ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ, ಮಾದಕವಸ್ತುಗಳ ಕಳ್ಳಜಾಲ ಮಟ್ಟ ಹಾಕಿದ ಪೊಲೀಸರು: ರೂ. 3.77 ಕೋಟಿ ಮೌಲ್ಯದ ಚಿನ್ನ, ಡ್ರಗ್ಸ್ ವಶ: ಏಳು ಮಂದಿ ಬಂಧನ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆಯುತ್ತಿದ್ದ ಚಿನ್ನ ಮತ್ತು ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಭೇದಿಸಿದ್ದಾರೆ. ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ₹3.77 ಕೋಟಿ ಮೌಲ್ಯದ 2.95 ಕೆ.ಜಿ. ವಿದೇಶಿ ಚಿನ್ನ, 1.33 ಕೆ.ಜಿ. ಆಂಫೆಟಮೈನ್ ಮಾದಕವಸ್ತು, ₹73 ಲಕ್ಷ ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದು, ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಶೌಚಾಲಯದ ಮೂಲಕ ಚಿನ್ನ ಸಾಗಾಟ: ನವೆಂಬರ್ 23ರಂದು ನಡೆಸಿದ ಕಾರ್ಯಾಚರಣೆಯಲ್ಲಿ […]

ಭಾರತದಲ್ಲಿ ಪಾಕಿಸ್ತಾನಿ ವೆಬ್‌ಸಿರೀಸ್ ಪ್ರಸಾರ ಮಾಡುವಂತಿಲ್ಲ, ನೆಟ್‌ಫ್ಲಿಕ್ಸ್‌ಗೆ ಕೇಂದ್ರದ ಖಡಕ್ ಎಚ್ಚರಿಕೆ

ನವದೆಹಲಿ: ಪಾಕಿಸ್ತಾನದ ಜನಪ್ರಿಯ ನಟರಾದ ಫವಾದ್ ಖಾನ್ ಮತ್ತು ಮಹಿರಾ ಖಾನ್ ಅಭಿನಯಿಸಿರುವ ‘ಜೋ ಬಚೇ ಹೈ ಸಾಂ ಸಮೇತ್ ಲೋ’ ವೆಬ್‌ಸಿರೀಸ್ ಅನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ. ಡಿಸೆಂಬರ್ 4ರಂದು ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ಸರಣಿಯ ಭಾರತದಲ್ಲಿನ ಪ್ರಸಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. 2025ರ ಮೇ 8ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ್ದ ಸಲಹಾ ಸೂಚನೆಯಂತೆ ಪಾಕಿಸ್ತಾನಿ ವೆಬ್‌ಸಿರೀಸ್, ಚಲನಚಿತ್ರ, ಹಾಡು ಹಾಗೂ […]

ದೆಹಲಿಯ ಮೆಟ್ರೋ, ಬಸ್ ನಿಲ್ದಾಣ ಮಹಿಳೆಯರಿಗೆ ಅಸುರಕ್ಷಿತ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ: ರಾಷ್ಟ್ರ ರಾಜಧಾನಿಯಲ್ಲಿಯೇ ಮಹಿಳೆಯರಿಗೆ ಸುರಕ್ಷತೆಯ ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮೆಟ್ರೊ ಅಥವಾ ಬಸ್ ನಿಲ್ದಾಣಗಳಿಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಹಿಳೆಯರು ಅಸುರಕ್ಷತೆ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.87.5ರಷ್ಟು ಮಂದಿ ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ನಡೆದು ಹೋಗುವಾಗ ಸುರಕ್ಷಿತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಇಕ್ವಿಟಿ ಆ್ಯಂಡ್ ಇನ್‌ಕ್ಲೂಷನ್ (CEQUIN) ಸಂಸ್ಥೆ ನಡೆಸಿದ ‘ಎವರಿಡೇ ಜರ್ನೀಸ್’ ಅಧ್ಯಯನದಲ್ಲಿ ಈ […]

ಮಣಿಪಾಲದಲ್ಲಿ MSDC ವತಿಯಿಂದ ನ. 29ರಂದು ಪ್ರೆಸ್-ಆನ್ ನೆಲ್ಸ್ ಕಾರ್ಯಾಗಾರ, ತಜ್ಞರಿಂದ ಸಲಹೆ, ವಿವಿಧ ಟ್ರೆಂಡ್‌ಗಳ ಕುರಿತು ಮಾಹಿತಿ

ಮಣಿಪಾಲ: ಮಣಿಪಾಲದ MSDC (Manipal Skill Development Center) ಅಂತಾರಾಷ್ಟ್ರೀಯ ಸೌಂದರ್ಯ ಮತ್ತು ಕ್ಷೇಮಾಭಿವೃದ್ಧಿ ವಿಭಾಗದ ವತಿಯಿಂದ ನವೆಂಬರ್ 29ರಂದು ‘ಪ್ರೆಸ್-ಆನ್ ನೆಲ್ಸ್ ಫಾರ್ ದಿ ಫೀಟ್’ ವಿಷಯದ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕಾರ್ಯಾಗಾರ ನಡೆಯಲಿದ್ದು, ಕಾಲ್ಬೆರಳಿನ ಉಗುರುಗಳಿಗೆ ಆಕರ್ಷಕ ವಿನ್ಯಾಸ ನೀಡುವ ಪ್ರೆಸ್-ಆನ್ ನೆಲ್ಸ್ ತಂತ್ರದ ಪ್ರಾತ್ಯಕ್ಷಿಕೆ, ತಜ್ಞರ ಸಲಹೆ ಹಾಗೂ ಇತ್ತೀಚಿನ ಟ್ರೆಂಡ್‌ಗಳ ಮಾಹಿತಿ ನೀಡಲಾಗುತ್ತದೆ. ಕಾರ್ಯಾಗಾರದ ಪ್ರವೇಶ ಶುಲ್ಕ 199 ರೂ. […]

ಶಬರಿಮಲೆಯಲ್ಲಿ ರಹಸ್ಯ ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಕಡಿವಾಣ: ಉಲ್ಲಂಘಿಸಿದರೆ ಕಾದಿದೆ ಕಠಿಣ ಶಿಕ್ಷೆ

ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್ ಮೂಲಕ ರಹಸ್ಯವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅಯ್ಯಪ್ಪ ಸ್ವಾಮಿ ವಿಗ್ರಹ, ಪವಿತ್ರ 18 ಮೆಟ್ಟಿಲುಗಳು, ಮೇಲ್ತಿರುಮುಟ್ಟಂ ಹಾಗೂ ಮಾಳಿಗಪುರಂ ದೇವಿ ಸನ್ನಿಧಿಯ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಯೂಟ್ಯೂಬ್, ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ದೇವಾಲಯದ ಒಳಭಾಗದಲ್ಲಿ ಚಿತ್ರೀಕರಣಕ್ಕೆ ಕೇರಳ ಹೈಕೋರ್ಟ್ ನಿರ್ಬಂಧ ವಿಧಿಸಿದ್ದರೂ ನಿಯಮ ಉಲ್ಲಂಘನೆ ಮುಂದುವರಿದಿದೆ. […]