ಹೊಸ ಗರಿಷ್ಠ ದರ ತಲುಪಿದ ಹಳದಿ ಲೋಹ: 10 ಗ್ರಾಂ ಚಿನ್ನಕ್ಕೆ 56,245 ರೂ ಗರಿಷ್ಠ ದರ

ನವದೆಹಲಿ: ಮೃದುವಾದ ಯುಎಸ್ ಗ್ರಾಹಕ ದರ ಸೂಚ್ಯಂಕ ಡೇಟಾ ಮತ್ತು ಡಾಲರ್ ಸೂಚ್ಯಂಕವು 7 ತಿಂಗಳ ಕನಿಷ್ಠಕ್ಕೆ ಜಾರಿದ ನಂತರ, ಫೆಬ್ರವರಿ 2023 ಕ್ಕೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನವು ಹಿಂದಿನ ಗರಿಷ್ಠ ದರ ಪ್ರತಿ 10 ಗ್ರಾಂಗೆ ರೂ 56,191 ಅನ್ನು ಹಿಂದಿಕ್ಕಿ ಶುಕ್ರವಾರದಂದು ರೂ 56,245 ರ ಹೊಸ ಗರಿಷ್ಠವನ್ನು ತಲುಪಿದೆ.

ತಜ್ಞರ ಪ್ರಕಾರ ಡಿಸೆಂಬರ್ 2022 ರ ಯುಎಸ್ ಹಣದುಬ್ಬರ ಬೆಳವಣಿಗೆಯು ಅಕ್ಟೋಬರ್ 2021 ರಿಂದ ಕಡಿಮೆ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿತು. ಇದು ಯುಎಸ್ ಫೆಡ್ ಬಡ್ಡಿದರ ಹೆಚ್ಚಳದ ತನ್ನ ನಿಲುವನ್ನು ನಿಧಾನಗೊಳಿಸುತ್ತದೆ ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿತು. ಇದು ವಾರಾಂತ್ಯದ ವೇಳೆಗೆ ಚಿನ್ನದ ಬೆಲೆ ಏರಿಕೆಗೆ ಕಾರಣವಾಯಿತು.

ಧನಾತ್ಮಕ ಯುಎಸ್ ಸಿಪಿಐ ದತ್ತಾಂಶವು ಫೆಡರಲ್ ರಿಸರ್ವಿನ ಬಡ್ಡಿದರಗಳಲ್ಲಿ ನಿಧಾನಗತಿಯ ಹೆಚ್ಚಳವನ್ನು ಸೂಚಿಸುತ್ತದೆ. ಡಾಲರ್ ಸೂಚ್ಯಂಕವು 7 ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

ಚಿನ್ನದ ಬೆಲೆಯು 55,600 ರೂಗಳಿಗಿಂತ ಹೆಚ್ಚು ಏರಿಕೆಯಾಗಿ, ಈ ಏರಿಕೆ ಮುಂದುವರಿದಲ್ಲಿ ಮುಂದಿನ ಸುತ್ತಿನ  ಎಂಸಿಎಕ್ಸ್ ನಲ್ಲಿ ಚಿನ್ನದ ದರ 57,700 ರೂ ಗಳಿಗೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಆಗಸ್ಟ್ 2020 ರಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯು 56191 ರೂಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.