ಸಿಮ್ ಕಾರ್ಡ್ ಖರೀದಿಗೆ ಬಂತು ಕಠಿಣ ನಿಯಮ, ರಿಯಲ್‌ಟೈಮ್ ಪರಿಶೀಲನೆ ಕಡ್ಡಾಯ, ಇನ್ನೂ ಏನೇನು ಬದಲಾವಣೆ?

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ವೇಳೆ ಸುಮಾರು 4,500 ಸಿಮ್ ಕಾರ್ಡ್‌ಗಳನ್ನು ಒಳಗೊಂಡ ಬೃಹತ್ ಸೈಬರ್ ಅಪರಾಧ ಜಾಲ ಪತ್ತೆಯಾದ ಬೆನ್ನಲ್ಲೇ, ದೇಶಾದ್ಯಂತ ಹೊಸ ಸಿಮ್ ಕಾರ್ಡ್‌ಗಳ ವಿತರಣಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ನಕಲಿ ಸಿಮ್ ಕಾರ್ಡ್‌ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಡಿಜಿಟಲ್ ಇಂಟೆಲಿಜೆನ್ಸ್ […]
ಕಾವೇರಿ ವಿವಾದದ ನಡುವೆ ಸಿಎಂ ವಿಜಯ್-ಡಿ.ಕೆ ಶಿವಕುಮಾರ್ ಇಂದು ಭೇಟಿ

ಚೆನ್ನೈ: ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ (D K Shivakumar) ಮತ್ತು ತಮಿಳುನಾಡಿನ (CM Vijay) ನಡುವೆ ಮತ್ತೆ ಚರ್ಚೆಯಲ್ಲಿರುವಾಗಲೇ, ತಮಿಳುನಾಡು ಸಿಎಂ ವಿಜಯ್ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ಚೆನ್ನೈನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿ ನಡೆದರೆ ಕಾವೇರಿ ನೀರು ಮತ್ತು ಮೇಕೆದಾಟು ಯೋಜನೆ ಪ್ರಮುಖ ಚರ್ಚೆಯ ವಿಷಯವಾಗುವ ನಿರೀಕ್ಷೆಯಿದೆ. ಆಗಸ್ಟ್ 20 ರಂದು ಚೆನ್ನೈ ಹೊರವಲಯದ ಕೋವಲಂನಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಗೃಹ […]
ಬೆಂಗಳೂರಿನಲ್ಲಿ ನಕಲಿ ಔಷಧ ತಯಾರಿಕಾ ಜಾಲ ಪತ್ತೆ: ದೇಶದ ಹಲವು ರಾಜ್ಯಗಳಿಗೆ ನಂಟು, ದೇಶಾದ್ಯಂತ ಕಟ್ಟೆಚ್ಚರ!

ಬೆಂಗಳೂರು: ಬೆಂಗಳೂರಿನ ಸಮೀಪ ಪತ್ತೆಯಾದ ನಕಲಿ ಔಷಧ ತಯಾರಿಕಾ ಜಾಲದ ನಂಟು ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಔಷಧ ನಿಯಂತ್ರಣ ಇಲಾಖೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಕರ್ನಾಟಕದ ಔಷಧ ನಿಯಂತ್ರಣ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು ಹಾಗೂ ರಾಜ್ಯ ಪರವಾನಗಿ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18ರಂದು ಕರ್ನಾಟಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ಬಿದದಿ ಸಮೀಪದ ನಂ.34 ಕುರುಬರಹಳ್ಳಿ ಗ್ರಾಮದ ಲೈಸೆನ್ಸ್‌ರಹಿತ ಔಷಧ ತಯಾರಿಕಾ ಘಟಕದ […]
10 ಲಕ್ಷ ರೂ. ಲಂಚ ಪಡೆದ ಆರೋಪ: ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರ ಸಿಬಿಐ ಬಲೆಗೆ

ನವದೆಹಲಿ: 10 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರರೊಬ್ಬರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ. ಬಂಧಿತ ಆರೋಪಿಯನ್ನು ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆ (ICAS) 2020ರ ಬ್ಯಾಚ್‌ನ ಅಧಿಕಾರಿ ಸಂದೀಪ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯ ನವೀಕರಣ ಕಡತವನ್ನು ಪ್ರಕ್ರಿಯೆಗೊಳಿಸಿ ಅನುಮೋದನೆ ನೀಡಲು ಉದ್ಯಮಿಯೊಬ್ಬರಿಂದ 15 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಪೈಕಿ 10 ಲಕ್ಷ ರೂ. ಲಂಚದ ಹಣವನ್ನು ತಮ್ಮ ಪತ್ನಿಯ ಮೂಲಕ […]
ಮಾಜಿ ಸಚಿವ ಬಿ.ಸಿ ನಾಗೇಶ್ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿ ಸಂತಾಪ

ಬೆಂಗಳೂರು: ಮಾಜಿ ಸಚಿವ ಬಿ.ಸಿ ನಾಗೇಶ್ (BC Nagesh) ಅವರ ನಿಧನಕ್ಕೆ ವಿಧಾನ ಪರಿಷತ್‌ನಲ್ಲಿ ಸಂತಾಪ ಸೂಚಿಸಲಾಯ್ತು. ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿ ಸಲೀಂ ಅಹಮದ್ ಸಂತಾಪ ಸೂಚನೆ ಮಂಡನೆ ಮಾಡಿದ್ರು. ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah), ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸಂತಾಪ ಸೂಚಿಸಿದರು. ಡಿಸಿಎಂ ಪರಮೇಶ್ವರ್ (DCM Parameshwar) ಮಾತಾಡಿ, ಬಿ.ಸಿ.ನಾಗೇಶ್ ಅವರು ನನಗೆ ಆತ್ಮೀಯ ಸ್ನೇಹಿತರು. ಶಾಸಕರಾಗಿ, ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಚಿವರಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಯ […]