ಊದುಬತ್ತಿ-ಮತಾಪು: ಉಪಯೋಗ ಮತ್ತು ಉಪದ್ರವಗಳೇನು ಗೊತ್ತಾ?ಒಮ್ಮೆ ಓದಿ ಉದಯ ಶೆಟ್ಟಿ ಬರೆದ ಬರಹ

ಭಾರತೀಯರಾದ ನಾವು ನಮ್ಮ ನಂಬಿಕೆಗಳ ಆಚರಣೆಗಾಗಿ ಕೆಲವೊಂದು ವಸ್ತುಗಳನ್ನು ಅವ್ಯಾಹತವಾಗಿ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದರು ಎಂಬ ಒಂದೇ ಕಾರಣಕ್ಕಾಗಿ ಆ ವಸ್ತುಗಳನ್ನು ಅವರಿಗಿಂತ ಹೆಚ್ಚಾಗಿ ಉಪಯೋಗಿಸುತ್ತೇವೆ. ಆ ವಸ್ತುಗಳನ್ನು ಬಳಸುವುದರಿಂದ ಆಗುವ ಉಪಯೋಗಕ್ಕಿಂತ ಉಪದ್ರವಗಳೇ ಅಧಿಕ. ಸನಾತನಿಗಳಾದ ನಮ್ಮ ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳಲ್ಲಿ ಉಪಯೋಗಿಸಲ್ಪಡುವ ಊದುಕಡ್ಡಿ (ಅಗರಬತ್ತಿ)ಗಳ ಉಪಯೋಗ ಮತ್ತು ಅವುಗಳಿಂದಾಗುವ ಉಪದ್ರವಗಳ ಬಗ್ಗೆ ತಾರ್ಕಿಕವಾಗಿ ನಮ್ಮನ್ನು ನಾವು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕಾದ ಕಾಲವಿದು. ಊದುಬತ್ತಿ : ಊದುಬತ್ತಿಯು ತನ್ನನ್ನು ತಾನು ಉರಿಸಿಕೊಂಡು ಸುತ್ತಲ […]

ಒಮ್ಮೆ ನಿಮ್ಮ ನೆನಪಿನ ಜೋಳಿಗೆ ಬಿಚ್ಚಿ,ಪಾಠ ಕಲಿಸಿದ ಗುರುವನ್ನು ಮನಸಾರೆ ನಮಿಸಿ:

ಅಮ್ಮನ ಅಪ್ಪುಗೆಯಿಂದ, ಅಪ್ಪನ ಅಕ್ಕರೆಯಿಂದ ಮಗು ಮುಂದಡಿ ಇಡುವುದು ತನ್ನ ಸುಂದರ ಭವಿಷ್ಯವನ್ನ ರೂಪಿಸುವ ವಿದ್ಯಾಮಂದಿರದತ್ತ. ತಂದೆ -ತಾಯಿ, ಬಂಧು-ಬಳಗದ ಕಾಳಜಿಯಲ್ಲಿ ಬೆಳದ ಮಗು, ಅಕ್ಷರಾಭ್ಯಾಸದ ಗುರಿಯಿಟ್ಟು ವಿದ್ಯಾಮಂದಿರಕ್ಕೆ ಕಾಲಿಟ್ಟಾಗ ಅದೇ ಅಕ್ಕರೆ ಆಪ್ತತೆಯಲ್ಲಿ, ಕಾಳಜಿಯಲ್ಲಿ ಕೈ ಹಿಡಿದು ಒಳ ಕರೆದು ಅದೇ ಸಲುಗೆ ಪ್ರೀತಿಯಲ್ಲಿ ಅಕ್ಕರೆ ಜೊತೆಗೆ ಅಕ್ಷರವ ಕಲಿಸಿ, ಅತ್ತಾಗ ಕಣ್ಣೋರೆಸಿ, ಮಾತು ತಪ್ಪಿದಾಗ ಗದರಿಸಿ, ನಮ್ಮೆಲ್ಲ ಬೇಕು ಬೇಡಗಳ ಜೊತೆಗೆ ಒಂದಿಷ್ಟು ಸಂಸ್ಕಾರ,ಶಿಸ್ತು, ಸಾಮಾಜಿಕ ಕಳಕಳಿ, ನೈತಿಕ ಮೌಲ್ಯವನ್ನ ನಮ್ಮೊಳಗೇ ಹುಟ್ಟುಹಾಕುವವರು ನಮ್ಮ […]

