ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀಗಳಿಂದ 48 ದಿನಗಳ ಮಂಡಲೋತ್ಸವ ಆರಂಭ

ಉಡುಪಿ: ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ‌ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದಿನಿಂದ 48 ದಿನಗಳ ಮಂಡಲೋತ್ಸವ ಆರಂಭಗೊಂಡಿದೆ. ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ, ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ, ವಿಷ್ಣುಮೂರ್ತಿ ಆಚಾರ್ಯ, ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಸದವರ ನೇತೃತ್ವದಲ್ಲಿ ವಿವಿಧ ಹೋಮಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು.

ಐತಿಹಾಸಿಕ ಕೀಳಂಜೆ ದೇವಸ್ಥಾನ: ಮುಷ್ಟಿ ಕಾಣಿಕೆ ಸಮರ್ಪಣೆ ಸಂಪನ್ನ

ಉಡುಪಿ: ಪುರಾತನ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ಜ.22 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪ ಸಮರ್ಪಣೆ, ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ ಇತರ ಧಾರ್ಮಿಕ ವಿಧಿಗಳೊಂದಿಗೆ ಪ್ರಾರಂಭಗೊಂಡಿತು. ಅಂದು ಜೈನ ಮುನಿ ಗಾಲವ […]

ಅಯೋಧ್ಯೆಯಲ್ಲಿ ರಾಮ‌ಲಲ್ಲಾ ಪ್ರತಿಷ್ಠೆ: ಕೊಡವೂರಿನಲ್ಲಿ ದೀಪೋತ್ಸವ

ಕೊಡವೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಧಾನ ಅರ್ಚಕ ಪ್ರಸಾದ್ ಭಟ್ ಅವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಸದಸ್ಯರಾದ ಸುಧೀರ್ ರಾವ್ ಕೊಡವೂರು, ಪೂರ್ಣಿಮಾ ಜನಾರ್ದನ್ ಗೋವಿಂದ ಐತಾಳ್, ಉಮೇಶ್ ರಾವ್, ವಾಸುದೇವ ಉಪಾಧ್ಯಾಯ, ಕಾಳು ಸೇರಿಗಾರ ಮತ್ತು ಊರಿನ ಹತ್ತು ಸಮಸ್ತರು ದೀಪವನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದರು.

ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ: ಸಚಿವ ರಾಮಲಿಂಗಾ ರೆಡ್ಡಿ

ಉಡುಪಿ: ವಡಭಾಂಡೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಮಲೈಯಲ್ಲಿರುವ ಪುರಾಣ ಪ್ರಸಿದ್ಧ ವಡಭಾಂಡೇಶ್ವರ ಬಲರಾಮನ ದೇಗುಲಕ್ಕೆ ಭಾನುವಾರ ಭೇಟಿ ನೀಡಿ, ಜೀರ್ಣೋದ್ಧಾರ ಕಾಮಗಾರಿ ಅವಲೋಕಿಸಿ ಮಾತನಾಡಿದರು. ಆಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾ ಮಹೋತ್ಸವದ ಹಿನ್ನೆಯಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ 34 ಸಾವಿರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು 15 ದಿನದ ಹಿಂದೆಯೇ ಆದೇಶ ಹೊರಡಿಸಿದ್ದೇನೆ. ರಾಜ್ಯ ಸರ್ಕಾರ ಸಿ ದರ್ಜೆಯ ಎಲ್ಲ ದೇಗುಲವನ್ನು ಅಭಿವೃದ್ಧಿ ಮಾಡಬೇಕಿದೆ. […]

ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆ: ನಾಳೆ ಉಡುಪಿಯಲ್ಲಿ ಮೂರು ಬಸ್ಸುಗಳಿಂದ ಉಚಿತ ಸೇವೆ

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸಹ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಹಾಗೆಯೇ ನಾಳೆ ಉಡುಪಿಯಿಂದ ಹೆಬ್ರಿಗೆ ತೆರಳುವ ಎಸ್ ಆರ್ ಎಮ್, ಎಸ್ ಡಿ ಎಮ್, ಮುಟ್ಲುಪಾಡಿಯಿಂದ ಉಡುಪಿಗೆ ತೆರಳುವ ಎಸ್ ಎಮ್ ಎಮ್ ಎಸ್ ಬಸ್ಸಿನವರು ದಿನವಿಡೀ ಉಚಿತ ಪ್ರಯಾಣವನ್ನು ನಾಗರಿಕರಿಗೆ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.