ಕಾಂಗ್ರೆಸ್ ನಿಂದ ಸಮಾಜ ಬಲಿಷ್ಠಗೊಳಿಸುವ ಕಾರ್ಯ: ರಮಾನಾಥ್ ರೈ

ಬಂಟ್ವಾಳ: ಬಡವರಿಗಾಗಿ ಹಲವಾರು ಯೋಜನೆಗಳನ್ನು ತಂದು ಸಮಾಜವನ್ನು ಬಲಿಷ್ಠವಾಗಿರಿಸುವ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಶ್ರೀಮಂತರ ಪರವಾಗಿರುವ ಕೇಂದ್ರ ಸರಕಾರ ಬಡವರ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ. ಬಡವರಿಗೆ ಅನುಕೂಲವಾಗುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ ಹೆಮ್ಮೆ ನಮ್ಮಲ್ಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು. ಅವರು ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಕರ್ನಾಟಕ ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ಶಕ್ತಿ […]

ವಿದ್ಯುತ್ ದರ ಪ್ರತಿ ಯೂನಿಟ್‌ಗೆ 70 ಪೈಸೆ ಏಪ್ರಿಲ್​ನಿಂದಲೇ ಹೆಚ್ಚಳ: ಕೆಇಆರ್​ಸಿ ಸ್ಪಷ್ಟನೆ

ಬೆಂಗಳೂರು: ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 70 ಪೈಸೆ ಏರಿಕೆ ಮಾಡಿರುವ ಹಿನ್ನೆಲೆ ಬೆಸ್ಕಾಂ ಜೂನ್ ತಿಂಗಳಿನಲ್ಲಿ ವಿದ್ಯುತ್ ಬಳಕೆಯ ಬಿಲ್‌ನಲ್ಲಿ ಪರಿಷ್ಕತ ಶುಲ್ಕವನ್ನು ನಮೂದಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ) ಸ್ಪಷ್ಟಪಡಿಸಿದೆ. ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್‌ಗೆ ಪ್ರತಿ ಯೂನಿಟ್ ದರ 4.75 ರೂ. 100 ಯೂನಿಟ್‌ ಮೀರಿದ್ದಲ್ಲಿ ಬಳಸಿದ ಅಷ್ಟೂ ಯೂನಿಟ್‌ಗೆ 2ನೇ ಶೇಣಿ ದರ ಪ್ರತಿ ಯೂನಿಟ್‌ಗೆ 7 ರೂ. ನಂತೆ ಅನ್ವಯವಾಗಲಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ […]

ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿದ್ದ ಇಂಡಿಗೋ ವಿಮಾನ!

ನವದೆಹಲಿ: ಅಮೃತಸರದಿಂದ ವಿಮಾನವು ಸುಮಾರು ರಾತ್ರಿ 8 ಗಂಟೆಗೆ ಹೊರಟಿತ್ತು. ಪಾಕಿಸ್ತಾನದ ವಾಯುಪ್ರದೇಶಕ್ಕೆ ಸ್ವಲ್ಪ ಸಮಯದವರೆಗೆ ದಾರಿ ತಪ್ಪಿದ ನಂತರ ಸುಮಾರು ರಾತ್ರಿ 9:40 ಗಂಟೆಗೆ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು. ಕೆಟ್ಟ ಹವಾಮಾನದಿಂದಾಗಿ ಅಟ್ಟಾರಿಯಿಂದ ಪಾಕಿಸ್ತಾನದ ವಾಯುಪ್ರದೇಶಕ್ಕೆ ವಿಮಾನದ ವಿಚಲನವನ್ನು ತೆಗೆದುಕೊಳ್ಳಬೇಕಾಯಿತು ಎಂದು ಇಂಡಿಗೋ ವಿಮಾಯಯಾನ ಸಂಸ್ಥೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಶನಿವಾರ ಪಂಜಾಬ್​ನ ಅಮೃತಸರ ವಿಮಾನ ನಿಲ್ದಾಣದಿಂದ ಗುಜರಾತ್​ನ ಅಹಮದಾಬಾದ್​ಗೆ ಇಂಡಿಗೋ ವಿಮಾನ- 6ಇ-645 ಹಾರಾಟ ಆರಂಭಿಸಿತ್ತು. ಆದರೆ, ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ […]

ಕೆಜಿಎಫ್​ 2 ದಾಖಲೆ ಹಿಂದಿಕ್ಕಿ ‘ಆದಿಪುರುಷ್​’ ಮುಂಗಡ ಬುಕ್ಕಿಂಗ್ :ವಿದೇಶಗಳಲ್ಲಿ ಭರ್ಜರಿ ರೆಸ್ಪಾನ್ಸ್​!

‘ಆದಿಪುರುಷ್​’.. ಓಂ ರಾವುತ್​ ನಿರ್ದೇಶನದ ‘ಆದಿಪುರುಷ್’​ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಬಿಡುಗಡೆಗೂ ಮುನ್ನವೇ ‘ಆದಿಪುರುಷ್​’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಮುಂಗಡ ಟಿಕೆಟ್​ ಬುಕ್ಕಿಂಗ್‌ನಲ್ಲಿ ಕೆಜಿಎಫ್-2 ದಾಖಲೆಯನ್ನು ‘ಆದಿಪುರುಷ್​’ ಹಿಂದಿಕ್ಕಿದೆ. ಭೂಷಣ್​ ಕುಮಾರ್​ ನಿರ್ಮಾಣದ ಈ ಸಿನಿಮಾದಲ್ಲಿ ಪ್ರಭಾಸ್​, ಕೃತಿ ಸನೋನ್​, ಸೈಫ್​ ಅಲಿ ಖಾನ್​ ನಟಿಸಿದ್ದಾರೆ. ಇದೇ 16 ರಂದು ಚಿತ್ರ ತೆರೆ ಕಾಣಲಿದೆ. ಅದಕ್ಕೂ ಮುನ್ನವೇ ಆದಿಪುರುಷ್​ ದೇಶ, […]

9ನೇ ಬಾರಿಗೆ ಐಸಿಸಿ ವಿಶ್ವ ಚಾಂಪಿಯನ್​ ಪಟ್ಟಕ್ಕೆ ಪಾತ್ರವಾದ ಆಸ್ಟ್ರೇಲಿಯಾ

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಕಪ್ ಗೆದ್ದು ಆಸ್ಟ್ರೇಲಿಯಾ ತಂಡ ದಾಖಲೆ ನಿರ್ಮಾಣ ಮಾಡಿದೆ. ಐಸಿಸಿ ನಡೆಸುವ ಎಲ್ಲಾ ಪ್ರತಿಷ್ಠಿತ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸಿಸ್​ ತಂಡ ಭಾಜನವಾಗಿದೆ. ಒಟ್ಟು 9 ಐಸಿಸಿ ಟ್ರೋಫಿ ಮತ್ತು ಎಲ್ಲಾ ಐಸಿಸಿ ಕಪ್​ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸ್ಟ್ರೇಲಿಯಾ ಭಾಜನವಾಗಿದೆ. ಪಂದ್ಯದ ಮೆಲುಕು.. ಟಾಸ್​ ಗೆದ್ದು ಬೌಲಿಂಗ್​ ತೆಗೆದುಕೊಂಡ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ನ್ನು 469 ರನ್​ಗೆ ಆಲ್​ಔಟ್​ ಮಾಡಿತು. ಈ ಇನ್ನಿಂಗ್ಸ್​ನಲ್ಲಿ ಟ್ರಾವೆಸ್​ ಹೆಡ್​ […]