ಈ ವಾರದ “ಝೀರೋ ಟು ಹೀರೋ” ಇಂಗ್ಲೀಷ್ ಕ್ಲಾಸ್: ವಿಡಿಯೋ ಇಲ್ಲಿದೆ

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಝೀರೋ ಟು ಹೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ.  ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ.  ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್  ಕ್ಲಾಸ್ ಗೆ ಎಂಟ್ರಿ ಆಗಿ https://youtu.be/WEDY2gsRizU

ಸಿಂಪಲ್ಲಾಗಿ ಇಂಗ್ಲೀಷ್ ಕಲೀರಿ:ಈ ವಾರದ ಇಂಗ್ಲೀಷ್ ಕ್ಲಾಸ್ ಕೇಳಿ

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ.  ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್  ಕ್ಲಾಸ್ ಗೆ ಎಂಟ್ರಿ ಆಗಿ https://youtu.be/IUoKN1DZYNc

ಅಜೆಂಡಾ ಭರಿತ ಅಕ್ಷರವನ್ನು ಅವಲೋಕಿಸದೆ ಅನುಸರಿಸುವುದು ಅಕ್ಷರಶಃ ಆತ್ಮಹತ್ಯೆ!: ದುರ್ಗಾ ಬರೆದ ಬರಹ

ದುರ್ಗಾ ಅಂ   ತರ್ಜಾಲ ಎಂಬ ವಿಸ್ಮಯವೊಂದು ಮನುಕುಲಕ್ಕೆ ಪಸರಿಸಿದ ನಂತರ ಜಗತ್ತು ಹಿಂದೆಂದೂ ಕಾಣದಷ್ಟು ಸಾಹಿತಿಗಳು, ಕವಿಗಳು, ಪ್ರೇರಕವಾಕ್ಯ ರಚನಕಾರರು, ವಿಮರ್ಶಕರು, ಟೀಕಾಕಾರರನ್ನು ಸೃಷ್ಟಿಸಿದ್ದು ಮತ್ತು ಅವರೆಲ್ಲರಿಗೂ ಖರ್ಚಿಲ್ಲದೆ ವೇದಿಕೆ ಒದಗಿಸಿಕೊಟ್ಟಿದ್ದು ಈ ಸಾಮಾಜಿಕ ಜಾಲತಾಣಗಳು! ಅಷ್ಟರಮಟ್ಟಿಗೆ ಜಾಲತಾಣಗಳ ಜನ್ಮ ನಿಜಕ್ಕೂ ತೃಪ್ತಿಕರ. ಇಂದು ಸೋಶಿಯಲ್ ಮೀಡಿಯ ಬಳಸುತ್ತಿರುವ ಎಲ್ಲರೂ ಕನಿಷ್ಠ ಅಕ್ಷರ ಟೈಪಿಸುವಷ್ಠಾದರೂ ವಿದ್ಯಾವಂತರೇ! ಹಾಗಾಗಿ ಇಲ್ಲಿ ಬರಹದ ವ್ಯಸನ ಹೊಂದಿರುವ ವರ್ಗವೊಂದು ಬಹು ದೊಡ್ಡ ಸಂಖ್ಯೆಯಲ್ಲಿದೆ. ಚುಟುಕಾದ ಪೋಸ್ಟುಗಳು ಮತ್ತು ವಿಶಾಲವಾದ ಕಮೆಂಟುಗಳೂ […]