ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿದ್ದ ಇಂಡಿಗೋ ವಿಮಾನ!

ನವದೆಹಲಿ: ಅಮೃತಸರದಿಂದ ವಿಮಾನವು ಸುಮಾರು ರಾತ್ರಿ 8 ಗಂಟೆಗೆ ಹೊರಟಿತ್ತು. ಪಾಕಿಸ್ತಾನದ ವಾಯುಪ್ರದೇಶಕ್ಕೆ ಸ್ವಲ್ಪ ಸಮಯದವರೆಗೆ ದಾರಿ ತಪ್ಪಿದ ನಂತರ ಸುಮಾರು ರಾತ್ರಿ 9:40 ಗಂಟೆಗೆ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು. ಕೆಟ್ಟ ಹವಾಮಾನದಿಂದಾಗಿ ಅಟ್ಟಾರಿಯಿಂದ ಪಾಕಿಸ್ತಾನದ ವಾಯುಪ್ರದೇಶಕ್ಕೆ ವಿಮಾನದ ವಿಚಲನವನ್ನು ತೆಗೆದುಕೊಳ್ಳಬೇಕಾಯಿತು ಎಂದು ಇಂಡಿಗೋ ವಿಮಾಯಯಾನ ಸಂಸ್ಥೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಶನಿವಾರ ಪಂಜಾಬ್​ನ ಅಮೃತಸರ ವಿಮಾನ ನಿಲ್ದಾಣದಿಂದ ಗುಜರಾತ್​ನ ಅಹಮದಾಬಾದ್​ಗೆ ಇಂಡಿಗೋ ವಿಮಾನ- 6ಇ-645 ಹಾರಾಟ ಆರಂಭಿಸಿತ್ತು. ಆದರೆ, ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿತ್ತು. ಗುಜ್ರಾನ್‌ವಾಲಾವರೆಗೆ ತೆರಳಿದ ವಿಮಾನವು ಯಾವುದೇ ಅಪಾಯವಿಲ್ಲದೇ ಭಾರತದ ವಾಯುಪ್ರದೇಶಕ್ಕೆ ಮರಳಿದೆ. ಪ್ರತಿಕೂಲ ಹವಾಮಾನದಿಂದಾಗಿ ಅಮೃತಸರ ಮತ್ತು ಅಹಮದಾಬಾದ್​ ನಡುವೆ ಹಾರಾಟ ಮಾಡುತ್ತಿದ್ದ ಇಂಡಿಗೋ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದೆ ಘಟನೆ ವರದಿಯಾಗಿದೆ.

ಸ್ವಲ್ಪ ಸಮಯದ ನಂತರ ಸುರಕ್ಷಿತವಾಗಿ ಅಹಮದಾಬಾದ್‌ನಲ್ಲಿ ಇಳಿದಿದೆ ಎಂದು ವಿಮಾಯಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಪಂಜಾಬ್​ನ ಅಮೃತಸರ ವಿಮಾನ ನಿಲ್ದಾಣದಿಂದ ಗುಜರಾತ್​ನ ಅಹಮದಾಬಾದ್​ಗೆ ಇಂಡಿಗೋ ವಿಮಾನ- 6ಇ-645 ಹಾರಾಟ ಆರಂಭಿಸಿತ್ತು. ಆದರೆ, ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿತ್ತು. ಗುಜ್ರಾನ್‌ವಾಲಾವರೆಗೆ ತೆರಳಿದ ವಿಮಾನವು ಯಾವುದೇ ಅಪಾಯವಿಲ್ಲದೇ ಭಾರತದ ವಾಯುಪ್ರದೇಶಕ್ಕೆ ಮರಳಿದೆ.

ವಿಮಾನವನ್ನು ದೇಶದ ಎರಡೂ ಎಟಿಸಿ (Air traffic control – ATC) ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ. ಅಮೃತಸರ ಎಟಿಸಿಯಿಂದ ಸಿಬ್ಬಂದಿ ಆರ್/ಟಿಯಲ್ಲಿ ಪಾಕಿಸ್ತಾನದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಇಂಡಿಗೋ ತಿಳಿಸಿದೆ. ಮತ್ತೊಂದೆಡೆ, ವಿಮಾನದ ರಾಡಾರ್ ಪ್ರಕಾರ, ಪ್ರತಿ ಗಂಟೆಗೆ 454 ನಾಟಿಕಲ್ ಮೈಲಿಗಳ ವೇಗದಲ್ಲಿ ವಿಮಾನವು ಲಾಹೋರ್‌ನ ಉತ್ತರಕ್ಕೆ ಪ್ರವೇಶಿಸಿತು. ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಮತಿಸಲಾಗಿರುವುದರಿಂದ ಇದು ಸಾಮಾನ್ಯ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪಾಕಿಸ್ತಾನದ ಡಾನ್​ ಪತ್ರಿಕೆ ವರದಿ ಮಾಡಿದೆ.

ಮತ್ತೊಂದೆಡೆ, ಶನಿವಾರದಂದು ದೆಹಲಿ ಮತ್ತು ಚೆನ್ನೈ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದ ಎಂಜಿನ್‌ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಟೇಕ್​ ಆಫ್​ ಆದ ಒಂದು ಗಂಟೆಯೊಳಗೆ ವಿಮಾನ ಪವಾಸ್​ ಆಗಿತ್ತು. ಇದರಲ್ಲಿ ಸುಮಾರು 230 ಜನ ಪ್ರಯಾಣಿಕರಿದ್ದರು ಎಂದು ವರದಿಯಾಗಿತ್ತು.
ಮೇ ತಿಂಗಳಲ್ಲಿ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನವು ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಸುಮಾರು 10 ನಿಮಿಷಗಳ ಕಾಲ ಅಲ್ಲಿಯೇ ಸಂಚರಿಸಿ ಪಾಕಿಸ್ತಾನಕ್ಕೆ ಮರಳಿದ ಘಟನೆ ವರದಿಯಾಗಿತ್ತು. ಈ ವಿಮಾನವು ಮೇ 4ರಂದು ಮಸ್ಕತ್‌ನಿಂದ ಹಿಂತಿರುಗುತ್ತಿತ್ತು. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದಾಗ್ಯೂ, ಭಾರೀ ಮಳೆಯಿಂದಾಗಿ ಪೈಲಟ್‌ಗೆ ವಿಮಾನವನ್ನು ಇಳಿಸಲು ಕಷ್ಟವಾಗಿತ್ತು ಎಂದು ವರದಿ ತಿಳಿಸಿತ್ತು.