ಮಾ.25 ರಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ.

ಮಾ. 22ರ ರಾತ್ರಿ 7:30ಕ್ಕೆ ವಿಘ್ನೇಶ್ವರ ಪ್ರಾರ್ಥನೆ ನಡೆಯಲಿದ್ದು, ಮಾ. 23 ರಂದು ಮಧ್ಯಾಹ್ನ ಒಂದಕ್ಕೆ ದಿ|ಪರ್ಕಳ ಗುರುರಾಜ್ ಜೋಯ್ಸರ ಸುಪುತ್ರರಿಂದ ಕಲಶ ಅಭಿಷೇಕ ನಡೆಯಲಿದೆ.

ಅದೇ ದಿನ ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ ಮತ್ತು ದೊಡ್ಡ ರಂಗ ಪೂಜೆ, ಬೂತ ಬಲಿ, ಮಾ. 24ರಂದು ಬೆಳಿಗ್ಗೆ ಆಶ್ಲೇಷ ಬಲಿ, ದುರ್ಗಾ ಹೋಮ ಬೋಳ್ವಿ ಕಟ್ಟೆ ಪೂಜೆ, ಅರ್ಜುನ ಯುವಕ ಮಂಡಲದ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿವೆ.

25ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ಅನ್ನಸಂತರ್ಪಣೆ, ಶ್ರೀ ದುರ್ಗಾದೇವಿ ಸಂಕೀರ್ತನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ‌8 ಗಂಟೆಗೆ ‌ಮನ್ಮಹಾರಥೋತ್ಸವ ನಡೆಯಲಿದೆ. ಹಾಗೂ ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಬಳಗದವರಿಂದ ಚಂಡೆ ವಾದನ ಹಾಗೂ ಸ್ಯಾಕ್ಸ್ ಫೋನ್ ಕಾರ್ಯಕ್ರಮಗಳು ನಡೆಯಲಿವೆ.

ಮಾ.26ರಂದು ಬೆಳಗ್ಗೆ 7ಕ್ಕೆ ಕವಟೂದ್ಘಾಟನೆ, ತುಲಾಭಾರ ಸೇವೆ 12:30 ಕ್ಕೆ ಪಂಚನ ಮೆರವಣಿಗೆ ,ಕೋಲ, ಯಾಗ ಶಾಲೆಯಲ್ಲಿ ಪೂರ್ಣಹುತಿ, ಮಾ.27ಕ್ಕೆ ಮಹಾ ಮಹಾಪೂಜೆ ರಾತ್ರಿ ಮಾರಿ ನಡೆಯಲಿದೆ.