ಇಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ. ಮಾ.25ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ಅನ್ನಸಂತರ್ಪಣೆ, ಶ್ರೀ ದುರ್ಗಾದೇವಿ ಸಂಕೀರ್ತನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ‌8 ಗಂಟೆಗೆ ‌ಮನ್ಮಹಾರಥೋತ್ಸವ ನಡೆಯಲಿದೆ. ಹಾಗೂ ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಬಳಗದವರಿಂದ ಚಂಡೆ ವಾದನ ಹಾಗೂ ಸ್ಯಾಕ್ಸ್ ಫೋನ್ ಕಾರ್ಯಕ್ರಮಗಳು ನಡೆಯಲಿವೆ. ಮಾ.26ರಂದು ಬೆಳಗ್ಗೆ 7ಕ್ಕೆ ಕವಟೂದ್ಘಾಟನೆ, ತುಲಾಭಾರ ಸೇವೆ […]

ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಲ್ಪೆ: ಒಂದು ದೇವಸ್ಥಾನದ ಜೀರ್ಣೋದ್ದಾರ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ದೇವರು ಮತ್ತೆ ಆಲಯ ಸೇರುವುದರೊಂದಿಗೆ ಎಲ್ಲರಿಗೂ ಶ್ರೇಯಸ್ಸಾಗುತ್ತದೆ. ಆತನ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಅವರು ಶುಕ್ರವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಧ್ವರ ಪವಿತ್ರ ಕ್ಷೇತ್ರ ವಡಭಾಂಡೇಶ್ವರ ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ […]

ಮಾ.25 ರಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ. ಮಾ. 22ರ ರಾತ್ರಿ 7:30ಕ್ಕೆ ವಿಘ್ನೇಶ್ವರ ಪ್ರಾರ್ಥನೆ ನಡೆಯಲಿದ್ದು, ಮಾ. 23 ರಂದು ಮಧ್ಯಾಹ್ನ ಒಂದಕ್ಕೆ ದಿ|ಪರ್ಕಳ ಗುರುರಾಜ್ ಜೋಯ್ಸರ ಸುಪುತ್ರರಿಂದ ಕಲಶ ಅಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ ಮತ್ತು ದೊಡ್ಡ ರಂಗ ಪೂಜೆ, ಬೂತ ಬಲಿ, ಮಾ. 24ರಂದು ಬೆಳಿಗ್ಗೆ ಆಶ್ಲೇಷ ಬಲಿ, ದುರ್ಗಾ ಹೋಮ […]

ವಿಜೃಂಭಣೆಯ ಪೆರ್ಡೂರು ಜಾತ್ರಾ ಮಹೋತ್ಸವ: ಪ್ರಸನ್ನ ಪೆರ್ಡೂರು ಅವರು ಕ್ಲಿಕ್ಕಿಸಿದ ಸುಂದರವಾದ ಚಿತ್ರಗಳು..

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ರಥೋತ್ಸವ ಮೆರವಣಿಗೆಯು ಮಾ.16 ರಂದು ಸಾಯಂಕಾಲ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರು ಅವರು ಶ್ರೀಮನ್ಮಹಾರಥೋತ್ಸವ, ಹಚ್ಚಡ ಸೇವೆ, ಸುಡುಮದ್ದು ಪ್ರದರ್ಶನ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದ, ನಾಟಕ ಹಾಗೂ ಯಕ್ಷಗಾನದ ಸುಂದರವಾದ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.

ನಾಳೆ ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ: ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ

ಉಡುಪಿ, ಮಾರ್ಚ್ 15: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ರಾ.ಹೆ.169(ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಮಾರ್ಚ್ 16 ರಂದು ಸಂಜೆ 4 ಗಂಟೆಯಿ೦ದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ. ರಾ.ಹೆ.169(ಎ)ರಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳಿಗೆ ಹಿರಿಯಡ್ಕ ಜಂಕ್ಷನ್ ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ-ಹರಿಖಂಡಿಗೆ-ಬೈರ೦ಪಳ್ಳಿ-ಪೆರ್ಡೂರು-ಮೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ ಬಜೆ, ಕುಕ್ಕೆಹಳ್ಳಿ, ಪೇತ್ರಿ ಮಾರ್ಗವಾಗಿ ಹೆಬ್ರಿ […]