ಮೇ 11ರಿಂದ MSDC ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ‘ರೆಸಿನ್ ಆರ್ಟ್’ ಸಮರ್ ಕ್ಯಾಂಪ್: ಅತ್ಯುತ್ತಮ ಕರಕುಶಲ ಕಲೆಗಳನ್ನು ಕಲಿಯಲು ಇದೊಳ್ಳೆ ಅವಕಾಶ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ‘ರೆಸಿನ್ ಆರ್ಟ್’ ಸಮರ್ ಕ್ಯಾಂಪ್ ನ್ನು ಮೇ 11ರಿಂದ ಮೇ 15ರವರೆಗೆ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಇಲ್ಲಿ ಅತ್ಯುತ್ತಮ ಕರಕುಶಲ ಕಲೆಗಳನ್ನು ಕಲಿಯುವ ಅವಕಾಶ ದೊರೆಯಲಿದೆ. ಈ ಶಿಬಿರದಲ್ಲಿ ಓಶನ್ ಆರ್ಟ್, ಕೋಸ್ಟರ್ಸ್ ಮತ್ತು ಕೀಚೇನ್ಸ್ ತಯಾರಿ, ಬುಕ್ಮಾರ್ಕ್ಸ್ ಹಾಗೂ ಡೆಕರ್ ವಸ್ತುಗಳ ನಿರ್ಮಾಣ, ಹ್ಯಾಂಡ್ಸ್-ಆನ್ […]
ಡೇಟಿಂಗ್ ಹೋಗುವಾಗ ಇಬ್ಬರೂ ಲವ್ ಬರ್ಡ್ಸ್, ಹೊಟೇಲ್ ಬಿಲ್ ಹಂಚಿ ಕೊಳ್ಳುವ ಎಂದದ್ದಕ್ಕೆ ಬ್ರೇಕಪ್: ವೈರಲ್ ಆದ ಬಿಲ್ ಪ್ರೇಮ ಕಹಾನಿ!

ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಡೇಟಿಂಗ್ ಎಂದರೆ ಕೇವಲ ಕಾಫಿ, ಡಿನ್ನರ್ ಅಥವಾ ಔಟಿಂಗ್ ಮಾತ್ರವಲ್ಲ, ಅದು ಈಗ ಸಂಬಂಧಗಳ ಮನಸ್ಥಿತಿ ಪರೀಕ್ಷೆಯಂತಾಗಿದೆ. ಇತ್ತೀಚೆಗೆ ಮುಂಬೈನ ಹೈ-ಪ್ರೊಫೈಲ್ ಮಹಿಳೆಯೊಬ್ಬರ ಡೇಟಿಂಗ್ ಅನುಭವ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯವರೆಗೆ ಸಾಗಬಹುದೆಂದುಕೊಂಡಿದ್ದ ಸಂಬಂಧ ಕೇವಲ ₹2,500 ಕಾರಣಕ್ಕೆ ಮುರಿದಿದ್ದು ಎಲ್ಲರ ಗಮನ ಸೆಳೆದಿದೆ. ಮುಂಬೈನಲ್ಲಿ ವಾಸಿಸುವ 36 ವರ್ಷದ ಮಹಿಳೆ ವರ್ಷಕ್ಕೆ ಸುಮಾರು ₹80 ಲಕ್ಷ ಆದಾಯ ಹೊಂದಿದ್ದಾರೆ ಎನ್ನಲಾಗಿದೆ. ಮ್ಯಾಚ್ಮೇಕಿಂಗ್ ಸೇವೆಯ ಮೂಲಕ ಅವರು ಒಬ್ಬ ಯುವಕನನ್ನು […]
ಮೊಟ್ಟೆ ಬೇಯಿಸುವಾಗ ನೀರಿಗೆ ಒಂದಿಷ್ಟು ಉಪ್ಪು ಹಾಕಿ! ಇದು ಸ್ಪೆಷಲ್ ಕುಕಿಂಗ್ ಟಿಪ್ಸ್

