ವಿದೇಶ ಬಿಟ್ಟು ಊರಿಗೆ ಬಂದ ಯುವಕ, ಈಗ ಗೋಪಾಲಕ: ದೇಶಿ ಹೈನುಗಾರಿಕೆಯ ಕೈ ಹಿಡಿದ ಈ ಯುವಕನ ಕತೆ ಕೇಳಿ
ದೇಶಿ ದನಗಳ ಹಾಲಿನ ಮಹತ್ವ ಕಂಡುಕೊಂಡು, ದೇಶಿ ಗೋವುಗಳ ಹಾಲನ್ನು ಹುಡುಕಿ ಹೋಗುವವರು ಬಹಳಷ್ಟು ಜನ ಇದ್ದಾರೆ, ಆದರೆ ಜನರ ಬೇಡಿಕೆಗನುಗುಣವಾಗಿಯೇ ಅಪರೂಪದ ದೇಶಿ ದನಗಳನ್ನು ಸಾಕಿ, ಹೈನುಗಾರಿಕೆಯನ್ನು ನೆಚ್ಚಿಕೊಳ್ಳುವವರು ಬಹಳ ಅಪರೂಪ. ಆ ಅಪರೂಪದ ವ್ಯಕ್ತಿಗಳ ಪೈಕಿ ನಮ್ಮ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಯುವಕ ಹೈನ್ಯೋದ್ಯಮಿಯ ಹೆಸರು ನಿಶಾನ್ ಡಿ’ಸೋಜ. ವಿದೇಶದಲ್ಲಿ ಒಂದಷ್ಟು ಉದ್ಯೋಗ ಮಾಡಿ, ಇದೀಗ ಸ್ವಂತ ಊರಿನಲ್ಲೇ ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ನಿಶಾನ್ ಅನ್ನೋ ಬ್ರಹ್ಮಾವರದ ಯುವಕ, ಪಡುನೀಲಾವರದ ಬಾಯರ್ ಬೆಟ್ಟಿನಲ್ಲಿ ದೇಶೀಯ ಗೋವು […]
ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ : ಇದು ಉಡುಪಿxpress ಕಾಳಜಿ
ಕಾರಿಗೆ ಸಿಕ್ಕ ಪ್ರಾಮುಖ್ಯತೆ ಕಾಡಿಗೆ ಸಿಗುತ್ತಿಲ್ಲ ನೂರಾರು ಎಕರೆ ಅರಣ್ಯ ಪ್ರದೇಶ ಬಂಡೀಪುರದಲ್ಲಿ ಕಾಳ್ಗಿಚ್ಚಿಗೆ ಬೂದಿಯಾಗಿದೆ. ಹಲವು ಜೀವ ಸಂಕುಲಗಳು ಅಪಾಯಕ್ಕೆ ಸಿಲುಕಿವೆ. ಆದರೆ ನಮಗೆ ಕಾರುಗಳು ಕಾಣುತ್ತಿವೆ ಹೊರತು, ಹಲವು ಜೀವ ಸಂಕುಲಗಳನ್ನು ಪೋಷಿಸುತ್ತಾ ನಮ್ಮನ್ನು ಪೊರೆಯುತ್ತಿರುವ ಕಾಡುಗಳು ಕಾಣುತ್ತಿಲ್ಲ. ಕಾಡನ್ನು ಉಳಿಸಿ ಬೆಳೆಸಿ ,ವನ್ಯಜೀವಿಗಳನ್ನು ಸಂರಕ್ಷಿಸಿ ಯಾರದ್ದೋ ನಿರ್ಲಕ್ಷವೊ,ಕಿಡಿಗೇಡಿಗಳ ಕೃತ್ಯವೋ ಒಟ್ಟಿನಲ್ಲಿ ಮುಗ್ಧ ಪ್ರಾಣಿಗಳು ಪಕ್ಷಿಗಳು ಮರಗಿಡಗಳು ಬೆಂಕಿಗಾಹುತಿ ಆಗಿವೆ. ಇದೇ ಪರಿಸ್ಥಿತಿ ಮನುಷ್ಯರಿಗೆ ಆಗುತ್ತಿದ್ದರೆ ಎಲ್ಲರೂ ನ್ಯಾಯ ಬೇಕು ಅಂತ ರಸ್ತೆಗಿಳಿಯುತಿದ್ದರು. ಆದರೆ ಮೂಕ […]
