ದೊಡ್ಡ ಪತ್ರೆಯ ದೊಡ್ಡಸ್ತಿಕೆ ನಿಮಗೆ ಗೊತ್ತಾ ?: ಶೀತ, ಕೆಮ್ಮಿಗೆ ರಾಮಬಾಣ, ಇದರ ಪೋಡಿ ಸೂಪರ್

ನಮ್ಮ ಮನೆ ಅಂಗಳದಲ್ಲೇ ಬೆಳೆಯಬಹುದಾದ ಜೌಷದೀಯ ಸಸ್ಯಗಳ ಪೈಕಿ ದೊಡ್ಡಪತ್ರೆಗೆ ತನ್ನದೇ ಆದ ದೊಡ್ಡಸ್ತಿಕೆ ಇದೆ. ಮನೆಯ ಅಂಗಳದಲ್ಲಿ ದೊಡ್ಡಪತ್ರೆಯ ಗಿಡವೊಂದಿದ್ದರೆ ಸಣ್ಣ ಪುಟ್ಟ ಕಾಯಿಲೆಗೆಲ್ಲಾ ದೊಡ್ಡಪತ್ರೆ ದೊಡ್ಡ ಪಾತ್ರವಹಿಸುತ್ತದೆ. ದೊಡ್ಡ ಪತ್ರೆಯ ಸಸ್ಯಶಾಸ್ತ್ರೀಯ ಹೆಸರು ಕಾಲಿಯಸ್ ಅರೋಮ್ಯಾಟಿಕಸ್. ಈ ಸಸ್ಯದ ಮೂಲ ಭಾರತ, ಆಗ್ನೇಯ ಏಷ್ಯಾ, ದಪ್ಪ ಮುಸುಡಿಯ ಈ ದೊಡ್ಡ ಪತ್ರೆಯ ಗಿಡ, ಮನೆಯ ನೀರು ಹೋಗುವಲ್ಲಿಯೋ?ಅಂಗಳದ ನೀರಿನ ತೇವಾಂಶ ದಟ್ಟವಾಗಿ ವ್ಯಾಪಿಸುವ ಜಾಗ ಹುಡುಕಿ ಹುಲುಸಾಗಿ ಬೆಳೆಯುತ್ತದೆ.

ಔಷಧೀಯ ಆಗರ:

  • ದಪ್ಪ ಕಾಂಡಗಳಿಂದ ಮೈ ಸೋಕಿ ದಷ್ಟಪುಷ್ಟ ಸಸ್ಯದಂತೆ ಕಂಡರೂ ಇದರ ಕಾಂಡ ತೀರಾ ವೃದು ಸ್ವಭಾವಿ. ಬಟ್ಟಲಿನಾಕಾರದ ಎಲೆಗಳೂ ಅಮೋಫ ಪರಿಮಳವನ್ನು ಸೂಸಿ ಮೃದುವಾಗಿ ಇರುವುದರಿಂದ ಅದರ ರಸ, ಕಫ, ಶೀತ, ನೆಗಡಿ ನಿವಾರಿಸಿ ಬಿಡುವ ನವ ಚೈತನ್ಯ ಶಕ್ತಿ.

  • ಮುಖ್ಯವಾಗಿ ಎದೆಯಲ್ಲಿ ಕಫ ಗಟ್ಟಿಯಾದಾಗಲೆಲ್ಲಾ, ದೊಡ್ಡಪತ್ರೆಯ ಎಲೆಯನ್ನು ಚೆನ್ನಾಗಿ ಬಿಸಿಮಾಡಿ ಆಗ ಉಕ್ಕುವ ಅದರ ರಸವನ್ನು ಜೇನುತುಪ್ಪ,ಕರಿಮೆಣಸಿನ ಹುಡಿಯ ಜತೆ ಬೆರೆಸಿ ಕುಡಿದರೆ ಕಫ,ಹಾಗೂ ಕೆಮ್ಮಿಗೂ ಒಳ್ಳೆಯ ರಾಮಬಾಣ.ಬರೀ ಜೌಷದೀಯ ಗುಣಗಳನ್ನಷ್ಟೇ ಮೈಗೂಡಿಸಿಕೊಂಡಿರುವ ದೊಡ್ಡಪತ್ರೆಗೆ ಅಡುಗೆಕೋಣೆಯಲ್ಲೂ ಪ್ರಾಶಸ್ತ್ಯವಿದೆ.
  • ಈ ಎಲೆಯ ಗೊಜ್ಜು,ತಂಬುಳಿ,ಚಟ್ನಿ ದೇಹಕ್ಕೆ ಒಳ್ಳೆಯ ರಸಪಾಕ. ಕಡ್ಲೆಹಿಟ್ಟಿಗೆ,ಉಪ್ಪು,ನೀರು,ಇಂಗು ಹಾಕಿ. ಕಲಸಿ ಅದಕ್ಕೆ ದೊಡ್ಡಪತ್ರೆಯ ಎಲೆಯನ್ನು ಮುಳುಗಿಸಿ ಎಣ್ಣೆಗೆ ಬಿಟ್ಟರೆ ತಯಾರಾದ ದೊಡ್ಡಪತ್ರೆಯ ಬೊಂಡಾ ಕೂಡ ಬಾಯಿಗೆ ಭರ್ಜರಿ ನೈವೇದ್ಯ.
  • ಇದರ ತಂಬುಳಿಯೂ ದೇಹಕ್ಕೆ ಹಿತ.  

                                                                                         -ಪ್ರಸಾದ್ ಶೆಣೈ