ಇಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ.

ಮಾ.25ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ಅನ್ನಸಂತರ್ಪಣೆ, ಶ್ರೀ ದುರ್ಗಾದೇವಿ ಸಂಕೀರ್ತನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ‌8 ಗಂಟೆಗೆ ‌ಮನ್ಮಹಾರಥೋತ್ಸವ ನಡೆಯಲಿದೆ. ಹಾಗೂ ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಬಳಗದವರಿಂದ ಚಂಡೆ ವಾದನ ಹಾಗೂ ಸ್ಯಾಕ್ಸ್ ಫೋನ್ ಕಾರ್ಯಕ್ರಮಗಳು ನಡೆಯಲಿವೆ.

ಮಾ.26ರಂದು ಬೆಳಗ್ಗೆ 7ಕ್ಕೆ ಕವಟೂದ್ಘಾಟನೆ, ತುಲಾಭಾರ ಸೇವೆ 12:30 ಕ್ಕೆ ಪಂಚನ ಮೆರವಣಿಗೆ ,ಕೋಲ, ಯಾಗ ಶಾಲೆಯಲ್ಲಿ ಪೂರ್ಣಹುತಿ, ಮಾ.27ಕ್ಕೆ ಮಹಾ ಮಹಾಪೂಜೆ ರಾತ್ರಿ ಮಾರಿ ನಡೆಯಲಿದೆ.