ಮತ್ತೆ ಮ್ಯಾಗಿ ಸಂಕಷ್ಟದಲ್ಲಿ,ಕೀಟ ಪತ್ತೆಪ್ರಕರಣ,FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು!

ಭಾರತದ ಮನೆಮಾತಾಗಿರುವ ಮ್ಯಾಗಿ ನ್ಯೂಡಲ್ಸ್ Maggi Noodles ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮ್ಯಾಗಿಯೊಳಗೆ ಕೀಟ ಪತ್ತೆ, ಎಂದು ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅಲ್ಲದೇ ಮ್ಯಾಗಿ ಮೇಲೆ ಗ್ರಾಹಕರ ದೂರಿನ ಆಧಾರದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ Food Safety and Standards Authority of India, Nestlé Indiaಗೆ ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಮ್ಯಾಗಿ ನೂಡಲ್ಸ್ ಪ್ಯಾಕೆಟ್‌ನಲ್ಲಿ ಕೀಟ ಅಥವಾ ಲಾರ್ವಾ ಪತ್ತೆಯಾಗಿದೆ ಎಂಬ ಆರೋಪವೇ ಈ ಬೆಳವಣಿಗೆಗೆ ಕಾರಣವಾಗಿದೆ. […]

ರೈಲು ತಡವಾಯಿತೆಂದು ಈ ದಂಪತಿಗಳು ಸುಮ್ಮನೇ ಕೂರಲಿಲ್ಲ,ರೈಲ್ವೆಯಿಂದಲೇ ₹69 ಸಾವಿರ ಪರಿಹಾರ ವಸೂಲಿ ಮಾಡಿಯೇ ಬಿಟ್ಟರು!

ಸಾಮಾನ್ಯವಾಗಿ ರೈಲು ತಡವಾದಾಗ ಪ್ರಯಾಣಿಕರು ತೊಂದರೆ ಅನುಭವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ರಾಜಸ್ಥಾನದ ದಂಪತಿಯೊಬ್ಬರು ರೈಲು ವಿಳಂಬದಿಂದ ಉಂಟಾದ ನಷ್ಟಕ್ಕೆ ನ್ಯಾಯಾಲಯದ ಮೊರೆ ಹೋಗಿ ₹69 ಸಾವಿರ ಪರಿಹಾರ ಪಡೆದಿರುವ ಘಟನೆ ಗಮನ ಸೆಳೆದಿದೆ. ರಾಜಸ್ಥಾನದ ಕೋಟಾ ನಿವಾಸಿಗಳಾದ ಅನಿಲ್ ರಾಣಾ ಮತ್ತು ಅನಿತಾ ರಾಣಾ ಅವರು 2017ರ ಡಿಸೆಂಬರ್‌ನಲ್ಲಿ ಕೇರಳ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ದೆಹಲಿಯಿಂದ ತಿರುವನಂತಪುರಕ್ಕೆ ವಿಮಾನ ಪ್ರಯಾಣಕ್ಕಾಗಿ ₹33,929 ವೆಚ್ಚದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ದೆಹಲಿಗೆ ತಲುಪಲು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ […]

ಪಶ್ಚಿಮ ಬಂಗಾಳದಲ್ಲಿ ಭೀಕರ ಅಗ್ನಿ ದುರಂತ, ಈ ಸಲದ ಚುನಾವಣೆಗೆ ಬಳಸಿದ್ದ 4,000 ಇವಿಎಂ ಮತಯಂತ್ರಗಳು ಬೆಂಕಿಗಾಹುತಿ!

ಪಶ್ಚಿಮ ಬಂಗಾಳದ ಕೋಲ್ಕತ್ತ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಇವಿಎಂ (EVM) ಮತಯಂತ್ರಗಳು ಸುಟ್ಟು ಭಸ್ಮವಾಗಿವೆ. ಜೂನ್ 10ರಂದು ಬೆಳಿಗ್ಗೆ ಸುಮಾರು 9:50ಕ್ಕೆ ಅಲಿಪೋರ್ನಲ್ಲಿರುವ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ತಿನ 10 ಮಹಡಿಗಳ ಆಡಳಿತಾತ್ಮಕ ಸರ್ಕಾರಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ 8 ಮತ್ತು 9ನೇ ಮಹಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 4,000 ಇವಿಎಂ ಮತಯಂತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಯಂತ್ರಗಳನ್ನು ಇತ್ತೀಚೆಗೆ ನಡೆದ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ […]

ಆಹಾರ ಪೊಟ್ಟಣಕ್ಕೆ ದಿನಪತ್ರಿಕೆ ಬೇಡವೇ ಬೇಡ ಎಂದ ಆಹಾರ ಪ್ರಾಧಿಕಾರ,ಬಳಸಿದ್ರೆ ಏನಾಗುತ್ತೆ? ಯಾಕೆ ಈ ಎಚ್ಚರಿಕೆ?

ನವದೆಹಲಿ: ಬೀದಿ ಬದಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಪೊಟ್ಟಣ ಮಾಡಿ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಗದದ ಬಳಕೆ ಉತ್ತಮವೆಂದು ಪರಿಗಣಿಸಲಾದರೂ, ಆಹಾರವನ್ನು ದಿನಪತ್ರಿಕೆಗಳಲ್ಲಿ ಸುತ್ತುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಚ್ಚರಿಕೆ ನೀಡಿದೆ. ಆಹಾರ ಪದಾರ್ಥಗಳ ಪ್ಯಾಕಿಂಗ್‌ಗಾಗಿ ದಿನಪತ್ರಿಕೆಗಳನ್ನು ಬಳಸಬಾರದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ ಮುಂಬೈನಲ್ಲಿ ವಡಾ ಪಾವ್ ಸೇರಿದಂತೆ ವಿವಿಧ […]

ಫಿಲಿಪೈನ್ಸ್‌ನಲ್ಲಿ ಭೀಕರ ಭೂಕಂಪ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ತತ್ತರಿಸಿದ ದ್ವೀಪ ರಾಷ್ಟ್ರ!

ಮನಿಲಾ: ದಕ್ಷಿಣ ಫಿಲಿಪೈನ್ಸ್‌ ನ ಮಿಂಡನಾವೊ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸಾವನ್ನಪ್ಪಿದವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.8 ರಷ್ಟು ತೀವ್ರತೆಯ ಈ ವಿನಾಶಕಾರಿ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಭೂಕಂಪದ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದ್ದು, ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿತ್ತು.ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಭೂಕಂಪದಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ವಿಪತ್ತು ನಿರ್ವಹಣಾ ಪಡೆಗಳು ಯುದ್ಧೋಪಾದಿಯಲ್ಲಿ ರಕ್ಷಣಾ […]