ಜಗತ್ತಿನಾದ್ಯಂತ ಕೊರೊನಾಗೆ  3.40 ಲಕ್ಷ ಮಂದಿ ಬಲಿ, 53.03 ಲಕ್ಷ ಮಂದಿಗೆ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕಿಗೆ ಶನಿವಾರದವರೆಗೆ 3.40 ಲಕ್ಷ ಮಂದಿ ಬಲಿಯಾಗಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಟ್ಟು 53.03 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

2019ರ ಅಂತ್ಯದಲ್ಲಿ ಚೀನಾದ ವೂಹಾನ್ ನಲ್ಲಿ  ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಬೆಳಕಿಗೆ ಬಂದಿದ್ದು ಜ.22ರಂದು 17 ಮಂದಿ ಮೃತಪಟ್ಟ ನಂತರ, ಫೆ.23 ರಿಂದ ಮಾ.22ರವರೆಗೆ 14, 739 ಮಂದಿ ಬಲಿಯಾದರು.

ವಿಶ್ವದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸುವುದನ್ನು ಅರಿತ ಹಲವು ರಾಷ್ಟ್ರಗಳು ಮಾ.22ರಿಂದ ಲಾಕ್ ಡೌನ್ ಜಾರಿಗೆ ತಂದು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಅದರೂ ಸಾವುನ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.

ಜಗತ್ತಿನಾದ್ಯಂತ ಲಾಕ್ ಡೌನ್ ಜಾರಿ ಇದ್ದರೂ, ಮೇ.23ಕ್ಕೆ 53.03 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ವಿಶ್ವದಲ್ಲಿ ಸಾವಿನ ಸಂಖ್ಯೆ 3,40,003ಕ್ಕೆ ಏರಿಕೆಯಾಗಿ ಜನರಲ್ಲಿ ಹೆಚ್ಚು ಆತಂಕ ಉಂಟುಮಾಡಿದೆ.

2,158,562 ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದು. ಪ್ರಸ್ತುತ ವಿಶ್ವದಲ್ಲಿ 28.60 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಇಲ್ಲಿಯವರೆಗೆ 124,794 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3,726 ಮಂದಿ ಸಾವನ್ನಪ್ಪಿದ್ದಾರೆ.