ದೇಶಾದ್ಯಂತ ಈದ್- ಉಲ್-ಫಿತ್ರ್ ಆಚರಣೆ: ನಾಳೆ ಕರಾವಳಿ ಕರ್ನಾಟಕದಲ್ಲಿ ಪ್ರಥಮ ಚಂದ್ರದರ್ಶನ

ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್  […]

ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಬೃಹತ್ ಶೋಭಾಯಾತ್ರೆ

ಅಜೆಕಾರು: ಕಾರ್ಕಳ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಅದ್ದೂರಿ ಶೋಭಾಯಾತ್ರೆ ಏಪ್ರಿಲ್16 ರಂದು ಭಾನುವಾರ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ನೂತನ ರಥ ಸಮರ್ಪಣೆ ಶೋಭಾಯಾತ್ರೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಜಿ.ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟಿನಿ, ಜಯಕರ ಶೆಟ್ಟಿ, ಸುಜಯ ಶೆಟ್ಟಿ, ಪ್ರಶಾಂತ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು. […]

ಇಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 9 ರಿಂದ ವರ್ಷಾವಧಿ ಉತ್ಸವ ಮೊದಲ್ಗೊಂಡು ಎ. 14ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.12ರಂದು ದೇಗುಲದಲ್ಲಿ ಶ್ರೀ ಮನ್ಮಹಾರಥೋತ್ಸವ ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಎ. 12 ರಂದು ಶ್ರೀ ಮನ್ಮಹಾರಥೋತ್ಸವ. ಎ. 13 ರಂದು ಚೂರ್ಣೋತ್ಸವ ಹಾಗೂ ತುಲಾಭಾರ ಸೇವೆ, ಎ. 14 ರಂದು ಅವಭೃತ, ಮೃಗಯಾ ವಿಹಾರ, ಪೂರ್ಣಾಹುತಿ, ಧ್ವಜಾರೋಹಣ, ಕುಂಭಾಭಿಷೇಕ ಸಹಿತ […]

ಎ.12 ರಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ

ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಎ. 9 ರಿಂದ ವರ್ಷಾವಧಿ ಉತ್ಸವ ಮೊದಲ್ಗೊಂಡು ಎ. 14ರ ತನಕ ವಿವಿಧ ವಿಧಿ ವಿಧಾನಗಳ ಮೂಲಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.12ರಂದು ದೇಗುಲದಲ್ಲಿ ಶ್ರೀ ಮನ್ಮಹಾರಥೋತ್ಸವ ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಶ್ರೀ ಮನ್ಮಹಾರಥೋತ್ಸವ ಅಂಗವಾಗಿ ಎ. 10 ರಂದು ಸಿಂಹವಾಹನೋತ್ಸವ, ಎ. 11 ರಂದು ಪುಷ್ಪಕವಾಹನೋತ್ಸವ, ಎ. 12 ರಂದು ಶ್ರೀ ಮನ್ಮಹಾರಥೋತ್ಸವ. ಎ. 13 ರಂದು ಚೂರ್ಣೋತ್ಸವ ಹಾಗೂ ತುಲಾಭಾರ […]

ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ, ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಸಂಪನ್ನ

ಉಡುಪಿ: ಅಂಬಾಗಿಲು ಶ್ರೀ ವೀರಾಂಜನೇಯ ಗುಡಿ ಹಾಗೂ ಶ್ರೀ ಜನತಾ ವ್ಯಾಯಾಮ ಶಾಲೆಯ 61ನೇ ವರ್ಷದ ಹನುಮಜ್ಜಯಂತಿ ಮಹೋತ್ಸವ ಹಾಗೂ ದ್ವಿತೀಯ ವರ್ಧಂತ್ಯೋತ್ಸವ ಪುತ್ತೂರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಗುರುವಾರ ನಡೆಯಿತು. ನವಕಲಾ ಸಾನಿಧ್ಯ ಹೋಮ, ವಾಯುಸ್ತುತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಭಜನ ಸಂಕೀರ್ತನೆ, ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಜರಗಿತು. ಸಂಸ್ಥೆಯ ಅಧ್ಯಕ್ಷ ಜಗದೀಶ ಕೋಟ್ಯಾನ್, ಮುಖ್ಯ ಶಿಕ್ಷಕ ನೋಣಯ್ಯ ಮಾಸ್ತರ್, ಶಿಕ್ಷಕ ಸಿರಿಲ್ ನೊರೊನ್ಹಾ, ಕೌರವ ಸಲಹೆಗಾರ ಕುಡ್ಟ […]