ಕೊರೊನಾ ವೈರಸ್: ಒಂದೇ ದಿನದಲ್ಲಿ 170 ಜನ ಸಾವು, 6387 ಮಂದಿಯಲ್ಲಿ ಸೋಂಕು ದೃಢ

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 6387 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಕೊರೊನಾ ಸೋಂಕಿನಿಂದಾಗಿ 170 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಬೆಳಿಗ್ಗೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. 64,425 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಸೋಂಕಿನಿಂದ 4,337 ಮಂದಿ ಬಲಿಯಾಗಿದ್ದಾರೆ.

ಕೊರೋನಾ ಸೋಂಕು ಉತ್ತುಂಗ ಸ್ಥಿತಿಯಲ್ಲಿದ್ದಾಗ ಲಾಕ್ ಡೌನ್ ಸಡಿಲಿಸಬಾರದಿತ್ತು: ಮಾಧ್ಯಮ ಸಂವಾದದಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ

ನವದೆಹಲಿ: ಕೇಂದ್ರ ಸರಕಾರದ ಮೂರು ಲಾಕ್ ಡೌನ್ ಗಳು ಸಫಲವಾಗಿತ್ತು ಆಧರೆ ಲಾಕ್ ಡೌನ್  4 ನಿರಾಶೆ ಮೂಡಿಸಿದೆ. ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಹರಡುತ್ತಲೇ ಇರುವಾಗ ಲೌಕ್ ಡೌನ್ ಸಡಿಲ ಬಿಡಲಾಗಿದೆ.ಜರ್ಮನಿ, ಇಟಲಿ,ಫ್ರಾನ್ಸ್ ಗಳು ಇದೇ ನೀತಿ ಅನುಸರಿಸಿದ್ದರಿಂದ ಅಲ್ಲಿಯೂ ಈಗ ಸೋಂಕು ಹರಡುವ ಪ್ರಮಾಣ ಜಾಸ್ತಿಯಾಗಿದೆ.ಲಾಕ್ ಡೌನ್ ಅನ್ನು ಈ ಸಮಯದಲ್ಲಿ ಗಂಭೀರವಾಗಿ ಮಾಡಬೇಕಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಆನ್ ಲೈನ್ ನಲ್ಲಿ ವಿವಿಧ ಪತ್ರಿಕಾ […]

ಜಗತ್ತಿನಾದ್ಯಂತ ಕೊರೊನಾಗೆ  3.40 ಲಕ್ಷ ಮಂದಿ ಬಲಿ, 53.03 ಲಕ್ಷ ಮಂದಿಗೆ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕಿಗೆ ಶನಿವಾರದವರೆಗೆ 3.40 ಲಕ್ಷ ಮಂದಿ ಬಲಿಯಾಗಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಟ್ಟು 53.03 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 2019ರ ಅಂತ್ಯದಲ್ಲಿ ಚೀನಾದ ವೂಹಾನ್ ನಲ್ಲಿ  ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಬೆಳಕಿಗೆ ಬಂದಿದ್ದು ಜ.22ರಂದು 17 ಮಂದಿ ಮೃತಪಟ್ಟ ನಂತರ, ಫೆ.23 ರಿಂದ ಮಾ.22ರವರೆಗೆ 14, 739 ಮಂದಿ ಬಲಿಯಾದರು. ವಿಶ್ವದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸುವುದನ್ನು ಅರಿತ ಹಲವು ರಾಷ್ಟ್ರಗಳು ಮಾ.22ರಿಂದ ಲಾಕ್ ಡೌನ್ ಜಾರಿಗೆ ತಂದು ಸಾವಿನ […]

ಪಾಕಿಸ್ತಾನ ವಿಮಾನ ಕರಾಚಿಯಲ್ಲಿ ಪತನ!

ಪಾಕಿಸ್ತಾನ್ ಇಂಟರ್‌ ನ್ಯಾಷನಲ್ ಏರ್‌ಲೈನ್ಸ್‌’ಗೆ (ಪಿಐಎ) ಸೇರಿದ, ಸಿಬ್ಬಂದಿಯೂ ಸೇರಿ 107 ಜನರಿದ್ದ ವಿಮಾನವೊಂದು ಕರಾಚಿಯಲ್ಲಿ ಪತನಗೊಂಡಿದ್ದು, ಲ್ಯಾಂಡಿಂಗ್‌ಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಪತನಗೊಂಡಿದೆ. ವಿಮಾನದಲ್ಲಿದ್ದವರ ಪೈಕಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಏರ್‌ ಬಸ್ ಎ320’ ವಿಮಾನವು ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿತ್ತು. ಕರಾಚಿ ವಿಮಾನ ನಿಲ್ದಾಣಕ್ಕೆ ಸನಿಹದಲ್ಲೇ ಇರುವ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಪಾಕಿಸ್ತಾನ ಸೇನೆಯ ಕ್ಷಿಪ್ರ ಕಾರ್ಯಾಚರಣೆ […]

ಇಎಂಐ ಮರು ಪಾವತಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ: ಆರ್ ಬಿ ಐ ಘೋಷಣೆ

ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ‌ ಲಾಕ್ ಡೌನ್ ಮಾಡಿದ್ದ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ರಿಲೀಫ್ ನೀಡಿದ್ದು, ಸಾಲದ ಇಎಂಐ ಮರು ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ. ಕಳೆದ ಮಾರ್ಚ್ ನಲ್ಲಿ ಇಎಂಐ ಪಾವತಿಯನ್ನು ಮೂರು ತಿಂಗಳಿಗೆ ಅಂದರೆ ಜೂನ್ 1ಕ್ಕೆ ವಿಸ್ತರಿಸಿತ್ತು. ಆರ್ ಬಿಐ ಇದೀಗ ಆಗಸ್ಟ್ […]