ಉರಿ ಮೂತ್ರ, ಮೂತ್ರನಾಳದ ಸೋಂಕು ಎಂದಿಗೂ ಕಡೆಗಣಿಸಬೇಡಿ: ಇಲ್ಲಿದೆ ಉಪಯುಕ್ತ ಮಾಹಿತಿ

ಮೂತ್ರನಾಳದ ಸೋಂಕು Urinary Tract Infection(UTI), ಮೂತ್ರ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಮೂತ್ರಪಿಂಡ, ಮೂತ್ರಾಶಯ (Bladder), ಮೂತ್ರನಾಳ (Urethra) ಗಳಲ್ಲಿ ಉಂಟಾಗುವ ಬ್ಯಾಕ್ಟೀರಿಯಾ ಸೋಂಕಾಗಿದೆ. ಇದು ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದ್ದರೂ, ಪುರುಷರು ಮತ್ತು ಮಕ್ಕಳಲ್ಲೂ ಇದು ಕಾಣಿಸಿಕೊಳ್ಳಬಹುದು.

ಪ್ರಮುಖ ಕಾರಣಗಳು

ಮೂತ್ರನಾಳದ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ.

  • ಸ್ವಚ್ಛತೆಯ ಕೊರತೆ
  • ಕಡಿಮೆ ಪ್ರಮಾಣದ ನೀರು ಸೇವನೆ
  • ದೀರ್ಘ ಕಾಲ ಮೂತ್ರವನ್ನು ತಡೆಹಿಡಿಯುವುದು
  • ಲೈಂಗಿಕ ಚಟುವಟಿಕೆ ನಂತರ ಸರಿಯಾದ ಸ್ವಚ್ಛತೆ ಇಲ್ಲದಿರುವುದು
  • ಡಯಾಬಿಟಿಸ್ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರು
  • ಗರ್ಭಾವಸ್ಥೆ

ಲಕ್ಷಣಗಳು

  • ಮೂತ್ರವಿಸರ್ಜನೆ ವೇಳೆ ಉರಿ ಅಥವಾ ನೋವು
  • ಪದೇಪದೇ ಮೂತ್ರವಿಸರ್ಜನೆಗೆ ಹೋಗಬೇಕೆನಿಸುವುದು
  • ಮೂತ್ರದಲ್ಲಿ ದುರ್ವಾಸನೆ ಅಥವಾ ಮಸುಕಾದ ಬಣ್ಣ
  • ಕೆಳ ಹೊಟ್ಟೆ ನೋವು
  • ಕೆಲವೊಮ್ಮೆ ಜ್ವರ

ತಡೆಗಟ್ಟುವಿಕೆ ಕ್ರಮಗಳು

  • ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯಿರಿ
  • ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ
  • ಮೂತ್ರವನ್ನು ತಡೆಹಿಡಿಯಬೇಡಿ
  • ಲೈಂಗಿಕ ಚಟುವಟಿಕೆ ನಂತರ ಸ್ವಚ್ಛತೆ ಪಾಲಿಸಿ
  • ಹತ್ತಿಯ ಒಳಉಡುಪುಗಳನ್ನು ಬಳಸಿ
  • ಪಬ್ಲಿಕ್ ಟಾಯ್ಲೆಟ್ ಬಳಸುವಾಗ ಜಾಗರೂಕರಾಗಿರಿ
  • ಮುಟ್ಟಿನ ಸಮಯದಲ್ಲಿ ಪ್ಯಾಡ್ ಗಳನ್ನು ಆಗಾಗ ಬದಲಿಸಿ

UTI ಸಾಮಾನ್ಯ ಸಮಸ್ಯೆಯಾದರೂ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಮೂತ್ರನಾಳದ ಸೋಂಕು ಸರಳವಾಗಿ ಚಿಕಿತ್ಸೆ ಪಡೆಯಬಹುದಾದ ಸಮಸ್ಯೆಯಾಗಿದ್ದು, ಸ್ವಚ್ಛತೆ ಮತ್ತು ಸರಿಯಾದ ಜೀವನಶೈಲಿಯ ಮೂಲಕ ಇದನ್ನು ಬಹುತೇಕ ತಡೆಯಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ, ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.