ಲಿ ಫಿಜಿಯೋಥೆರಪಿ ಮೌಲ್ಯಮಾಪನ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಕ್ರೀಡೆ ಸಂಬಂಧಿತ ಗಾಯಗಳು, ಪಾರ್ಶ್ವವಾಯು ನಂತರದ ಪುನರ್ವಸತಿ, ಫೇಷಿಯಲ್ ಪಾಲ್ಸಿ, ಪಾರ್ಶ್ವವಾಯು, ನಡೆಯುವ ತರಬೇತಿ ಹಾಗೂ ನೋವು ನಿಯಂತ್ರಣಕ್ಕೂ ಚಿಕಿತ್ಸಾ ಸೇವೆಗಳು ಲಭ್ಯವಿವೆ. ವ್ಯಾಯಾಮ ಚಿಕಿತ್ಸೆ, ಎಲೆಕ್ಟ್ರೋಥೆರಪಿ […]

ವಿಟಿಯು ಘಟಿಕೋತ್ಸವ: ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಾಲಜಿ ವಿದ್ಯಾರ್ಥಿನಿಯರಿಗೆ ಅಗ್ರ ರ‍್ಯಾಂಕ್‌ಗಳ ಗರಿ

ಮಂಗಳೂರು: ಮಂಗಳೂರಿನ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PACE) ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಸಲಿಲಾ ಅವರು ಬಿ.ಇ. ಬಯೋಟೆಕ್ನಾಲಜಿ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಪ್ರತಿಷ್ಠಿತ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಸೆಪ್ಟೆಂಬರ್ 26, 2026 ರಂದು ನಡೆದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಅತ್ಯುನ್ನತ ಶೈಕ್ಷಣಿಕ ಗೌರವವನ್ನು ಪ್ರದಾನ ಮಾಡಲಾಯಿತು.ಇದೇ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಇನ್ನುಳಿದ ಇಬ್ಬರು ವಿದ್ಯಾರ್ಥಿನಿಯರು ಸಹ ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು […]

ಆಶ್ರಯ ಹಸ್ತ ಟ್ರಸ್ಟ್ ಇವರ ಸಹಯೋಗದೊಂದಿಗೆ ನೂತನ ಗೋಶಾಲೆ ನಿರ್ಮಾಣ, ಗುದ್ದಲಿ ಪೂಜೆ

ಉಡುಪಿ: ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ ಪ್ರಸ್ತುತ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಹಾಗೂ ಆಶ್ರಯ ಹಸ್ತ ಟ್ರಸ್ಟ್ ಇವರ ಸಹಯೋಗದೊಂದಿಗೆ ಅಂದಾಜು ಸುಮಾರು 100 ಗೋವುಗಳಿಗಾಗಿ ನೂತನ ಗೋಶಾಲೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಇವರ ನೇತೃತ್ವದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ಗ್ರಾಮಸ್ಥರು ಉಪಸ್ತಿತರಿದ್ದರು.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅದ್ಲೂರಿ ಲಕ್ಷ್ಮಣ್ ಕುಮಾರ್ ಭೇಟಿ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅದ್ಲೂರಿ ಲಕ್ಷ್ಮಣ್ ಕುಮಾರ್ (ತೆಲಂಗಾಣ ಸರ್ಕಾರ) ಭೇಟಿ ನೀಡಿದರು. “ಅದ್ಲೂರಿ ಲಕ್ಷ್ಮಣ್ ಕುಮಾರ್”ಪರಿಶಿಷ್ಟ ಜಾತಿಗಳ ಅಭಿವೃದ್ಧಿ, ಬುಡಕಟ್ಟು ಕಲ್ಯಾಣ ಮತ್ತು ವಿಕಲಚೇತನರ, ಹಿರಿಯ ನಾಗರಿಕ ಹಾಗೂ ಅಲ್ಪಸಂಖ್ಯಾತರ ಸಬಲೀಕರಣ ಸಚಿವರು (ತೆಲಂಗಾಣ ಸರ್ಕಾರ) ಭೇಟಿ ನೀಡಿ ದರ್ಶನ ಪಡೆದುಕೊಂಡರು ಹಾಗೂ ಶ್ರೀ ಮಠದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ವೆಂಕಟರಮಣ ಮುಚ್ಚಿಂತ್ತಾಯ ಉಪಸ್ಥಿತರಿದ್ದರು.