ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕೈಯಲ್ಲಿ ಮೂಡಿದ ಪಂಜುರ್ಲಿ ದೈವ

ಬೆಂಗಳೂರು: ಇಲ್ಲಿನ ಕ್ರೈಸ್ಟ್ ಯುನಿವರ್ಸಿಟಿಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿರುವ ಕಾಂತಾರದ ಪಂಜುರ್ಲಿ ದೈವ ನೋಡುಗರ ಮನವನ್ನು ಸೂರೆಗೈದಿದೆ. Exhilarating experience to create Kantara Live Art in front of a massive college audience! @shetty_rishab @hombalefilms #Kantara #Liveart #Bhootakola #Mangalore #Karnataka #India #Culture #Movies #Rishabshetty #Hombale #VilasNayak #Painting #ChristCollege #ChristUniversity pic.twitter.com/Ve0epb8U5y — Vilas Nayak (@VilasNayak) November […]

ವೆಬ್ ಸೀರೀಸ್ ಸಾಕು, ಸಿನಿಮಾ ಬೇಡ, ಮಿಸ್ ವರ್ಲ್ಡ್ ಕಿರೀಟ ಬೇಕು: ಮಿಸ್ ಇಂಡಿಯಾ ಸಿನಿ ಶೆಟ್ಟಿ

ಉಡುಪಿ: ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ನಂತರ ಸೋಮವಾರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಿನಿ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಚೆಂಡೆ, ಕೊಂಬು, ವಾದ್ಯಘೋಷಗಳೊಂದಿಗೆ ಮೆರವಣಿಗೆಯೊಂದಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ವೆಬ್‌ ಸೀರೀಸ್‌ಗಳಲ್ಲಿ ನಟಿಸಿರುವುದರಿಂದ ನಟನೆಯ ಅನುಭವ ಇದೆ. ಸದ್ಯ ಸಿನಿಮಾದಲ್ಲಿ ನಟಿಸುವ ಗುರಿ ಇಲ್ಲ. ನನ್ನ ಮುಂದಿನ ಕನಸು ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದು ಎಂದಿದ್ದಾರೆ. ತುಳು ನನ್ನ ಮಾತೃ ಭಾಷೆ, ತುಳುವಿನಲ್ಲಿ […]

ಅಂದಿನ ದೀಪಾವಳಿ ಹೀಗಿತ್ತು, ಇಂದಿನ ದೀಪಾವಳಿ ಹೀಗುಂಟು: ದೀಪಾವಳಿಯ ಒಂದು ಅವಲೋಕನವಿದು

ಡಾ. ಪರಶುರಾಮ ಕಾಮತ್ ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಸುಮಾರು ಎರಡು ದಶಕಗಳ ಹಿಂದಿನ ದೀಪಾವಳಿ ಆಚರಣೆಯ ಸೊಗಡು ಇಂದು ಎಲ್ಲೋ ಮಾಯವಾದಂತೆ ಕಾಣಿಸುತ್ತಿದೆ. ಅಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಹೀಗಾಗಿ ಮನೆ ತುಂಬಾ ಸದಸ್ಯರು, ಅವರೊಳಗಿನ ಅವಿನಾಭಾವ ಸಂಬಂಧ ಕುಟುಂಬದ ಒಗ್ಗಟ್ಟಿಗೆ ಸಹಕಾರಿಯಾಗಿತ್ತು. ದೀಪಾವಳಿಯಂದು ಮನೆಯವರೆಲ್ಲರೂ ಸಕ್ರೀಯವಾಗಿ ಭಾಗವಹಿಸುವ ಮೂಲಕ ಹಬ್ಬದ ಆಚರಣೆಗೆ ವಿಶೇಷ ಮೆರುಗನ್ನು ನೀಡುತ್ತಿದ್ದರು. ಇಂದಿನ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿ ಮತ್ತು ಮಕ್ಕಳು ಮಾತ್ರವಿರುವುದರಿಂದ ತಕ್ಕ ಮಟ್ಟಿನಲ್ಲಿ ದೀಪಾವಳಿಯ ಆಚರಣೆ […]

ಮಣಿಪಾಲದ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಶಿಕ್ಷಕಿಯರಿಗೆ “ಬ್ಯಾಕ್ ಟು ಸ್ಕೂಲ್” ಕಾರ್ಯಗಾರ

ಮಣಿಪಾಲ: ಕೋವಿಡ್ ನಂತರ ವಿದ್ಯಾರ್ಥಿಗಳು ತಮ್ಮ ತರಗತಿಯ ಪ್ರಾರಂಭೋತ್ಸವ ಕಾಣುತ್ತಿರುವ  ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸುವ ಸಮಸ್ಯೆ ಹಾಗೂ ಪರಿಹಾರಕ್ಕೆ “ಬ್ಯಾಕ್ ಟು ಸ್ಕೂಲ್” ಎಂಬ ವಿಶೇಷ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕಛೇರಿ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್‌ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದಾ ಟೀಚರ್ಸ್  ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಮಣಿಪಾಲದಲ್ಲಿ ನಡೆಯಿತು. ಸುಮಾರು ಮೂವತ್ತಾರು ವರ್ಷಗಳ ವಿದ್ಯಾಭ್ಯಾಸ ಕ್ಷೇತ್ರದ ಅನುಭವ ಹೊಂದಿರುವ ದೀಪಾ ಭಂಡಾರಿ, ಸಂತಮೇರಿ ಶಾಲೆ ಕನ್ನರ್ಪಾಡಿಯ ನಿವೃತ್ತ ಉಪ ಮುಖ್ಯೋಪಾಧ್ಯಾಯಿನಿ ಇವರು ಈ […]

ಬ್ರಹ್ಮಾವರದ ಜನನಿಯಲ್ಲಿ ಭರ್ಜರಿ “ದೀಪೋತ್ಸವ”: ಏನೇನಿದೆ ಸ್ಪೆಷಲ್ ಆಫರ್?

ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಇದೀಗ ದೀಪೋತ್ಸವದ ಸಂಭ್ರಮ. ಹೌದು ದೀಪಗಳ ಹಬ್ಬ ದೀಪಾವಳಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಜನನಿ ಕೊಡ್ತಿದೆ ನಿಮಗೊಂದು ಅವಕಾಶ. ಹೌದು ಈ ದೀಪಾವಳಿಗೆ ಕೊಂಬೋ ಆಫರ್, ಲಕ್ಕಿ ಕೂಪನ್, ಸ್ಪೆಷಲ್ ಎಕ್ಸ್ ಚೇಂಜ್ ಆಫರ್, 65% ವರೆಗೂ ಆಫ್, ಬಡ್ಡಿ ರಹಿತ, ಶುಲ್ಕ ರಹಿತ EMI  ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ಗುಣಮಟ್ಟದ ಬೆಸ್ಟ್ ಸರ್ವಿಸ್ ಮತ್ತು […]