ಪ್ರಿಯ ಸ್ನೇಹಿತರೇ, ಫ್ರೆಂಡ್ ಶಿಪ್ ಡೇ ಇವತ್ತಷ್ಟೇ ಅಲ್ಲ ಪ್ರತಿದಿನವೂ : ಹುಡುಗಿಯೊಬ್ಬಳ ಆಪ್ತ ಬರಹ

ಏಳು ಬೀಳುಗಳ ಸರಮಾಲೆಯಲ್ಲಿ ನಮ್ಮ ಈ ಗೆಳೆತನ ಬಂಧವು ಶಾಶ್ವತವಾದದ್ದು. ಗೆಳೆತನ ಎಂದೆಂದಿಗೂ ಶಾಶ್ವತವಾಗಿ ಜೀವಂತ ಇರಲಿ, ಆ ಕ್ಷಣಗಳನ್ನು ನಾವು ಎಂದಿಗೂ ಮರೆಯಬಾರದು. ಫ್ರೆಂಡ್‌ಶಿಪ್ ಕೂಡ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ, ಸ್ನೇಹಕ್ಕೆ ಬಡವ-ಶ್ರೀಮಂತ, ಮೇಲು ಜಾತಿ-ಕೀಳುಜಾತಿ, ಬುದ್ಧಿವಂತ-ದಡ್ಡ, ದೊಡ್ಡವರು-ಚಿಕ್ಕವರು, ಅನ್ನೋ ಬಾರ್ಡರ್‌ ಇರುವುದಿಲ್ಲ. ಇಷ್ಟೇ ಅಲ್ಲದೇ ಮಳೆಗಾಲದಲ್ಲಿ ಒಂದೇ ಕೊಡೆಯಲಿ ಜೊತೆಯಾಗಿ ನಡೆದವರು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದು ಜೊತೆಯಲ್ಲಿ ನಿಂತವರು. ಲೈನ್ ಹೊಡೆಯುವಾಗ ಸಾಥ್‌ಕೊಟ್ಟವರು, ಮಾಸ್ ಬಂಕ್ ಮಾಡಲು ಪ್ಲಾನ್ ಮಾಡಿ ಕೊನೆಗೆ ಸಿಕ್ಕಿಹಾಕಿಕೊಂಡವರು, […]

ಆಹಾ ಏನ್ ಚೆಂದ ಈ ಹಾಸ್ಟೆಲ್ some ಬಂಧ : ಅರ್ಪಿತಾ ನೆರಿಯ ಬರೆದ ಬರಹ

        ಅರ್ಪಿತಾ ನೆರಿಯ ಪ್ರಥಮ ಪತ್ರಿಕೋದ್ಯಮ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಹಾಸ್ಟೆಲ್ ಜೀವನ ಒಂದು ಮುಗಿಯದ ನೆನಪು ಹಾಗೂ ಮಧುರವಾದ ಪಯಣ. ಹಾಸ್ಟೆಲ್ ಜೀವನದ ಸಿಹಿ ಕಹಿ ನೆನಪನ್ನು ಹಾಸ್ಟೆಲ್ ವಾಸಿಯಾಗಿದ್ದವರು ಮೆಲುಕು ಹಾಕುತ್ತಲೇ ಇರುತ್ತಾರೆ ಬಿಡಿ. ಹಾಸ್ಟೆಲ್ ಎಂದರೆ ಕೋಪ, ಜಗಳ, ಸಂತೋಷ, ಹಾಗೂ ತರ್ಲೆಗಳ ಪಾಠಶಾಲೆ.  ಒಮ್ಮೆ ಹಾಸ್ಟೆಲ್ ಜೀವನ ಮುಗಿದರೆ ಮುಂದೆಂದೂ ಬೇಕು ಬೇಕು ಎಂದರೂ ಅದು ಮತ್ತೆಂದೂ ಮರಳಿಬಾರದು. ನಾನು ಕೂಡ ಹಾಸ್ಟೆಲ್ ಕುಟುಂಬದ ಸದಸ್ಯೆ. […]

