udupixpress
Home Trending ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಮೇ 28 ರೊಳಗೆ ಅರ್ಜಿ ಸಲ್ಲಿಸಿ

ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ: ಮೇ 28 ರೊಳಗೆ ಅರ್ಜಿ ಸಲ್ಲಿಸಿ

ಉಡುಪಿ ಮೇ 15: ಲಾಕ್ ಡಾನ್ ನಿಂದ ನಷ್ಟ ಅನುಭವಿಸಿದ  ಹೂವಿನ ಬೆಳೆಗಾರರಿಗೆ ರೂ.25000.00 ಪ್ರತಿ ಹೇಕ್ಟರಗೆ, ಗರಿಷ್ಟ 1 ಹೇಕ್ಟರ್ ಮಾರ್ಗಸೂಚಿಯಂತೆ ಸರ್ಕಾರ ಪರಿಹಾರ ಘೋಷಿಸಿದ್ದು, 2019-20 ನೇ ಸಾಲಿನ ಬೆಳೆ ಸಮೀಕ್ಷೆ ಆಧಾರದಲ್ಲಿ ಪರಿಹಾರ ಪಾವತಿ ಮಾಡಲಾಗುವುದು.

ರೈತರು ಬೆಳೆದಿರುವ ಬಹು ವಾರ್ಷಿಕ ಪುಷ್ಪ ಬೆಳೆ  2019-20 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ನಮೂದಿದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆಗಳು 2019-20 ನೇ ಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಪಟ್ಟಿಗಳನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ , ಗ್ರಾಮ ಪಂಚಾಯತ್ ಕಛೇರಿ ಹಾಗೂ ತಾಲ್ಲೂಕು ತೋಟಗಾರಿಕೆ ಕಛೇರಿಯ ನಾಮಫಲಕಗಳಲ್ಲಿ ಪ್ರಕಟಿಸಲಾವುದು.

ಸಮೀಕ್ಷೆಯಲ್ಲಿ ಪುಷ್ಪ ಬೆಳೆ ದಾಖಲಾಗದ ರೈತರು ಪಹಣೆ. ಆಧಾರ್ ಪ್ರತಿ. ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ. ಬಾವಚಿತ್ರ ಹಾಗೂ ದೂರವಾಣಿ ಸಂಖ್ಯೆ ವಿವರಗಳನ್ನು ತಾಲ್ಲೂಕು ತೋಟಗಾರಿಕೆ ಕಛೇರಿ ದೊಡ್ಡಣಗುಡ್ಡೆ ಇಲ್ಲಿ ಮೇ 28 ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯವುದು.

ಹೆಚ್ಚಿನ ಮಾಹಿತಿಗಾಗಿ  ಉಡುಪಿ ತಾಲ್ಲೂಕು ತೋಟಗಾರಿಕೆ ಇಲಾಖೆ ದೂರವಾಣಿ ಸಂಖ್ಯೆ 0820-2522837 ಹಾಗೂ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಉಡುಪಿ, 7996394553 ಕಾಪು, 7899239615 ಬ್ರಹ್ಮಾವರ ಮತ್ತು ಕೋಟ 9481834481 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಉಡುಪಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!