ಮೊಟ್ಟೆ ಬೇಯಿಸುವಾಗ ನೀರಿಗೆ ಸ್ವಲ್ಪ ಉಪ್ಪು ಸೇರಿಸುವುದು ಬಹುಜನರು ಅನುಸರಿಸುವ ಹಳೆಯ ಅಡುಗೆ ಟ್ರಿಕ್ ಆಗಿದೆ. ಆದರೆ ಇದರ ಹಿಂದೆ ಇರುವ ನಿಜವಾದ ಕಾರಣಗಳು ಏನು ಎಂಬುದು ಹಲವರಿಗೆ ತಿಳಿದಿಲ್ಲ. ಸಿಪ್ಪೆ ಸುಲಭವಾಗಿ ತೆಗೆಯಲು ಸಹಾಯ ಉಪ್ಪು ನೀರಿನಲ್ಲಿ ಮೊಟ್ಟೆ ಕುದಿಸಿದರೆ, ಸಿಪ್ಪೆ ಸುಲಭವಾಗಿ ಬಿಡಿಸಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಹೊಸ ಮೊಟ್ಟೆಗಳ ಸಿಪ್ಪೆ ಬಿಗಿಯಾಗಿ ಅಂಟಿಕೊಂಡಿರುವ ಸಂದರ್ಭದಲ್ಲಿ ಈ ವಿಧಾನ ಉಪಯುಕ್ತವಾಗಬಹುದು. ಒಡೆದ ಮೊಟ್ಟೆಗೆ ರಕ್ಷಣೆ ಮೊಟ್ಟೆ ಕುದಿಸುವಾಗ ಅದು ಒಡೆದರೆ, ಉಪ್ಪು ನೀರು […]
ಉರಿ ಮೂತ್ರ, ಮೂತ್ರನಾಳದ ಸೋಂಕು ಎಂದಿಗೂ ಕಡೆಗಣಿಸಬೇಡಿ: ಇಲ್ಲಿದೆ ಉಪಯುಕ್ತ ಮಾಹಿತಿ

ಮೂತ್ರನಾಳದ ಸೋಂಕು Urinary Tract Infection(UTI), ಮೂತ್ರ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಮೂತ್ರಪಿಂಡ, ಮೂತ್ರಾಶಯ (Bladder), ಮೂತ್ರನಾಳ (Urethra) ಗಳಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಸೋಂಕಾಗಿದೆ. ಇದು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೂ, ಪುರುಷರು ಮತ್ತು ಮಕ್ಕಳಲ್ಲೂ ಇದು ಕಾಣಿಸಿಕೊಳ್ಳಬಹುದು. ಪ್ರಮುಖ ಕಾರಣಗಳು ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಲಕ್ಷಣಗಳು ತಡೆಗಟ್ಟುವಿಕೆ ಕ್ರಮಗಳು UTI ಸಾಮಾನ್ಯ ಸಮಸ್ಯೆಯಾದರೂ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ […]
ಬೇಸಿಗೆಗೆ ಇಡ್ಲಿ, ದೋಸೆ, ವಡೆ ತಿನ್ನುವ ಮೊದಲು ಎಚ್ಚರಿಕೆ ಬೇಕೇ ಬೇಕು: ಇಡ್ಲಿ ತಿಂದು ಉದ್ಯೋಗಿಗಳು ಅಸ್ವಸ್ಥರಾದ ಪ್ರಕರಣ, ಈಗ ಹಲವು ಚರ್ಚೆಗೆ ಕಾರಣ!

ಬೆಂಗಳೂರು: ನಗರದ ಖಾಸಗಿ ಕಂಪನಿಯ ಕ್ಯಾಂಟೀನ್ನಲ್ಲಿ ಇಡ್ಲಿ, ವಡೆ ಹಾಗೂ ಸಾಂಬಾರ್-ಅನ್ನ ಸೇವಿಸಿದ ಬಳಿಕ 97 ಮಂದಿ ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ಹುದುಗಿಸಿದ (fermented) ಆಹಾರಗಳ ಸುರಕ್ಷತೆ ಕುರಿತು ಚರ್ಚೆಗಳು ಮತ್ತೆ ಜೋರಾಗಿದೆ. ಸಾಮಾನ್ಯವಾಗಿ ಇಡ್ಲಿ, ದೋಸೆ, ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಕರುಳಿನ ಆರೋಗ್ಯಕ್ಕೆ ಉತ್ತಮ, ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆಯ ಹೆಚ್ಚಿನ ತಾಪಮಾನದಲ್ಲಿ ಇವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅಪಾಯ ಉಂಟಾಗಬಹುದು […]