ಕೇವಲ ₹100 ರಿಂದ ಖಾತೆ ಆರಂಭಿಸಿ, ಲಕ್ಷಾಧಿಪತಿಯಾಗುವ ಅವಕಾಶ! ವೈರಲ್ ಆಗ್ತಿದೆ ಪೋಸ್ಟ್ ಆಫೀಸ್ ನ ಈ ಸ್ಕೀಮ್

ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿಡಲು ಬಯಸುವ ಮಧ್ಯಮ ವರ್ಗದವರಿಗೆ ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರದ ಭದ್ರತೆ ದೊರೆಯುವುದರಿಂದ ಮಾರುಕಟ್ಟೆ ಏರಿಳಿತದ ಅಪಾಯ ಇರುವುದಿಲ್ಲ. ಕೇವಲ ₹100ರಿಂದ ಖಾತೆ ಆರಂಭ ದಿನಕ್ಕೆ ₹100 ಉಳಿಸಿದರೆ… ದಿನಕ್ಕೆ ₹100 ಉಳಿಸಿದರೆ ತಿಂಗಳಿಗೆ ₹3000 ಆಗುತ್ತದೆ. ಈ ಮೊತ್ತವನ್ನು ಪ್ರತಿ ತಿಂಗಳು ಪೋಸ್ಟ್ ಆಫೀಸ್ ಆರ್‌ಡಿ ಖಾತೆಗೆ ಜಮಾ ಮಾಡಿದರೆ: 5 ವರ್ಷಗಳಲ್ಲಿ 10 ವರ್ಷಗಳವರೆಗೆ ಮುಂದುವರಿಸಿದರೆ […]

ನೀವು ರೈಲಿನಲ್ಲಿ ಚಲಿಸುತ್ತಿರುವಾಗ ಏನಾದರೂ ಸಮಸ್ಯೆ ಆದ್ರೆ ಹೀಗೆ ಮಾಡಿ…

ಫಟನೆ 1: ಟ್ರೇನ್ ನಲ್ಲಿ ಬಹುದೂರದ ಪಯಣ ಕೈಗೊಂಡಿದ್ದ ದಂಪತಿಗಳು ಸ್ಲೀಪರ್ ಕೋಚ್ ಬುಕ್ ಮಾಡಿ ಸುರಕ್ಷಿತ ಪಯಣ ಮಾಡುವ ಧೈರ್ಯ ಹೊಂದಿದ್ದರು. ಆದರೆ ಯಾವುದೋ ಒಂದು ನಿಲ್ದಾಣದಲ್ಲಿ ಸಾಕಷ್ಟು ಲಗೇಜ್ ಗಳೊಂದಿಗೆ ಹತ್ತಿದ ಐದಾರು ಯುವಕರು ಜಾಗ ಖಾಲಿ ಇದ್ದೆಡೆಯಲ್ಲೆಲ್ಲಾ ಅವರ ಲಗೇಜ್ ತುರುಕಿಸಿ ಇಟ್ಟು ಅರಾಮವಾಗಿ ನಮ್ಮದೇ‌ಬೋಗಿ ಎಂಬಂತೆ ಹರಟೆ ಹೊಡೆಯುತ್ತಾ ನೆಲದ ಮೇಲೆ ಕುಳಿತು ಬಿಟ್ಟರು. ಇತರ ಪ್ರಯಾಣಿಕರ ಪ್ರಶ್ನೆಗಳಿಗೂ ಉತ್ತರಿಸದೇ ತಮ್ಮಷ್ಟಕ್ಕೆ ತಾವಿದ್ದರು. ಯಂಗ್ ಟಿಟಿಇ ಅವರೊಂದಿಗೆ ನಗುತ್ತಲೇ ಮಾತಾಡಿ ಮುಂದಿನ […]

ವಿದೇಶದಿಂದಲೇ ಸಿಸಿಟಿವಿ ನಿಗಾ: ಪೊಲೀಸ್ ಪತಿಯ ‘ಕಳ್ಳಾಟ’ ಬಯಲು ಮಾಡಿತು ಪತ್ನಿಯ ಈ ಮಾಸ್ಟರ್ ಪ್ಲ್ಯಾನ್!

