ಮಣಿಪಾಲದ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಶಿಕ್ಷಕಿಯರಿಗೆ “ಬ್ಯಾಕ್ ಟು ಸ್ಕೂಲ್” ಕಾರ್ಯಗಾರ

ಮಣಿಪಾಲ: ಕೋವಿಡ್ ನಂತರ ವಿದ್ಯಾರ್ಥಿಗಳು ತಮ್ಮ ತರಗತಿಯ ಪ್ರಾರಂಭೋತ್ಸವ ಕಾಣುತ್ತಿರುವ  ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸುವ ಸಮಸ್ಯೆ ಹಾಗೂ ಪರಿಹಾರಕ್ಕೆ “ಬ್ಯಾಕ್ ಟು ಸ್ಕೂಲ್” ಎಂಬ ವಿಶೇಷ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕಛೇರಿ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್‌ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದಾ ಟೀಚರ್ಸ್  ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಮಣಿಪಾಲದಲ್ಲಿ ನಡೆಯಿತು.

ಸುಮಾರು ಮೂವತ್ತಾರು ವರ್ಷಗಳ ವಿದ್ಯಾಭ್ಯಾಸ ಕ್ಷೇತ್ರದ ಅನುಭವ ಹೊಂದಿರುವ ದೀಪಾ ಭಂಡಾರಿ, ಸಂತಮೇರಿ ಶಾಲೆ ಕನ್ನರ್ಪಾಡಿಯ ನಿವೃತ್ತ ಉಪ ಮುಖ್ಯೋಪಾಧ್ಯಾಯಿನಿ ಇವರು ಈ ವಿಶೇಷ ಕಾರ್ಯಗಾರವನ್ನು ನಡೆಸಿಕೊಟ್ಟರು.

ದೈಹಿಕವಾಗಿ ಶಿಕ್ಷಕರು, ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ, ಹೆತ್ತವರು  ಹಾಗೂ ಶಿಕ್ಷಕರು ಅದನ್ನು ಹೇಗೆ ಬಗೆಹರಿಸಬಹುದು ಮತ್ತು ವಿವಿಧ ಹಂತಗಳಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ  ಉಪಯುಕ್ತ ಮಾಹಿತಿಯನ್ನುನೀಡಿದರು.

ಈ ಕಾರ್ಯಗಾರದಲ್ಲಿ ಉಡುಪಿ ಆಸುಪಾಸಿನ ಶಾಲೆಗಳ ಶಿಕ್ಷಕಿಯರು ಹಾಗೂ ಸಂಸ್ಥೆಯಲ್ಲಿ ತರಬೇತಿ ಪಡೆದ  ಮತ್ತು ಪಡೆಯುತ್ತಿರುವ ಪ್ರಶಿಕ್ಷುಗಳು ಪ್ರಯೋಜನ ಪಡೆದರು. ಕಾರ್ಯಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಹಾಗೂ ಅಧ್ಯಾಪಕಿಯರು ಉಪಸ್ಥಿತರಿದ್ದರು.