ಕಿನ್ನಿಮೂಲ್ಕಿ ಕನ್ನರ್ಪಾಡಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ

ಉಡುಪಿ: ಕಿನ್ನಿಮೂಲ್ಕಿ ಕನ್ನರ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಗಣೇಶೋತ್ಸವವು ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಿತು. ಸೆ. 24ರಂದು ಗಣೇಶನ ವಿಸರ್ಜನಾ ಮೆರವಣಿಗೆಯ ಶೋಭಾ ಯಾತ್ರೆಯು ವಿವಿಧ ವೇಷಭೂಷಣ, ವೇದ ಘೋಷಗಳೊಂದಿಗೆ ಫಯರ್ ಸ್ಟೇಷನ್ ರಸ್ತೆ, ಅಜ್ಜರಕಾಡು ಪಾರ್ಕ್, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಕಿನ್ನಿಮುಲ್ಕಿ ಮುಖ್ಯ ರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರದಿಂದ ಮೂಲಕ ಸಾಗಿ ಬಂದು […]

ಅ.31ರವರೆಗೆ ವಿಸ್ತರಣೆ: ಫಾರ್ಮ್ 10ಬಿ, 10 ಬಿಬಿ, ಐಟಿಆರ್ -7 ಸಲ್ಲಿಕೆ ಗಡುವು

ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಸೋಮವಾರ (ಸೆಪ್ಟೆಂಬರ್ 18) 2022-23ರ ಹಣಕಾಸು ವರ್ಷಕ್ಕೆ ಫಾರ್ಮ್ 10 ಬಿ ಮತ್ತು ಫಾರ್ಮ್ 10 ಬಿಬಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಿದೆ. ಈ ಫಾರ್ಮ್​ಗಳು ಮೂಲತಃ ಸೆಪ್ಟೆಂಬರ್ 30, 2023 ರಂದೇ ಬರಬೇಕಿದ್ದವು. ಫಾರ್ಮ್ 10 ಬಿ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಟ್ರಸ್ಟ್​ಗಳಿಗೆ ಅನ್ವಯಿಸುತ್ತದೆ. ಇನ್ನು ಫಾರ್ಮ್ 10 ಬಿಬಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.ಫಾರ್ಮ್​ 10 ಬಿ ಮತ್ತು […]

ಶ್ರೀಚಕ್ರ ಪೀಠ ಸುರಪೋಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ವೈಭವದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ ಸಂಪನ್ನ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರ ಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಶ್ರಾವಣ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಪೂಜೆಯ ಅಂಗವಾಗಿ ಶ್ರೀ ದುರ್ಗಾ ಆದಿಶಕ್ತಿ ದೇವಿ ಹಾಗೂ ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನವನ್ನು ಕನ್ಯಾಕುಮಾರಿಯಿಂದ ವಿಶೇಷವಾಗಿ ತರಿಸಲಾಗಿದ್ದ ತಾವರೆಯ ಹೂವಿನಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು. […]