ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಗೆ ಒಲಿಯಿತು ವಿಶ್ವಸುಂದರಿಯ ಪಟ್ಟ

ಲೂಸಿಯಾನ: 71 ನೇ ವಿಶ್ವ ಸುಂದರಿ ಸ್ಪರ್ಧೆಯು ಜನವರಿ 14 ರಂದು ಯುನೈಟೆಡ್ ಸ್ಟೇಟ್ಸ್‌ನ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೆಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದ್ದು, ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಆರ್ ಬೋನಿ ಗೇಬ್ರಿಯಲ್ ಮಿಸ್ ಯೂನಿವರ್ಸ್-2022 ಪಟ್ಟಗೆದ್ದಿದ್ದಾರೆ. ಹೂಸ್ಟನ್ ಮೂಲದ ಫ್ಯಾಷನ್ ಸಲಹೆಗಾರ್ತಿ ನಿಕಟಪೂರ್ವ ಮಿಸ್ ಯೂನಿವರ್ಸ್ ಭಾರತದ ಹರ್ನಾಜ್ ಸಂಧು ಅವರಿಂದ ಕಿರೀಟ ತೊಡಿಸಿಕೊಂಡಿದ್ದಾರೆ. 1 ನೇ ರನ್ನರ್ ಅಪ್ ಆಗಿ ಮಿಸ್ ವೆನೆಜುವೆಲಾ ಮತ್ತು 2 ನೇ ರನ್ನರ್ ಅಪ್ ಆಗಿ […]

ಹೊಸ ಗರಿಷ್ಠ ದರ ತಲುಪಿದ ಹಳದಿ ಲೋಹ: 10 ಗ್ರಾಂ ಚಿನ್ನಕ್ಕೆ 56,245 ರೂ ಗರಿಷ್ಠ ದರ

ನವದೆಹಲಿ: ಮೃದುವಾದ ಯುಎಸ್ ಗ್ರಾಹಕ ದರ ಸೂಚ್ಯಂಕ ಡೇಟಾ ಮತ್ತು ಡಾಲರ್ ಸೂಚ್ಯಂಕವು 7 ತಿಂಗಳ ಕನಿಷ್ಠಕ್ಕೆ ಜಾರಿದ ನಂತರ, ಫೆಬ್ರವರಿ 2023 ಕ್ಕೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನವು ಹಿಂದಿನ ಗರಿಷ್ಠ ದರ ಪ್ರತಿ 10 ಗ್ರಾಂಗೆ ರೂ 56,191 ಅನ್ನು ಹಿಂದಿಕ್ಕಿ ಶುಕ್ರವಾರದಂದು ರೂ 56,245 ರ ಹೊಸ ಗರಿಷ್ಠವನ್ನು ತಲುಪಿದೆ. ತಜ್ಞರ ಪ್ರಕಾರ ಡಿಸೆಂಬರ್ 2022 ರ ಯುಎಸ್ ಹಣದುಬ್ಬರ ಬೆಳವಣಿಗೆಯು ಅಕ್ಟೋಬರ್ 2021 ರಿಂದ ಕಡಿಮೆ ವಾರ್ಷಿಕ ಬೆಳವಣಿಗೆಯನ್ನು […]

ಜ.31 ರಿಂದ ಏ. 6ರವರೆಗೆ ಕೇಂದ್ರ ಬಜೆಟ್ ಅಧಿವೇಶನ: ಪ್ರಹ್ಲಾದ್ ಜೋಶಿ

ನವದೆಹಲಿ: 2023ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಂಡು ಎಪ್ರಿಲ್ 6ರ ವರೆಗೆ ನಡೆಯಲಿದೆ. 27 ಅವಧಿಯ ಅಧಿವೇಶನ ಒಟ್ಟು 66 ದಿನಗಳವರೆಗೆ ನಡೆಯಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ, ಬಜೆಟ್ ಮಂಡನೆ ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು. ಈ ಅಧಿವೇಶನದ ಸಂದರ್ಭದಲ್ಲಿ, ಸಂಸತ್ತಿನ ಸ್ಥಾಯಿ ಸಮಿತಿ ಎದುರಿರುವ ಹಲವು ರಾಜ್ಯಗಳ ಅನುದಾನಗಳ ಬೇಡಿಕೆ ಕುರಿತು ನಿರ್ಣಯ ಕೈಗೊಳ್ಳಲು ಹಾಗೂ ವಿವಿಧ ಸಚಿವಾಲಯಗಳಿಗೆ ಸಂಬಂಧಪಟ್ಟ […]

