ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೆ ಇನ್ನು ಬೀಳುತ್ತೆ ಭಾರೀ ದಂಡ, ಜು.1ರಿಂದ ರೈಲ್ವೆ ಹೊಸ ನಿಯಮ,ಇನ್ನೂ ಯಾವುದಕ್ಕೆಲ್ಲಾ ಬೀಳುತ್ತೆ ಫೈನ್!

ನವದೆಹಲಿ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಜುಲೈ 1ರಿಂದ ಹೊಸ ದಂಡ ನಿಯಮಗಳು ಜಾರಿಗೆ ಬರಲಿದ್ದು, ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ವಿವಿಧ ಉಲ್ಲಂಘನೆಗಳಿಗೆ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಟಿಕೆಟ್ ದರದ ಜೊತೆಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಹೊಸ ನಿಯಮದ ಪ್ರಕಾರ, ಟಿಕೆಟ್ ದರದೊಂದಿಗೆ 500 ರೂ. ದಂಡ ಪಾವತಿಸಬೇಕಾಗುತ್ತದೆ. ಸುಮಾರು 13 ವರ್ಷಗಳ ಬಳಿಕ ರೈಲ್ವೆ ಇಲಾಖೆ […]
NEET ಮರುಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಮುಖ್ಯ ಸಂಗತಿಗಳಿವು, NTA ಮಹತ್ವದ ಎಚ್ಚರಿಕೆ

ನವದೆಹಲಿ: ನೀಟ್ ಯುಜಿ-2026 (NEET UG 2026) ಮರುಪರೀಕ್ಷೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಭ್ಯರ್ಥಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಜೂನ್ 21, 2026ರಂದು ನಡೆಯಲಿರುವ ಮರುಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ (Admit Card) ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ಅಭ್ಯರ್ಥಿಗಳಿಗೆ ಎನ್‌ಟಿಎ ಎಸ್‌ಎಂಎಸ್, ಇ-ಮೇಲ್ ಹಾಗೂ ವಾಟ್ಸಾಪ್ ಮೂಲಕ ಜ್ಞಾಪನೆಗಳನ್ನು ಕಳುಹಿಸಲು ಆರಂಭಿಸಿದೆ. ಇದರ ನಡುವೆಯೇ ನಕಲಿ ಸಂದೇಶಗಳು, ಸೈಬರ್ ವಂಚನೆ ಹಾಗೂ ಹಣ ಕೇಳುವ ಮೋಸಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ […]
ಕಾಣದಂತೆ ಮಾಯವಾದ ಮುಂಗಾರು,ದೇಶದಲ್ಲಿ ಶೇ.41 ರಷ್ಟು ಮಳೆ ಕೊರತೆ! ಮತ್ತೆ ಮುಂಗಾರು ಸುರಿಯುತ್ತಾ?

ನವದೆಹಲಿ: ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಜೂನ್ 4ರಿಂದ ಜೂನ್ 18ರವರೆಗೆ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಐಎಂಡಿ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ 72.2 ಮಿಲಿಮೀಟರ್ ಮಳೆಯ ಬದಲಾಗಿ ಕೇವಲ 42.6 ಮಿಲಿಮೀಟರ್ ಮಳೆಯಷ್ಟೇ ದಾಖಲಾಗಿದೆ. ಪ್ರದೇಶವಾರು ಮಳೆ ವ್ಯತ್ಯಾಸದ ವಿವರಗಳನ್ನು ಗಮನಿಸಿದರೆ, ಮಧ್ಯ ಭಾರತದಲ್ಲಿ ಅತಿಹೆಚ್ಚು ಶೇ.67ರಷ್ಟು ಮಳೆ ಕೊರತೆ ಕಂಡುಬಂದಿದೆ. ಪೂರ್ವ ಮತ್ತು ಈಶಾನ್ಯ […]
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ರೈಲ್ಒನ್’ಆ್ಯಪ್ ನಲ್ಲಿ ಇನ್ನು ಎಲ್ಲಾ ರೈಲುಸೇವೆಗಳು ಲಭ್ಯ, ಟಿಕೆಟ್ ಬುಕ್ಕಿಂಗ್ ನಿಂದ ಹಿಡಿದು ಊಟವನ್ನೂ ಬುಕ್ ಮಾಡಬಹುದು

ನವದೆಹಲಿ: ರೈಲು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ‘ರೈಲ್ಒನ್ (RailOne)’ ಹೆಸರಿನ ಹೊಸ ಸೂಪರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ರೈಲ್ವೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಈ ಆ್ಯಪ್, ಪ್ರಯಾಣಿಕರ ಸಮಯ ಉಳಿಸುವುದರ ಜೊತೆಗೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಗುರಿ ಹೊಂದಿದೆ. ಇಲ್ಲಿಯವರೆಗೆ ರೈಲು ಟಿಕೆಟ್ ಬುಕ್ ಮಾಡಲು, ರೈಲುಗಳ ಲೈವ್ ಸ್ಥಿತಿ ಪರಿಶೀಲಿಸಲು, ಪಿಎನ್ಆರ್ (PNR) ಮಾಹಿತಿ ತಿಳಿದುಕೊಳ್ಳಲು, ಆಹಾರ ಆರ್ಡರ್ ಮಾಡಲು […]
ಎಲ್ ನಿನೊ ಆತಂಕ: ಭಾರತಕ್ಕೆ ತಟ್ಟಲಿದೆಯಾ ತೀವ್ರ ಬರಗಾಲ ಅಥವಾ ಪ್ರವಾಹ?

ನವದೆಹಲಿ: ಜಾಗತಿಕ ಹವಾಮಾನ ವೈಪರೀತ್ಯಗಳಲ್ಲಿ ಒಂದಾದ ಎಲ್ ನಿನೊ (El Niño) ಮತ್ತೆ ಸಕ್ರಿಯವಾಗಿದ್ದು, ಅದರ ಪರಿಣಾಮ ಇಡೀ ವಿಶ್ವದ ಹವಾಮಾನ ವ್ಯವಸ್ಥೆಯ ಮೇಲೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ವಿಶ್ವ ಹವಾಮಾನ ಸಂಸ್ಥೆ (WMO) ನೀಡಿರುವ ಮುನ್ಸೂಚನೆಯ ಪ್ರಕಾರ, ಈ ಬಾರಿ ಎಲ್ ನಿನೊದ ಪರಿಣಾಮಗಳು ಆಗಸ್ಟ್‌ನಿಂದ ನವೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ದೇಶದ ಮಾನ್ಸೂನ್ ಮಳೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಭಾರತದಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ನೈಋತ್ಯ ಮಾನ್ಸೂನ್ […]