ಹೆಣ್ಣೆಂದರೆ ಬರೀ ಹೆಣ್ಣಲ್ಲ ಬಾಳ ಬೆಳಗೋ ಕಣ್ಣು: ಜಹಫರ್ ಸಾಧಿಕ್ ಬರೆದ ಓದಲೇಬೇಕಾದ ಬರಹ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತೀ ಗೆ ಅವಳದೇ ಆದ ಗೌರವ ಸ್ಥಾನಮಾನಗಳಿವೆ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣು ಒಂದು ಗಂಡಿನ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಮಹತ್ವಪೂರ್ಣ ಕಾರ್ಯವನ್ನು ನಿರ್ವಹಿಸುತ್ತಾಳೆ. ಮಹಿಳೆ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಪ್ರತಿನಿತ್ಯ ಮನೆಯ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ “ಹೌಸ್ ವೈಫ್” ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. […]

ಅಪ್ಪಾ ಅಂದ್ರೆ ಆಕಾಶ: ಸಾಧಿಕ್ ಬರೆದ ಬರಹ

“ಅಪ್ಪ” ಈ ಶಬ್ಧದಲ್ಲೆ ಅದೆಂಥಾ ಗತ್ತು ಗಾಂಭೀರ್ಯ, ಅಪ್ಪ ಅನ್ನುವ ಪದಕ್ಕೆ ಸಾವಿರ ಆನೆಗಳ ಬಲ, ದರ್ಪ, ಕೋಪ, ಅತಿ ಎನಿಸುವ ಶಿಸ್ತು. ಇವೆಲ್ಲದರ ಸಮ್ಮಿಲನವೇ ಅಪ್ಪ. ಅಪ್ಪ ಅಂದರೆ, ಧೈರ್ಯ, ವಿಶ್ವಾಸ, ಸಹನೆ, ನಗು. ನಿಸ್ಸಂಶಯವಾಗಿ ತಂದೆಯಾಗಿರುವವನು ತನ್ನ ಮಕ್ಕಳ ಸಾಧನೆಯ ಮೂಲ, ಹೆಮ್ಮೆ ಮತ್ತು ಸ್ಪೂರ್ತಿ, ಸಮಾಜದಲ್ಲಿ ಹೇಗೆ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂದು ಕಲಿಸಿಕೊಟ್ಟ ಗುರು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನ್ನ ಜೀವನವನ್ನೇ ತನ್ನ ಮಕ್ಕಳಿಗೆ ಮುಡುಪಾಗಿಟ್ಟ ವ್ಯಕ್ತಿ. ತಂದೆಯಾದವನು ತಾನು ವಿದ್ಯೆ ಕಲಿಯದಿದ್ದರು, ತನ್ನ […]

ಸಿಂಪಲ್ಲಾಗೊಂದು ಕ್ರಶ್ ಸ್ಟೋರಿ: ಇಫಾಜ್ ಬರೆದ LOVE ಲಿ ಬರಹ

ಈ ಪ್ರೀತಿ ಎಂಬುದು ಒಂತರಾ ಮಾಯೆ, ಅದು ಹೊತ್ತು-ಗೊತ್ತು, ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ಅಂದೊಮ್ಮೆ ಅವಳ ಕಣ್ಣು, ನಗು, ಅದರ ಜೊತೆಗೆ ಗುಲಾಬಿಯೇ ನಾಚಿಕೊಳ್ಳುವಂಹ  ತುಟಿ, ಕಣ್ಣಿನ ಮೇಲಿನ ಕಪ್ಪು ನೋಡಿದಾಗೆಲ್ಲ ಮನವೆಲ್ಲ ಕೆಂಪಾಗುವ ಜೊತೆಗೆ, ಅಪ್ಸರೆ ನಾಚುವಂತೆ ಇದ್ದ ಅವಳ ನಡೆ, ಇದನ್ನೆಲ್ಲ ನೋಡಿ ನನ್ನ ಮನಸ್ಸು ಅವಳ ಹಿಂದೆ ಹೋಗುವಂತೆ ಮಾಡಿತು ಎಂದು ನೀವಂದುಕೊಂಡರೆ ಅದು ಸುಳ್ಳು. ಈಗಿನ ಕಾಲದಲ್ಲಿ ಸ್ಟೈಲ್ ಅನ್ನೋದು ರಕ್ತದಲ್ಲಿಯೇ ಹರಿಯತೊಡಗಿದೆ. ಇಂತಹ ಸ್ಟೈಲ್ ಗೆಲ್ಲ ಮರಳಾಗೋ ಹುಡುಗ […]