ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಗೆ ಒಲಿಯಿತು ವಿಶ್ವಸುಂದರಿಯ ಪಟ್ಟ

ಲೂಸಿಯಾನ: 71 ನೇ ವಿಶ್ವ ಸುಂದರಿ ಸ್ಪರ್ಧೆಯು ಜನವರಿ 14 ರಂದು ಯುನೈಟೆಡ್ ಸ್ಟೇಟ್ಸ್‌ನ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೆಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದ್ದು, ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಆರ್ ಬೋನಿ ಗೇಬ್ರಿಯಲ್ ಮಿಸ್ ಯೂನಿವರ್ಸ್-2022 ಪಟ್ಟಗೆದ್ದಿದ್ದಾರೆ.

Image

ಹೂಸ್ಟನ್ ಮೂಲದ ಫ್ಯಾಷನ್ ಸಲಹೆಗಾರ್ತಿ ನಿಕಟಪೂರ್ವ ಮಿಸ್ ಯೂನಿವರ್ಸ್ ಭಾರತದ ಹರ್ನಾಜ್ ಸಂಧು ಅವರಿಂದ ಕಿರೀಟ ತೊಡಿಸಿಕೊಂಡಿದ್ದಾರೆ.

1 ನೇ ರನ್ನರ್ ಅಪ್ ಆಗಿ ಮಿಸ್ ವೆನೆಜುವೆಲಾ ಮತ್ತು 2 ನೇ ರನ್ನರ್ ಅಪ್ ಆಗಿ ಮಿಸ್ ಡೊಮಿನಿಕನ್ ರಿಪಬ್ಲಿಕ್ ಕಿರೀಟವನ್ನು ಪಡೆದಿದ್ದಾರೆ.

ಈ ವರ್ಷ ಸುಮಾರು 84 ದೇಶಗಳ ಸ್ಪರ್ಧಿಗಳು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನ ದಿವಿತಾ ರೈ ಭಾರತವನ್ನು ಪ್ರತಿನಿಧಿಸಿದ್ದರು.