ಅಮೇರಿಕಾದಲ್ಲಿ ಭಾರತದ ಚಿನ್ನದ ಹಕ್ಕಿ: ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಂಚುತ್ತಿದ್ದಾರೆ ನಮ್ಮ ಕುಡ್ಲದ ಕುವರಿ ದಿವಿತಾ ರೈ

71 ನೇ ವಾರ್ಷಿಕ ವಿಶ್ವ ಸುಂದರಿ ಜನವರಿ 14 ರಂದು ಅಮೇರಿಕಾದ ನ್ಯೂ ಓರ್ಲಿಯನ್ಸ್, ಲೂಯಿಸಿಯಾನದಲ್ಲಿರುವ ಅರ್ನೆಸ್ಟ್ ಎನ್. ಮೋರಿಯಲ್ ಕನ್ವೆನ್ಷನ್ ಸೆಂಟರ್‌ ನಲ್ಲಿ ನಡೆಯಲಿದ್ದು, 86 ಕ್ಕೂ ಹೆಚ್ಚು ಮಹಿಳೆಯರು ವಿಶ್ವ ಸುಂದರಿ ಪಟ್ಟಕ್ಕಾಗಿ ಸ್ಪರ್ಧಿಸಲಿದ್ದಾರೆ. ಈಗಾಗಾಲೇ ಪೂರ್ವಾಭಾವಿ ಸುತ್ತುಗಳು ನಡೆಯುತ್ತಿದ್ದು, ಭಾರತದ ಪ್ರತಿನಿಧಿ ಮಿಸ್ ಯೂನಿವರ್ಸ್ ಇಂಡಿಯಾ ದಿವಿತಾ ರೈ ಕೂಡಾ ಸ್ಪರ್ಧೆಯಲ್ಲಿದ್ದಾರೆ. ದಿವಿತಾ ರೈ ಕಾಸ್ಟೂಮ್ ವಿಭಾಗದಲ್ಲಿ ಬಂಗಾರವರ್ಣದ ‘ಚಿನ್ನದ ಹಕ್ಕಿ’ಯ ಉಡುಗೆ ತೊಟ್ಟಿದ್ದು, ಇದು ಭಾರತದ ಅಪಾರ ಸಂಪತ್ತನ್ನು ಪ್ರತಿನಿಧಿಸುವ ಉಡುಗೆಯಾಗಿದೆ. […]

ಭಾರತದಿಂದ ಬಾಂಗ್ಲಾವರೆಗೆ 3,200 ಕಿ.ಮೀ ಉದ್ದದ ‘ಗಂಗಾವಿಲಾಸ’: ವಿಶ್ವದ ಅತಿ ಉದ್ದದ ನೌಕಾ ವಿಹಾರಕ್ಕೆ ಚಾಲನೆ

ನವದೆಹಲಿ: ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ವಿಶ್ವದಲ್ಲೇ ಅತಿ ಉದ್ದದ ನದಿಯ ಮೂಲಕದ ನೌಕಾ ವಿಹಾರ ‘ಗಂಗಾವಿಲಾಸ’ ಯೋಜನೆಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಐಷಾರಾಮಿ ಕ್ರೂಸರ್ ಈ ವಾರ ತನ್ನ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಭಾರತದ ಕೆಲವು ಪ್ರಸಿದ್ಧ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ಮೂಲಕ ಸುತ್ತುತ್ತಾ 27 ನದಿಗಳನ್ನು ಒಳಗೊಳ್ಳುತ್ತಾ ಭಾರತದ ಕಾಶಿಯಿಂದ ಬಾಂಗ್ಲಾ ದೇಶದವರೆಗಿನ 3,200 ಕಿ.ಮೀ. ದೂರದ ಪ್ರಯಾಣವನ್ನು 51 ದಿನಗಳಲ್ಲಿ ಸಂಪೂರ್ಣಗೊಳಿಸಲಿದೆ. […]