‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ 2024ರ ಜನವರಿಯಲ್ಲಿ ‘ಬಿಡುಗಡೆ’

ನವದೆಹಲಿ: ಈ ಬಾರಿ ಕೂಡ ಮೋದಿಯೇ ಎನ್‌ಡಿಎ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿದ್ದು, ದೇಶದಲ್ಲಿ ಮೊದಲ ಬಾರಿಗೆ ಮೂರನೇ ಬಾರಿಗೆ ಹ್ಯಾಟ್ರಿಕ್‌ ಪ್ರಧಾನಿಯಾಗುವುದಕ್ಕೆ ನರೇಂದ್ರ ಮೋದಿಯವರು ಕೂಡ ಮುಂದಾಗಿದ್ದಾರೆ. 2024ರ ಜನವರಿಯಲ್ಲಿ ‘ಲೋಕಸಭಾ ಚುನಾವಣೆ’ಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ‘ಬಿಡುಗಡೆ’ ಮಾಡಲಿದೆ ಎನ್ನಲಾಗಿದೆ. ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೆ ಎಲ್ಲಾ ಸಿದ್ದತೆಯನ್ನು ನಡೆಸಿದೆ.

ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಿಗೆ ಲೋಕಸಭಾ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್‌ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಲೋಕಸಭಾ ಸದ್ಯಸರನ್ನು ಕಳುಹಿಸುವುದಕ್ಕೆ ಮುಂದಾಗಿದೆ. ಸದ್ಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕುವುದು ನಿಶ್ಚಿತವಾಗಿದ್ದು, ಎಪ್ಪತ್ತು ವರ್ಶ ಆದವರಿಗೆ ಈ ಬಾರಿ ಟಿಕೇಟ್‌ ಇಲ್ಲ ಎನ್ನುವುದು ಮೊದಲೇ ಕನ್‌ಫರ್ಮ್‌ ಆಗಿದೆ.