ಕೊರೋನಾ ಸೋಂಕು ಉತ್ತುಂಗ ಸ್ಥಿತಿಯಲ್ಲಿದ್ದಾಗ ಲಾಕ್ ಡೌನ್ ಸಡಿಲಿಸಬಾರದಿತ್ತು: ಮಾಧ್ಯಮ ಸಂವಾದದಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ

ನವದೆಹಲಿ: ಕೇಂದ್ರ ಸರಕಾರದ ಮೂರು ಲಾಕ್ ಡೌನ್ ಗಳು ಸಫಲವಾಗಿತ್ತು ಆಧರೆ ಲಾಕ್ ಡೌನ್  4 ನಿರಾಶೆ ಮೂಡಿಸಿದೆ. ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಹರಡುತ್ತಲೇ ಇರುವಾಗ ಲೌಕ್ ಡೌನ್ ಸಡಿಲ ಬಿಡಲಾಗಿದೆ.ಜರ್ಮನಿ, ಇಟಲಿ,ಫ್ರಾನ್ಸ್ ಗಳು ಇದೇ ನೀತಿ ಅನುಸರಿಸಿದ್ದರಿಂದ ಅಲ್ಲಿಯೂ ಈಗ ಸೋಂಕು ಹರಡುವ ಪ್ರಮಾಣ ಜಾಸ್ತಿಯಾಗಿದೆ.ಲಾಕ್ ಡೌನ್ ಅನ್ನು ಈ ಸಮಯದಲ್ಲಿ ಗಂಭೀರವಾಗಿ ಮಾಡಬೇಕಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಆನ್ ಲೈನ್ ನಲ್ಲಿ ವಿವಿಧ ಪತ್ರಿಕಾ ಪ್ರತಿನಿಧಿಗಳ ಜೊತೆ ಪತ್ರಿಕಾಗೋಷ್ಟಿ ಹಮ್ಮಿಕೊಂಡ ಅವರು ಲೌಕ್ ಡೌನ್ ಮಾಡಿರುವ ಉದ್ದೇಶ ಕೊರೋನಾ ಸೋಂಕನ್ನು ನಿಯಂತ್ರಿಸಲು ಆದರೆ ಲೌಕ್ ಡೌನ್ ಆ ಉದ್ದೇಶವನ್ನು ಸಫಲಗೊಳಿಸಿಲ್ಲ.ದೇಶದ ವಿವಿಧ ಆಸ್ಪತ್ರೆಗಳ ಪ್ರತಿನಿಧಿಗಳು, ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ ಎಲ್ಲರೂ ಸೋಂಕು ಜಾಸ್ತಿಯಾಗುತ್ತಿರುವ ಬಗ್ಗೆಯೇ ಮಾತನಾಡುತ್ತಿದ್ದಾರೆ.ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಕೈಯಲ್ಲಾದಷ್ಟು ಕೆಲಸ ಮಾಡುತ್ತಲೇ ಇದ್ದಾರೆ. ಆಧರೆ ಕೇಂದ್ರದಿಂದ ರಾಜ್ಯಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ.

ಒಂದೊಂದು ರಾಜ್ಯದಲ್ಲಿ ಒಂದೊಂದು ತರಹದ ಲಾಕ್ ಡೌನ್ ಜಾರಿಯಲ್ಲಿದೆ.ಎಲ್ಲಾ ರಾಜ್ಯಗಳಿಗೂ ಒಂದಲ್ಲ ಒಂದು ಕಾರಣಕ್ಕೆ ಸಂಬಂಧ ಇದ್ದೇ ಇರುತ್ತದೆ.ಅಂತದರಲ್ಲಿ ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿಯ ಮಾದರಿ ಸರಿಯಲ್ಲ ಎಂದು ರಾಹುಲ್ ಹೇಳಿದ್ದಾರೆ.ಉಳಿದಂತೆ ವಿಡಿಯೋದಲ್ಲಿ ಪತ್ರಕರ್ತರು ಕೇಳಿದ ನಿರುದ್ಯೋಗ ಸಮಸ್ಯೆ,ಕೂಲಿ ಕಾರ್ಮಿಕರ ಸಮಸ್ಯೆ ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ರಾಹುಲ್ ಮಾತಾಡಿದ್ದಾರೆ.

https://www.facebook.com/rahulgandhi/videos/1519158024930846/