ಬೆಕ್ಕುರಾಯನೊಂದಿಗೆ ಪ್ರೀತಿಯಾಯ್ತು: ಪುಷ್ಪಾ ಬರೆದ ಬರಹ

ಹೇ ..ಚಿನ್ನು….. ನಿಜವಾಗಿಯು ನೀನೊಬ್ಬ ಸುಂದರ ಯುವಕ ಕಣೊ. ನಿನ್ನ ಕೆಂದುಟಿಯಯೊಳಗಿನ ನಗು ಮಿಟುಕುವ ಕಣ್ಣ ರೆಪ್ಪೆಗಳು ಹಾಲುಗಲ್ಲದ ಮೇಲೆ ಹುರಿಗಡ್ಡದ ನಡುವೆ ಪುಟ್ಟ ನಗು  ಎಲ್ಲವನ್ನೂ ಯೋಚಿಸಿ ಕೂತಿದ್ದೆ ನಿನ್ನ ಗೊತ್ತಾ?

ನನ್ನ ರಾಜ  ಅಲ್ವಾ ನೀನು? ನಿನಗೇನು ಚೆನ್ನಾಗಿಯೇ ಇರುತ್ತೀಯ ಬಿಡು,  ಯಾಕಂದ್ರೆ ಯಾವಾಗಲೂ ಎಲ್ಲೆಲ್ಲೋ ಸುತ್ತಾಡ್ಕೊಂಡು ಬರ್ತಿಯಾ .. ಸೂಜಿ ಬೆಳಕಿನಂತೆ ಎಲ್ಲರ ಕಣ್ಣಲ್ಲೂ ಮಿಂಚುತ್ತೀಯಾ.

ನಿನ್ನ ಬಗ್ಗೆ   ನಿನ್ನ ಬಗ್ಗೆ ನಿನ್ನ ಗೆಳೆಯ ಚೋಟುನತ್ರ ವಿಚಾರಿಸುತ್ತಲೇ ಇರುತ್ತೇನೆ. ಅವನೆಲ್ಲಾ ನಿನ್ನ ಕತೆ ಹೇಳುತ್ತಾನೆ ಅವನು ಮೊನ್ನೆಯಷ್ಟೆ ನನಗೆ ನಿನ್ನ ಪರಿಚಯ ಮಾಡಿ ಹೋದಾಗ ಕೋಟಿ ಹೃದಯಗೆದ್ದ ಸಂಭ್ರಮ ಸಿಕ್ಕಂತೆ ಖುಷಿಪಟ್ಟಿದ್ದೆ.

ಏನೆಲ್ಲ ಮಾಡಿ ಬಿಟ್ಟೆ ನೀ ನನ್ನನ್ನು,  ನನ್ನ ಹೃದಯ‌ದೊಳಗಿನ  ಕವಾಟಗಳಲಿ ಅಡಗಿ ಕೂತೆ  ಕಣೊ. ಹಿಂದೆಲ್ಲಾ ನಿನ್ನ  ಅಮ್ಮನ ಜೊತೆ ಮಾತನಾಡುತಿದ್ದಾಗ ನಿನ್ನ ಮಾತಿನ  ಸ್ವರವು ಕಿವಿಗೆ ಇಂಪು ನೀಡುತಿತ್ತು. ಮೊನ್ನೆಯಷ್ಟೆ ಮನೆಯ ರಸ್ತೆಯಲ್ಲಿ ಸಾಗುವಾಗ ಮುಂಗುರುಳ ಸವರಿ ನಿನ್ನ ನೋಡಿಬಿಟ್ಟೆ. ನೀನೇ ನನ್ನ ಹುಡುಗ ಅಂತ ಆಗ  ರುಜು ಹಾಕಿ ಬಿಟ್ಟೆ, ಅದರೆ ನಿನ್ನ ಜೊತೆ ನನ್ನ ಪ್ರೀತಿಯ ಪ್ರೇಮಾಕುಂರ ಹೇಗೆ ಆಯ್ತು ಅಂತ ಯೋಚಿಸುತ್ತಲೇ ಇರುತ್ತೇನೆ.

ನಾನೆಂಬ ಈ ಪೆದ್ದು ಜೀವ ನಿನ್ನ ಮೊದಲ ನೋಟದಲ್ಲಿಯೆ ಬಿದ್ದು ಹೋಗಿದ್ದು ನಿನ್ನ ಮುದ್ದು ಮುಖಕ್ಕೆ, ನೀನು ಹತ್ತಿರ ಬಂದಾಗ ನಿನ್ನ ಮುದ್ದಾಡಬೇಕು ಅನಿಸಿತ್ತು, ಆದರೆ ನೀನು ಅಷ್ಟರಲ್ಲೇ ಮಾಯವಾಗಿ ಬಿಟ್ಟೆಯಾ?ಅವತ್ತೆ ಅಂದುಕೊಂಡೆ ನಿನ್ನನ್ನು ನನ್ನ ಮನೆಯಾಗಿಸಬೇಕೆಂದು.

