ಮೇ.17ರಿಂದ 24: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರದ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಇದೇ ಬರುವ ಮೇ.17ರಿಂದ 24ರ ವರೆಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು.

ಇಂದು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ.19ರಂದು ಮಧ್ಯಾಹ್ನ 3.30ಕ್ಕೆ ಅಂಬಲಪಾಡಿ ದೇವಸಾನದಿಂದ ಹೊರಕಾಣಿಕೆ ಮೆರವಣಿಗೆಗೆ ಆರಂಭಗೊಳ್ಳಲಿದೆ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಮೆರವಣಿಗೆಯು ಕಿದಿಯೂರು, ಕಡೆಕಾರು, ಕುತ್ಪಾಡಿ, ಸಂಪಿಗೆನಗರ, ಗುಡ್ಡೆಅಂಗಡಿಯಾಗಿ ಶಂಭುಕಲ್ಲು ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಮೂಲಕ ಮಠದಂಗಡಿ ದೇವಸ್ಥಾನ ತಲುಪಲಿದೆ ಎಂದರು.

ಮೇ.21ರಂದು ಬೆಳಿಗ್ಗೆ 9.15ಕ್ಕೆ ಸಿದ್ಧಿ ವಿನಾಯಕ ದೇವರಿಗೆ ಬ್ರಹ್ಮಕುಂಭಾಭಿಷೇಕ, ಬಳಿಕ ಮಹಾಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ಜರಗಲಿದೆ. ಮೇ. 23ರ ಬೆಳಿಗ್ಗೆ 5.38ಕ್ಕೆ ರಾಶಿಪೂಜೆ ಮಹೋತ್ಸವವು ಆರಂಭಗೊಂಡು ಮೇ. 24ರ ಬೆಳ್ಳಿಗೆ 5.34ಕ್ಕೆ ಸಮಾಪ್ತಿಗೊಳ್ಳಲಿದೆ. ಈ ಮಧ್ಯೆ ಅಹೋ ರಾತ್ರಿ ಅಖಂಡ ಭಜನೆ ಹಾಗೂ ನಿರಂತರ ಊಟ- ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.