ಪದವೀಧರ ಯುವಕನ ಹೈನ್ಯೋದ್ಯಮ, ಬದುಕೀಗ ಘಮ ಘಮ: ಉಡುಪಿಯ ಯುವ ಕೃಷಿಕನ ಸಕ್ಸಸ್ ಸ್ಟೋರಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಮುಗಿದ ಬಳಿಕ ಯುವಕರು ಉದ್ಯೋಗ ಅರಸಿ ಮಹಾನಗರಿಯತ್ತ ಮುಖ ಮಾಡೋದು ಸಾಮಾನ್ಯ ,ಆದರೆ ಇಲ್ಲೊಬ್ಬ ಯುವಕ, ಹೈನುಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿನಿಂದ ಹಸುಗಳ ಆರೈಕೆಯಲ್ಲಿಯೇ ತೊಡಗಿಕೊಂಡು ಬದುಕಿಗೊಂದು ದಾರಿ ಕಂಡುಕೊಂಡಿದ್ದಾರೆ. ಈ ಯುವಕನ ಕತೆ ಕೇಳಿ: ಹೈನುಗಾರಿಕೆಯೇ ನನ್ನ ಬದುಕಿಗೆ ದಾರಿಯಾಗಬಲ್ಲದು ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ ಈ ಯುವಕ ಹೈನುಗಾರಿಕೆ ಶುರುಮಾಡಿಯೇ ಬಿಡುತ್ತಾರೆ. ಹೈನುಗಾರಿಕೆ ಕನಸನ್ನು ನನಸು ಮಾಡಿದ ಯುವಕನೇ ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಪ್ರತೀಶ್ ಶೆಟ್ಟಿ . ಕೆಲಸದಲ್ಲಿ […]
ಕಾರ್ಕಳ ಕಡಾರಿಯ ರೈತ ಮಾಡಿದ ಕೈ ಪಂಪು : ತೋಟವೆಲ್ಲಾ ತಂಪು ತಂಪು
ಕಾರ್ಕಳ ತಾಲೂಕಿನ ಪುಟ್ಟದಾದ ಸುಂದರ ಊರು ಕಡಾರಿ. ಎಲ್ಲೆಲ್ಲೂ ಹಸಿರೇ ತುಂಬಿರುವ ಈ ಊರಿನ ಒಂದು ಬದಿಯಲ್ಲಿ ಹರಿಯುವ ಸ್ವರ್ಣ ನದಿ. ನೂರು ಮೀಟರ್ ದೂರದಲ್ಲಿ ಕಡಾರಿ ಸೇತುವೆ, ಅದರ ಕೆಳಭಾಗದಲ್ಲಿ ಸ್ವರ್ಣೆಗೆ ಕಟ್ಟಿದ ಕಿಂಡಿ ಅಣೆಕಟ್ಟು. ಅಲ್ಲೇ ಪಕ್ಕದಲ್ಲಿದೆ ಜಯರಾಮ್ ಪ್ರಭು ಅವರ ಸಣ್ಣ ಅಡಕೆ ತೋಟ, ಹಾಗೂ ಮನೆ. ಅವರ ತಮ್ಮ ಜಗದೀಶ್ ಪ್ರಭು ಅವರು ರೈತ ರಾಗಿದ್ದು ಕೈ ಪಂಪು ಆವಿಷ್ಕರಿಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೌದು. ಜಗದೀಶ್ ಪ್ರಭು ಅವರು ತಮ್ಮ […]
ಪ್ರಾಚೀನ ಭತ್ತದ ತಳಿಗೆ ಜೀವ ನೀಡಿದ ಕೃಷಿಕ
ಆ ದಾರಿ ಹೊಕ್ಕರೆ ಎಲ್ಲೆಲ್ಲೂ ತೋಟಗಳ ನೆರಳು, ಆ ನೆರಳಲ್ಲೇ ಸಾಗಿದರೆ ಪಚ್ಚೆ ತೆನೆಯ ಗಾಳಿ ಮೈ ಸೋಕಿ ಮನಸ್ಸಲ್ಲಿ ಅರಳಿಸುವ ಅನುಭವ ವಿಶಿಷ್ಟ. ಒಂದೆಕರೆ ಜಾಗದಲ್ಲಿ ಹರಡಿ ತೊನೆದಾಡುವ ಆ ಗದ್ದೆಯ ತೆನೆಗಳನ್ನು ನೋಡುತ್ತ ನಿಂತರೆ ಮಣ್ಣಿನ ಫಲವತ್ತತೆ, ಮುಂದೆ ಅಕ್ಕಿಯಾಗುವ ಆ ಭತ್ತದ ಪರಿಮಳ ಈಗಲೇ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಪ್ರಾಚೀನ ಬತ್ತದ ತಳಿಯ ಮಹತ್ವ ಅರಿತವರು ಈ ಕಾಲದಲ್ಲಿ ಕಡಿಮೆಯಾದರೂ, ಪ್ರಾಚೀನ ತಳಿಯ ಮಹತ್ವ ಈ ಕಾಲದ ಮಂದಿಗೆ ಈಗೀಗ ಅರಿವಾಗುತ್ತಿರುವುದು ಸುಳ್ಳಲ್ಲ. ಆದರೆ […]