ನಿನ್ನ ಕಣ್ಣಿನ ಆಕರ್ಷಣೆಯಿಂದ ಹಿಡಿದು ,ನಿನ್ನ ಮೌನದ ಮಾತುಗಳು ಬಲು ಬೇಗನೆ ಅರ್ಥವಾಗುತ್ತಿತ್ತು.ನಿನ್ನ ನೋಡಲೆಂದು‌ ನಾ ಬಂದೆ ಅಲ್ಲಿ ನೀನು ಸಾವಕಾಶವಾಗಿ ನಿಂತು ನಿನ್ನ ಅಮ್ಮನ ಬಳಿ ಏನೋ ಹೇಳುತ್ತಿದ್ದೆ. ಏನದು ?ನನಗಂತು ಅರ್ಥವಾಗಲೇ ಇಲ್ಲ. ನೀನೇನೂ ಯಾವತ್ತಾದರೂ ಬಾಯಿ ಬಿಟ್ಟು ಯಾರ ಬಳಿ ಯಾದರು ಮಾತನಾಡಿದ್ದಿಯಾ? ಇಲ್ಲವಲ್ಲ?? ಅದರೂ ನಿನ್ನ ನಾ ತುಂಬ ಇಷ್ಟಪಡುತ್ತಿದ್ದೆ.ನಿನ್ನ ಆ ಮುದ್ದು ಮೊಗ, ಆ ಮೊಗದಲ್ಲಿ ಕನ್ನಡಿಯಂತೆ ಪ್ರತಿಬಿಂಬಿಸೊ ಸಣ್ಣ ಗಾತ್ರ ದ ಕಣ್ಣು, ಗಿಣಿ ಕೊಕ್ಕಿನಂತೆ ಬಾಗಿದ ಅ ಸಣ್ಣ ಮುಗು, ಮಗುವಿನಂತಾ ಆ ನಿನ್ನ ತುಟಿ, ವಾ!

ಅಂದಹಾಗೆ  ನನ್ನ ಚಿಗುರು ಕನಸಿನ ರಾಜನಲ್ಲ ವಲ್ಲ ನೀನು???ಅದಕ್ಕೆ ನೋಡು ನಿ ನನ್ನ ಮನೆಗೀಗ ಬಂದುಬಿಟ್ಟಿದ್ದಿಯಾ,  ಅಂದಿನ ನಿನ್ನ ಮೊಗದ ನೆನಪು,ಇಂದು ಕೂಡ ಹಚ್ಚ ಹಸುರಾಗದೆ  ನನ್ನ ಮನದಲಿ, ನನ್ನ ಆಕರ್ಷಕಗೊಳಿಸಿದ ಆ ನಿನ್ನ ನೋಟ, ನೀ ನನಗಿತ್ತ ಬಾಂಧವ್ಯದ ಮೆಟ್ಟಿಲು,ನೀ ನಿದಿರೆಯಲ್ಲಿರುವಾಗ ನನ್ನ ಮಡಿಲಲಿ ಮಲಗಿಸಿಕೊಂಡಾಗ ,ಆ ಎರಡು ಕಣ್ಣುಗಳ ಅರ್ದ ಚಂದ್ರರು ,ನಾ ನಿನ್ನ ಮತ್ತೆ ಮುದ್ದಿಸುವಂತೆ ಮಾಡುತ್ತವೆ. ನಾ..ಹೊರಟಾಗ ನೀ ನಿನ್ನ ಮೊಗ ತಂದು ಕಾಲಿಗೆ ಸವರಿ, ನಾ ಬರುವ ದಾರಿಯನ್ನೇ ಕಾಯುತ್ತ ,ಮತ್ತೆ ನಾ ನಿನ್ನ ಮುದ್ದಿಸಬೇಕೆಂಬಂತೆ ನನ್ನ ಬಳಿ ಬಂದು ನನ್ನನ್ನೇ ದಿಟ್ಟಿಸಿ ನೋಡುತ್ತಿರುತ್ತಿಯಾ

ನನ್ನ ಬೆಕ್ಕುರಾಯ,  ಮಿಯಾಂವ್ ,ಮಿಯಾಂವ್ ಅಂತಿಯಾ ,ಮೋಗವನ್ನ ತಂದು ಸವರುತ್ತಿಯಾ,ಆಟನು ಚೆನ್ನಗಿನೆ ಆಡ್ತಿಯಾ. ಪ್ರಾಣಿ ಗಳಿಗೆ ಮಾತು ಬರದಿದ್ದರೆ ಏನಂತೆ ಅವುಗಳಲ್ಲಿಯು ಭಾವ, ಹಾಸ್ಯ, ಹೊನಲುಗಳು ಅಸಂಖ್ಯ.  ಎಷ್ಟೋ ಸಲ ನನಗೆ ಬೇಸರವಾದಾಗ ನನ್ನ ಮನಸ್ಸಿಗೆ ಉಲ್ಲಾಸ ತರಿಸುವುದು ನೀನೇ ನನ್ನ ಬೆಕ್ಕುರಾಯ. ನಿನ್ನಲ್ಲಿ,ವಂಚನೆ,ಸ್ವಾರ್ಥ, ಕಟುಕುತನವಿಲ್ಲ ಎಂದೆಂದಿಗೂ ನನ್ನ ಜೊತೆಗಿರು
.ಪುಷ್ಪಾ ಕುಮಾರಿ, ಮಾಳ