ಚೆನ್ನೈ: ಕಳ್ಳರನ್ನು ಹಿಡಿಯಲು ಪೊಲೀಸರು ಬಲೆ ಬೀಸುವುದು ಸಾಮಾನ್ಯ. ಆದರೆ ತಮಿಳುನಾಡಿನಲ್ಲಿ ಪೊಲೀಸ್ ಪತಿಯೇ ನಡೆಸುತ್ತಿದ್ದ ಗುಪ್ತ ಸಂಬಂಧವನ್ನು ಪತ್ತೆಹಚ್ಚಲು ಪತ್ನಿ ರೂಪಿಸಿದ ಮಾಸ್ಟರ್ ಪ್ಲ್ಯಾನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚೆನ್ನೈನ ಮಾಂಬಲಂ ಸಂಚಾರ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರುಲ್ ಪ್ರಸಾದ್ ಅವರು, ಕಡಲೂರು ಮೂಲದ ಅಭಿನಯ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಅಭಿನಯ ಅವರಿಗೆ ವಿದೇಶದಲ್ಲಿ ಉದ್ಯೋಗ ದೊರೆತಿದ್ದು, ಅಲ್ಲಿಯೇ ನೆಲೆಸಿ ಕೆಲಸ ಮಾಡುತ್ತಿದ್ದರು. […]

ಟ್ರಂಪ್‌-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು.

ವಾಷಿಂಗ್ಟನ್/ರೋಮ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಣ ಮುಸುಕಿನ ಗುದ್ದಾಟದಿಂದಾಗಿ ಉಭಯ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿದೆ.ಸೈದ್ಧಾಂತಿಕವಾಗಿ ಟ್ರಂಪ್‌ ಹಾಗೂ ಮೆಲೊನಿ ಬಲಪಂಥೀಯ ಹಾಗೂ ರಾಷ್ಟ್ರೀಯತಾವಾದಿ ನಾಯಕರಾಗಿದ್ದರೂ ಇತ್ತೀಚಿನ ಭೌಗೋಳಿಕ ರಾಜಕೀಯ ವಿದ್ಯಮಾನಗಳು ಅಮೆರಿಕ ಹಾಗೂ ಇಟಲಿ ನಡುವಣ ಸಂಬಂಧ ಹಳಸುವಂತೆ ಮಾಡಿದೆ.ಇಬ್ಬರು ನಾಯಕರ ನಡುವಣ ವೈಮನಸ್ಸು ಮತ್ತು ರಾಜತಾಂತ್ರಿಕ ಸಂಬಂಧಕ್ಕೆ ಪೆಟ್ಟು ನೀಡಿದ್ದಷ್ಟೇ ಅಲ್ಲ, ಇರಾನ್ ವಿರುದ್ಧದ ಯುದ್ಧ ಮತ್ತು ನ್ಯಾಟೊ ಬಣದೊಂದಿಗಿನ ಟ್ರಂಪ್‌ ಮುನಿಸಿನೊಂದಿಗೂ […]

ಎಚ್ಚರ, ಬ್ಯಾಂಕ್ ಮ್ಯಾನೇಜರ್ ಗಳೂ ಹೀಗೆಲ್ಲಾ ವಂಚನೆ ಮಾಡ್ತಾರೆ, ಉದ್ಯಮಿಯಿಂದ ₹2.66 ಕೋಟಿ ದೋಚಿದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಬಲೆಗೆ

ಬೆಂಗಳೂರು : ₹25ರಿಂದ ₹30 ಕೋಟಿ ಮೌಲ್ಯದ ವ್ಯವಹಾರ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ₹2.66 ಕೋಟಿ ಪಡೆದು ಬ್ಯಾಂಕ್ ಮ್ಯಾನೇಜರ್ ಒಬ್ಬ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿನೋದ್ ಕುಮಾರ್, ಅರುಣ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಹೆಸರಘಟ್ಟ ಶಾಖೆಯ ಆಕ್ಸಿಸ್ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ವಿನೋದ್ ಕುಮಾರ್ ಈ ವಂಚನೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಲಾಜಿಸ್ಟಿಕ್ಸ್ […]