ಜಗದ್ಗುರು ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮ

ಉಡುಪಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ, ಪಡುಕುತ್ಯಾರು ಇದರ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ವಸಂತ ವೇದ ಶಿಬಿರ 2023 ಅನ್ನು ಮೇ 6 ರಿಂದ 14 ರ ವರೆಗೆ ಶ್ರೀ ಸರಸ್ವತೀ ಸತ್ಸಂಗ ಮುಂದಿರ ಪಡುಕುತ್ಯಾರು ಇಲ್ಲಿ ಆಯೋಜಿಸಲಾಗಿದೆ.

ಶಿಬಿರ ಉದ್ಘಾಟನೆಯು ಮೇ 7 ರಂದು ಜರುಗಿದ್ದು,ಸಮಾರೋಪವು ಮೇ 14 ರಂದು ಜಗದ್ಗುರುಗಳ ಪಟ್ಟಾಭಿಷೇಕ ವರ್ಧಂತಿ ಸಮಾರಂಭದೊಂದಿಗೆ ಸಂಪನ್ನವಾಗಲಿದೆ.

ವಸಂತ ವೇದ ಶಿಬಿರದ ಪ್ರಮುಖ ಪಾಠ:

ಸಂಧ್ಯಾವಂದನೆ ವಿಧಿವಿಧಾನಗಳು, ಹೆಚ್ಚುವರಿಯಾಗಿ ದೇವತಾ ಸೂತ್ರಗಳು, ನಮ್ಮ ಸಂಸ್ಕೃತಿಯ ಪರಿಚಯ, ಆಚರಣೆಗಳು, ಆಟೋಟಗಳು, ವೃತ್ತಿಪರ ಚಟುವಟಿಕೆಗಳು, ಕಿರು ಪ್ರವಾಸ ಸೇರಿದಂತೆ ದಿನಂಪ್ರತಿ ಅಗತ್ಯವಿರುವ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶಿಬಿರ ಸಂಯೋಜಕ ಐ. ಲೋಲಾಕ್ಷ ಶರ್ಮ ಕಟಪಾಡಿ ಇವರನ್ನು ಸಂಪರ್ಕಿಸಬಹುದು.

ಕರೆ: 9740663327

ಶಿಬಿರ ನೊಂದಣಿ: 99640 72303, 9945492976

ಶಿಬಿರದ ನಿರ್ವಹಣೆ: ಶ್ರೀ ನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳು

ಶಿಬಿರದ ನೇತೃತ್ವ: ಮಹಾಸಂಸ್ಥಾನದ ಆನೆಗುಂದಿ ಪ್ರತಿಷ್ಠಾನ, ಆನೆಗುಂದಿ ಗುರು ಸೇವಾ ಪರಿಷತ್ ಕೇಂದ್ರ ಸಮಿತಿ, ಅಸೆಟ್, ಶ್ರೀ ಸರಸ್ವತೀ ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಶ್ರೀ ಸರಸ್ವತೀ ಮಾತೃ ಮಂಡಳಿ.

ಸರ್ವರ ಸಂಪೂರ್ಣ ಸಹಾಯ ಸಹಕಾರಗಳನ್ನು ಬಯಸುವವರು ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ ಅಧ್ಯಕ್ಷರು, ಲೋಕೇಶ್ ಎಂ. ಬಿ. ಆಚಾರ್ ಕಂಬಾರ್

ಪ್ರಧಾನ ಕಾರ್ಯದರ್ಶಿ 9947360144

ಅರವಿಂದ ವೈ. ಆಚಾರ್ಯ ಬೆಳುವಾಯಿ

ಕೋಶಾಧಿಕಾರಿ 9880599125

ಪದಾಧಿಕಾರಿಗಳು, ವಿಶ್ವಸ್ಥ ಮಂಡಳಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ, ಕಟಪಾಡಿ, ಪಡುಕುತ್ಯಾರು