ರೈಲ್ವೆ ಇಲಾಖೆಯ ತಮ್ಮ ಕೆಲಸಗಳಿಗೆ ಮರಳಿದ ಕುಸ್ತಿ ಪಟುಗಳು: ನ್ಯಾಯಕ್ಕಾಗಿ ಹೋರಾಟ ಜಾರಿ

ನವದೆಹಲಿ: ದೇಶದ ಕುಸ್ತಿ ಒಕ್ಕೂಟದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಭಾರತದ ದಿಗ್ಗಜ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ರೈಲ್ವೆಯಲ್ಲಿ ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ಪ್ರತಿಭಟಿಸುವ ಕುಸ್ತಿಪಟುಗಳನ್ನು ದೆಹಲಿಯ ಜಂತರ್ ಮಂತರ್‌ನಿಂದ ಹೊರಹಾಕಿದ ಕೆಲವು ದಿನಗಳ ನಂತರ ಮೇ 31 ರಂದು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ತಮ್ಮ ಕೆಲಸವನ್ನು ಪುನರಾರಂಭಿಸಿದರು. ಅಲ್ಲಿ ಅವರು ಏಪ್ರಿಲ್‌ನಿಂದ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಿಂದ ಹಿಂದೆ […]

ಕಾಂಗ್ರೆಸ್ಸಿನ ಜನವಿರೋಧಿ ನೀತಿ ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

ಉಡುಪಿ: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜನತೆಗೆ ನೀಡಿರುವ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ಯಥಾವತ್ತಾಗಿ ಜಾರಿಗೊಳಿಸದೆ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. 200 ಯುನಿಟ್ ಉಚಿತ ವಿದ್ಯುತ್ ಎಂದಿರುವ ಕಾಂಗ್ರೆಸ್ ಇದೀಗ 1 ವರ್ಷದ ಸರಾಸರಿ ಎಂದು ವರಸೆ ಬದಲಿಸಿ, ವಿದ್ಯುತ್ ದರವನ್ನು ಕೂಡಾ ಧಿಡೀರ್ ಹೆಚ್ಚಿಸಿರುವುದು ಖಂಡನೀಯ. ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಗೊಂದಲ ಸೃಷ್ಠಿಸುವ ಬದಲು ಸರಕಾರ ಜನಪರ ಆಡಳಿತದತ್ತ ಗಮನ ಹರಿಸುವುದು ಉತ್ತಮ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ […]

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರಿನ ತನಕ ವಿಸ್ತರಿಸುವಂತೆ ಕೇಂದ್ರ ಸಚಿವೆಗೆ ಮನವಿ ಸಲ್ಲಿಸಿದ ಯಶ್ ಪಾಲ್ ಸುವರ್ಣ

ಉಡುಪಿ: ಇಲ್ಲಿನ ಶಾಸಕ ಯಶ್ ಪಾಲ್ ಸುವರ್ಣ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಂಗಳೂರಿಗೆ ವಿಸ್ತರಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಅವರ ಮೂಲಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರಿಗೆ ಮನವಿ ಸಲ್ಲಿಸಿದರು. ಶೀಘ್ರವೇ ಗೋವಾ – ಮುಂಬೈ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಗೊಳ್ಳಲಿದ್ದು ಇದನ್ನು ಮಂಗಳೂರಿನ ತನಕ ವಿಸ್ತರಿಸಿದಲ್ಲಿ ಉಡುಪಿ ಹಾಗೂ ಮಂಗಳೂರು ಭಾಗದ ಪ್ರಯಾಣಿಕರಿಗೆ ಇದರ ಪ್ರಯೋಜನ ಲಭಿಸಲಿದೆ. ಅಲ್ಲದೆ ಕಾರವಾರದಿಂದ […]

ಶ್ರೀಕೃಷ್ಣನ ಕರ್ಮಭೂಮಿ ದ್ವಾರಕೆಯಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪೌರಾಭಿನಂದನೆ

ಉಡುಪಿ: ಪರ್ಯಾಯ ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಸುಪ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಪರ್ಯಾಯ ಪೂರ್ವಭಾವಿಯಾಗಿ ದ್ವಾರಕ ಕ್ಷೇತ್ರ ಯಾತ್ರೆ ನಡೆಸಿ ಗೋಮತಿ ನದಿ ಸಾಗರ ಸಂಗಮದಲ್ಲಿ ತೀರ್ಥಸ್ಥಾನ ನಡೆಸಿ ಭಕ್ತರೊಂದಿಗೆ ಶ್ರೀಕೃಷ್ಣ ದರ್ಶನ ಮಾಡಿದರು. ಪಲಿಮಾರು ಮಠದ ದ್ವಾರಕ ಶಾಖೆಯಲ್ಲಿ ಸಂಸ್ಥಾನ ಪೂಜೆ ನಡೆಸಿದರು. ಸಂಜೆ ನಡೆದ ಸಮಾರಂಭದಲ್ಲಿ ದ್ವಾರಕೆಯ ಪೌರಾಭಿನಂದನೆಯನ್ನು ಸ್ವೀಕರಿಸಿ ಉಡುಪಿಗೂ ಮಧ್ವಾಚಾರ್ಯರಿಗೂ ಇರುವ ಸಂಬಂಧವನ್ನು ವಿವರಿಸಿ ಪರ್ಯಾಯ ಮಹೋತ್ಸವ ಸಂದರ್ಭ ಉಡುಪಿಗೆ ಬರುವಂತೆ ಆಹ್ವಾನ ನೀಡಿದರು. ದ್ವಾರಕೆಯ ಮಾಜಿ ಮೇಯರ್, ದ್ವಾರಕ ಬ್ರಾಹ್ಮಣ […]

ರಾಜ್ಯ ಸರಕಾರದ ಜನವಿರೋಧಿ ನೀತಿ ಬಿಡದಿದ್ದರೆ ನಿತ್ಯ ಹೋರಾಟಕ್ಕೂ ಸಿದ್ದ: ಕಾಪು ಬಿಜೆಪಿ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಪು ಪೇಟೆಯಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ರಾಜ್ಯ ಸರಕಾರ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿ ಇದೀಗ ವಾರ್ಷಿಕ ಸರಾಸರಿಯ ಶೇ.10 ರಷ್ಟು ಮಾತ್ರ ಉಚಿತ ಎನ್ನುತ್ತಾ ಜನರಿಗೆ ಕೊಟ್ಟ ವಚನ ಮುರಿದು ವಚನಭ್ರಷ್ಟವಾಗಿದೆ. ಅಲ್ಲದೆ ಪ್ರತಿ ಯುನಿಟ್ ವಿದ್ಯುತ್ ಗೆ ಸುಮಾರು […]