udupixpress
Home Trending ಇಎಂಐ ಮರು ಪಾವತಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ: ಆರ್ ಬಿ ಐ ಘೋಷಣೆ

ಇಎಂಐ ಮರು ಪಾವತಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ: ಆರ್ ಬಿ ಐ ಘೋಷಣೆ

ಮುಂಬೈ: ಕೊರೊನಾ ಹಿನ್ನೆಲೆಯಲ್ಲಿ‌ ಲಾಕ್ ಡೌನ್ ಮಾಡಿದ್ದ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಈಗಾಗಲೇ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ.
ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ರಿಲೀಫ್ ನೀಡಿದ್ದು, ಸಾಲದ ಇಎಂಐ ಮರು ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ. ಕಳೆದ ಮಾರ್ಚ್ ನಲ್ಲಿ ಇಎಂಐ ಪಾವತಿಯನ್ನು ಮೂರು ತಿಂಗಳಿಗೆ ಅಂದರೆ ಜೂನ್ 1ಕ್ಕೆ ವಿಸ್ತರಿಸಿತ್ತು. ಆರ್ ಬಿಐ ಇದೀಗ ಆಗಸ್ಟ್ 31ರವರೆಗೆ ವಿಸ್ತರಿಸಿದೆ. ಇದರಿಂದ ವಿವಿಧ ಸಾಲ ಪಡೆದು ಇಎಂಐ ಪಾವತಿಸುವವರಿಗೆ  ಸದ್ಯದ ಮಟ್ಟಿಗೆ ಆರ್ಥಿಕ ಹೊರೆ ಇಳಿಯಲಿದೆ.
error: Content is protected !!