ಮಣಿಪಾಲದಲ್ಲಿ MSDC ವತಿಯಿಂದ ನ. 29ರಂದು ಪ್ರೆಸ್-ಆನ್ ನೆಲ್ಸ್ ಕಾರ್ಯಾಗಾರ, ತಜ್ಞರಿಂದ ಸಲಹೆ, ವಿವಿಧ ಟ್ರೆಂಡ್‌ಗಳ ಕುರಿತು ಮಾಹಿತಿ

ಮಣಿಪಾಲ: ಮಣಿಪಾಲದ MSDC (Manipal Skill Development Center) ಅಂತಾರಾಷ್ಟ್ರೀಯ ಸೌಂದರ್ಯ ಮತ್ತು ಕ್ಷೇಮಾಭಿವೃದ್ಧಿ ವಿಭಾಗದ ವತಿಯಿಂದ ನವೆಂಬರ್ 29ರಂದು ‘ಪ್ರೆಸ್-ಆನ್ ನೆಲ್ಸ್ ಫಾರ್ ದಿ ಫೀಟ್’ ವಿಷಯದ ಕುರಿತು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕಾರ್ಯಾಗಾರ ನಡೆಯಲಿದ್ದು, ಕಾಲ್ಬೆರಳಿನ ಉಗುರುಗಳಿಗೆ ಆಕರ್ಷಕ ವಿನ್ಯಾಸ ನೀಡುವ ಪ್ರೆಸ್-ಆನ್ ನೆಲ್ಸ್ ತಂತ್ರದ ಪ್ರಾತ್ಯಕ್ಷಿಕೆ, ತಜ್ಞರ ಸಲಹೆ ಹಾಗೂ ಇತ್ತೀಚಿನ ಟ್ರೆಂಡ್‌ಗಳ ಮಾಹಿತಿ ನೀಡಲಾಗುತ್ತದೆ.

ಕಾರ್ಯಾಗಾರದ ಪ್ರವೇಶ ಶುಲ್ಕ 199 ರೂ. ಆಗಿದ್ದು, ಮಣಿಪಾಲದ ಈಶ್ವರನಗರದಲ್ಲಿರುವ MSDC ಕಟ್ಟಡದ ಮೂರನೇ ಮಹಡಿಯ ಓರೇನ್ ಇಂಟರ್‌ನ್ಯಾಷನಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 8123165068 ಸಂಪರ್ಕಿಸಬಹುದು. ಪಾವತಿಯ ಬಳಿಕ ವಾಟ್ಸ್‌ಆ್ಯಪ್ ಮೂಲಕ ರಸೀದಿ ಅಥವಾ ವಹಿವಾಟಿನ ಸಂಖ್ಯೆಯನ್ನು ಹಂಚಿಕೊಳ್ಳಬೇಕು. ವೆಬ್‌ಸೈಟ್: https://msdcskills.org/beauty-wellness/