ಮೇ.17ರಿಂದ 24: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರದ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇದೇ ಬರುವ ಮೇ.17ರಿಂದ 24ರ ವರೆಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19ರಂದು ಮಧ್ಯಾಹ್ನ 3.30ಕ್ಕೆ ಅಂಬಲಪಾಡಿ ದೇವಸಾನದಿಂದ ಹೊರಕಾಣಿಕೆ ಮೆರವಣಿಗೆಗೆ ಆರಂಭಗೊಳ್ಳಲಿದೆ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ […]

ಜಗದ್ಗುರು ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮ

ಉಡುಪಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ, ಪಡುಕುತ್ಯಾರು ಇದರ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023 ಅನ್ನು ಮೇ 6 ರಿಂದ 14 ರ ವರೆಗೆ ಶ್ರೀ ಸರಸ್ವತೀ ಸತ್ಸಂಗ ಮುಂದಿರ ಪಡುಕುತ್ಯಾರು ಇಲ್ಲಿ ಆಯೋಜಿಸಲಾಗಿದೆ. ಶಿಬಿರ ಉದ್ಘಾಟನೆಯು ಮೇ 7 ರಂದು ಜರುಗಿದ್ದು,ಸಮಾರೋಪವು ಮೇ 14 ರಂದು ಜಗದ್ಗುರುಗಳ ಪಟ್ಟಾಭಿಷೇಕ ವರ್ಧಂತಿ ಸಮಾರಂಭದೊಂದಿಗೆ ಸಂಪನ್ನವಾಗಲಿದೆ. ವಸಂತ ವೇದ […]

ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023..!!

ಉಡುಪಿ:ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ, ಪಡುಕುತ್ಯಾರು ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023 ದಿನಾಂಕ: 2023 ಮೇ 6 ರಿಂದ 14ರ ತನಕ ಸ್ಥಳ: ಶ್ರೀ ಸರಸ್ವತೀ ಸತ್ಸಂಗ ಮುಂದಿರ ಪಡುಕುತ್ಯಾರು ಶಿಬಿರ ಉದ್ಘಾಟನೆ: ಮೇ 7 ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಶಿಬಿರ ಸಮಾರೋಪ: ಮೇ 14 ರ ಜಗದ್ಗುರುಗಳ ಪಟ್ಟಾಭಿಷೇಕ ವರ್ಧಂತಿ ವಸಂತ ವೇದ ಶಿಬಿರದ […]

ಶ್ರೀ ಸತ್ಯದೆಕ್ಕಿ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ಬ್ರಹ್ಮ ಬೈದರ್ಕಳ ಹಾಗೂ ಮಾಯಂದಾಲೆ ದೇವಿ ಜೋಡುಗರಡಿಯಲ್ಲಿ ಮೇ 3 ರಂದು ಪುನರ್ ಪ್ರತಿಷ್ಠೆ, ನೂತನ ಧ್ವಜಸ್ಥಂಭ ಪ್ರತಿಷ್ಠೆ

ಕಾರ್ಕಳ : ನೂತನ ಶಿಲಾಮಯ ಗರ್ಭಗುಡಿಗಳಲ್ಲಿ ಶ್ರೀ ಕ್ಷೇತ್ರದ ಧರ್ಮದೈವಗಳ ಪುನರ್ ಪ್ರತಿಷ್ಠೆ, ನೂತನ ಧ್ವಜಸ್ತಂಭ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಧಾರ್ಮಿಕ ಸಭೆ ಹಾಗೂ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಎ. 29 ರಿಂದ ಎ.8ರವರಗೆ ನೂತನವಾಗಿ ನಿರ್ಮಿಸಿರುವ ಶಿಲಾಮಯ ಗರ್ಭಗುಡಿಗಳಲ್ಲಿ ಎಡಪದವು ಬ್ರಹ್ಮಶ್ರೀ ಮುರುಲೀಧರ ತಂತ್ರಿಗಳ ಮಾರ್ಗದರ್ಶನದಲ್ಲಿ ಗ್ರಾಮದ ಪ್ರಧಾನ ಅಸ್ರಣ್ಣರಾದ ಸಾಣೂರು ದೇಂದಬೆಟ್ಟು ವೇದಮೂರ್ತಿ ಶ್ರೀ ಶ್ರೀರಾಮ ಭಟ್ರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಧರ್ಮದೈವಗಳನ್ನು ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ ಜರಗಲಿರುವುದು. ಆ ಪ್ರಯುಕ್ತ ಶ್ರೀ […]

ದೇಶಾದ್ಯಂತ ಈದ್- ಉಲ್-ಫಿತ್ರ್ ಆಚರಣೆ

ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ    ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್  ಸೂರ್ಯಾಸ್ತದ […]