ಮಂಗಳೂರಿಗೆ ಬರುತ್ತಿದ್ದ ಸೌದಿಯ ತೈಲ ಹಡಗಿನ ಮೇಲೆ ಡ್ರೋನ್ ದಾಳಿ

ಲಂಡನ್: ಸೌದಿ ಆರೇಬಿಯದ ಬಂದರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ತೈಲ ಟ್ಯಾಂಕರ್ ಹಡಗೊಂದರ ಮೇಲೆ ಗುಜರಾತ್‌ನ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಡ್ರೋನ್ ದಾಳಿ ನಡೆದಿದೆ. ಸ್ಫೋಟದಿಂದಾಗಿ ಹಡಗಿಗೆ ಬೆಂಕಿ ಹತ್ತಿಕೊಂಡಿದ್ದು, ಯಾವುದೇ ಸಾವುನೊವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಗುಜರಾತ್‌ನ ವೆರಾವಲ್ ನಗರದ ನೈಋತ್ಯಕ್ಕಿರುವ ಅರಬ್ಬಿ ಸಮುದ್ರದಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ವಾಣಿಜ್ಯ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದ್ದು ಹಡಗಿಗೆ ಸ್ವಲ್ಪಹಾನಿಯಾಗಿದೆ ಎಂದು ಎರಡು ಸಮುದ್ರಯಾನ ಸಂಸ್ಥೆಗಳು ಶನಿವಾರ ವರದಿ ಮಾಡಿವೆ. ಲಿಬಿಯಾ ಧ್ವಜ ಹೊಂದಿದ್ದ ಈ ತೈಲ ಟ್ಯಾಂಕರ್ […]

ಗಾರ್ಟ್ನರ್ ಸಮೀಕ್ಷೆಯ ಪ್ರಕಾರ ಸಾಮಾಜಿಕ ಮಾಧ್ಯಮ ತೊರೆಯಲಿದ್ದಾರೆ 50% ಕ್ಕಿಂತ ಹೆಚ್ಚು ಬಳಕೆದಾರರು

ನವದೆಹಲಿ: ಗಾರ್ಟ್ನರ್ ಸಮೀಕ್ಷೆಯ ಪ್ರಕಾರ, 53 ಪ್ರತಿಶತ ಗ್ರಾಹಕರು ಹಿಂದಿನ ವರ್ಷ ಅಥವಾ ಐದು ವರ್ಷಗಳ ಹಿಂದಿನ ಸಾಮಾಜಿಕ ಮಾಧ್ಯಮದ ಪ್ರಸ್ತುತ ಸ್ಥಿತಿಯು ಕ್ಷೀಣಿಸಿದೆ. ತಪ್ಪು ಮಾಹಿತಿಯ ಹರಡುವಿಕೆ, ದುರ್ಬಳಕೆ ಮೊದಲಾದ ಕಾರಣಗಳಿಂದ 2025 ರ ವೇಳೆಗೆ ಶೇಕಡ 50 ಕ್ಕಿಂತ ಹೆಚ್ಚು ಗ್ರಾಹಕರು ಸಾಮಾಜಿಕ ಮಾಧ್ಯಮದೊಂದಿಗೆ ತಮ್ಮ ಸಂವಹನವನ್ನು ತ್ಯಜಿಸುವ ಅಥವಾ ಗಮನಾರ್ಹವಾಗಿ ಮಿತಿಗೊಳಿಸಲಿದ್ದಾರೆ. ಸಾಮಾಜಿಕ ಮಾಧ್ಯಮವು ಡಿಜಿಟಲ್ ಮಾರ್ಕೆಟಿಂಗ್‌ಗೆ ಅಗ್ರ ಹೂಡಿಕೆಯ ಚಾನಲ್ ಆಗಿ ಉಳಿದಿದೆ. ಆದರೆ, ಗ್ರಾಹಕರು ತಮ್ಮ ಬಳಕೆಯನ್ನು ಮಿತಿಗೊಳಿಸಲು ಸಕ್ರಿಯವಾಗಿ […]

‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ 2024ರ ಜನವರಿಯಲ್ಲಿ ‘ಬಿಡುಗಡೆ’

ನವದೆಹಲಿ: ಈ ಬಾರಿ ಕೂಡ ಮೋದಿಯೇ ಎನ್‌ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದು, ದೇಶದಲ್ಲಿ ಮೊದಲ ಬಾರಿಗೆ ಮೂರನೇ ಬಾರಿಗೆ ಹ್ಯಾಟ್ರಿಕ್‌ ಪ್ರಧಾನಿಯಾಗುವುದಕ್ಕೆ ನರೇಂದ್ರ ಮೋದಿಯವರು ಕೂಡ ಮುಂದಾಗಿದ್ದಾರೆ. 2024ರ ಜನವರಿಯಲ್ಲಿ ‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ‘ಬಿಡುಗಡೆ’ ಮಾಡಲಿದೆ ಎನ್ನಲಾಗಿದೆ. ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಎಲ್ಲಾ ಸಿದ್ದತೆಯನ್ನು ನಡೆಸಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಿಗೆ ಲೋಕಸಭಾ […]

ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಹಿನ್ನೆಲೆ : ತುರ್ತು ಸಭೆ ಕರೆದ ಡಿಸಿಎಂ

ಕೆಲ ದಿನಗಳ ಹಿಂದಷ್ಟೇ ಕೋಲಾರದ ಮಾಲೂರಿನಲ್ಲಿ ಶಾಲಾ ಮಕ್ಕಳನ್ನು ಶೌಚಗುಂಡಿಗೆ ಇಳಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.ಈ ಪ್ರಕರಣ ಮಾಸುವ ಮುನ್ನವೇ ಇಂದು ಬೆಂಗಳೂರಿನ ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಟಾಯ್ಲೆಟ್ ತೊಳೆಸಲಾಗಿದೆ. ರಾಜ್ಯದಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ತೊಳೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ, ಶಿಕ್ಷಣ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಶೌಚಾಲಯ ತೊಳೆಸುವುದು ಸರಿಯಲ್ಲ. ಈ ಅಧಿಕಾರವನ್ನು ಯಾವ ಶಿಕ್ಷಕರಿಗೂ ನೀಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ವರದಿ […]

ಚಿತ್ರ ಬಿಡುಗಡೆ : ಪೂಂಛ್ ದಾಳಿಯಲ್ಲಿ ಅಮೆರಿಕಾ ನಿರ್ಮಿತ M4 ಬಂದೂಕು ಬಳಕೆ

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಯ ಸಹವರ್ತಿ ಸಂಘಟನೆಯಾದ ಪೀಪಲ್ಸ್ ಆಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಪೂಂಛ್ ನ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.ಜಮ್ಮು ಮತ್ತು ಕಾಶ್ಮೀರ ಪೂಂಛ್ ನಲ್ಲಿ ನಡೆದ ದಾಳಿಯಲ್ಲಿ ಉಗ್ರರು ಅಮೆರಿಕ ನಿರ್ಮಿತ ಎಂ4 ಬಂದೂಕು ಬಳಸಿರುವುದಾಗಿ ಭಾರತೀಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುವಾರ ಪೂಂಛ್ ನಲ್ಲಿ ಮಧ್ಯಾಹ್ನ ನಡೆದ ಈ ಹೊಂಚುದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಭಯೋತ್ಪಾದಕರು ದಾಳಿ ಸ್ಥಳದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ […]