ಕರ್ನಾಟಕ ರಾಜ್ಯದಲ್ಲಿ ಅತ್ಯಂತ ದೊಡ್ಡ ಮತ್ತು ಅತ್ತ್ಯುತ್ತಮ ದರ್ಜೆಯ ಅವಲಕ್ಕಿಯನ್ನು ಉತ್ಪಾದನೆ ಮಾಡುತ್ತಿರುವ ಮಾರುತಿ ಉದ್ಯಮ ಇದರ ಪ್ರವರ್ತಕರಾದ ರಮೇಶ್ ನಾಯಕ್ ಆತ್ರಾಡಿ ಇವರ ಉದ್ಯಮ ಶೀಲತೆಯ ಪಯಣ, ಉದ್ಯೋಗ ದಲ್ಲಿ ನಾವಿನ್ಯತೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆ ಜತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿ ಕಾರ್ಮಿಕರ ಪ್ರೀತಿ ಯನ್ನು ಗಳಿಸಿರುವ ಸಾಧನೆಗಳನ್ನು ಗಮನಿಸಿ NKSSIA (ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಹುಬ್ಬಳ್ಳಿಯ ಕಾಟನ್ ಕೌಂಟಿ ಕ್ಲಬ್ ನಲ್ಲಿ ಜರಗಿದ ತನ್ನ ವಾರ್ಷಿಕ ಮಹಾ ಕೂಟದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ, ಶ್ರೀನಿವಾಸ್ ಮಾನೆ, ಮಹೇಶ್ ತೆಂಗಿನ ಕಾಯಿ, ಕೈಗಾರಿಕೆಗಳ ಸಂಘದ ರಾಜ್ಯ ಅಧ್ಯಕ್ಷರಾದ ನಿಂಗಣ್ಣ ಬಿರದಾರ, FKCCL ಬೆಂಗಳೂರು ಅಧ್ಯಕ್ಷ ಸಾಯಿರಾಂ ಪ್ರಸಾದ್, NKSSIA ಅಧ್ಯಕ್ಷರು ರಮೇಶ್ ಪಾಟೀಲ್, ಕಾರ್ಯಕ್ರಮದ ಛೇರ್ಮನ್ ಗಿರೀಶ್ ಮಾನೆ, ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್, ಮುಂತಾದವರ ಸಮಕ್ಷಮದಲ್ಲಿ “ಉದ್ಯಮ ರತ್ನ ” ಪ್ರಶಸ್ತಿ ಯನ್ನು ನೀಡಿ ಗೌರವಿಸಿದೆ.
ಕಾರ್ಯಕ್ರಮ ದಲ್ಲಿ ಸಂಘದ ಪದಾಧಿಕಾರಿಗಳಾದ ಗಿರೀಶ್ ನಲವಾಡಿ, ವಿಗ್ನೇಶ್ ಸಾಯಿಗಲ್, ನಾಗೇಶ್ ರಿಟ್ಟಿ, ಪ್ರಶಾಂತ್ ಅಚಲಕರ್, ಅಶೋಕ್ ಕುಮಾರ್, ಮಿಚೆಲ್ ಮಡಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ರಮೇಶ್ ನಾಯಕ್ ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಮುಗಿಸಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಪರ್ಕಳ ಹೈಸ್ಕೂಲ್ ನಲ್ಲಿ ನಂತರ MGM ಕಾಲೇಜ್ ನಲ್ಲಿ ಬಿ.ಕಾಮ್ ಪದವಿ ಪಡೆದಿರತ್ತಾರೆ. ನಂತರ ಬೆಳಗಾವಿಯಲ್ಲಿ ಎರಡು ವರ್ಷ ಸೈನಿಕರ ತರಬೇತಿ ಪಡೆದಿರುತ್ತಾರೆ.
ತದನಂತರ ಉದ್ಯೋಗ ಅರಸುತ್ತ ಮಣಿಪಾಲ ವ್ಯಾಲ್ಯೂ ಇಂಟರ್ನ್ಯಾಷನಲ್ ನಲ್ಲಿ ಕೆಲ ಕಾಲ ಅಕೌಂಟ್ ವಿಭಾಗ ದಲ್ಲಿ ಕೆಲಸ ಮಾಡಿ ಕಡೆಗೆ ಶಿವಪುರ ಸುಬ್ಬಣ್ಣ ನಾಯಕ್ ಇವರ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುತ್ತಾರೆ.
ನಂತರ ಸ್ವ ಉದ್ಯೋಗ ಮಾಡುವ ಆಸೆಯಂತೆ ಹಳಿಯಾಳದ ಒಂದು ಅವಲಕ್ಕಿ ಮಿಲ್ ಅನ್ನು ಬಹಳಷ್ಟು ಕಾಲ ಲೀಸ್ ಗೆ ಪಡೆದು ಅಲ್ಲಿ ದೊರೆತ ಅನುಭವದಿಂದ ಸುಮಾರು 10 ಎಕ್ರೆ ಜಾಗ ಖರೀದಿ ಮಾಡಿ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ಹೆಸರು ಪಡೆದಿರುವ ಮಾರುತಿ ಉದ್ಯಮವನ್ನು ಸ್ಥಾಪನೆ ಮಾಡಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುತ್ತಾರೆ. ಇವರ ಸಾಧನೆಗೆ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ದೊರೆತಿವೆ.















