ಕುಂದಾಪುರದಲ್ಲಿ ಡಿ. 2ರಿಂದ ಕ್ವಾಂಟಮ್ ಸೈನ್ಸ್ ಎಫ್‌ಡಿಪಿ ಕಾರ್ಯಕ್ರಮ

ಕುಂದಾಪುರ: ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರಿನ ಕ್ವಾಂಟಮ್ ರಿಸರ್ಚ್ ಪಾರ್ಕ್ (QuRP) ಅಡಿಯಲ್ಲಿ ಕ್ವಾಂಟಮ್ ಸೈನ್ಸ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (Q-SFDP 2026) ಆಯೋಜಿಸಲಾಗಿದೆ. ಡಿಸೆಂಬರ್ 2ರಿಂದ 6ರವರೆಗೆ ಕುಂದಾಪುರದಲ್ಲಿ ಐದು ದಿನಗಳ ಕಾರ್ಯಕ್ರಮ ನಡೆಯಲಿದೆ. IISc ಬೆಂಗಳೂರಿನ QuRP ಅಡಿಯಲ್ಲಿ IMJ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಮತ್ತು MIT ಕುಂದಾಪುರ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. IISc, RRI, IISER, IIT ಹಾಗೂ IBM Quantum ಸಂಸ್ಥೆಗಳ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ […]

ಉತ್ತಮ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಮಹತ್ತರವಾದುದು- ಪ್ರತೀಕ್ ಬಾಯಲ್

ಉಡುಪಿ: ಪೊಲೀಸರ ಕರ್ತವ್ಯದಲ್ಲಿ ಒತ್ತಡ ಸಹಜ. ಇಂತಹ ಒತ್ತಡವನ್ನು ನಿವಾರಿಸಿಕೊಳ್ಳಲು ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದೆ. ಕ್ರೀಡೆ ಮಾನಸಿಕ ಒತ್ತಡ ಕಡಿಮೆ ಮಾಡುವುದರ ಜತೆಗೆ ಪರಸ್ಪರ ಭಾತೃತ್ವದ ಭಾವನೆಯನ್ನೂ ಬೆಳೆಸುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು. ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2026 ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕು. ಪೊಲೀಸ್ ಇಲಾಖೆಯ […]

ಅಂಡರ್‌–23 ಕರ್ನಾಟಕ ಕ್ರಿಕೆಟ್ ತಂಡಕ್ಕೆ ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆ

ಉಡುಪಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸುವ 2026–27ನೇ ಸಾಲಿನ ಪುರುಷರ ಅಂಡರ್‌–23 ಟಿ20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿಯ ನಿಶ್ಚಿತ್ ನಾಗರಾಜ್ ಪೈ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್‌ಸಿಎ) ವತಿಯಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಿಶ್ಚಿತ್ ಅವರು ಕರ್ನಾಟಕ ತಂಡಕ್ಕೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಡಿಸೆಂಬರ್ 1ರಿಂದ 13ರವರೆಗೆ ನಡೆಯಲಿರುವ ಬಿಸಿಸಿಐ ಪುರುಷರ ಅಂಡರ್‌–23 ಟಿ20 ಟ್ರೋಫಿ ಪಂದ್ಯಾವಳಿಯಲ್ಲಿ ಅವರು ಕರ್ನಾಟಕ […]

ಕಡಲ ತಡಿಯ ನಿಜವಾದ ಹೀರೋಗಳು: ಅಲೆಗಳ ನಡುವೆ ಜೀವ ಉಳಿಸುವ ಕಾವಲುಗಾರರು!

ಉಡುಪಿ: ಸಮಾಜದ ಕಣ್ಣಿಗೆ ಸದಾ ಕಾಣಿಸಿಕೊಳ್ಳದಿದ್ದರೂ, ಬೋರ್ಗರೆಯುವ ಕಡಲ ಅಲೆಗಳ ನಡುವೆ ಅಪಾಯಕ್ಕೆ ಸಿಲುಕಿದವರ ಪಾಲಿಗೆ ದೇವರಂತೆ ಧಾವಿಸಿ ಜೀವ ಉಳಿಸುವ ಈ ಕಡಲ ಕಾವಲುಗಾರರೇ ನಿಜವಾದ ಹೀರೋಗಳು.ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ತೀರದ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಾ, ನೀರಿನಲ್ಲಿ ಮಿಂದೆದ್ದು ಸಂಭ್ರಮಿಸುವ ಪ್ರವಾಸಿಗರು ಕೆಲವೊಮ್ಮೆ ಅರಿವಿಲ್ಲದೆ ಅಪಾಯಕ್ಕೆ ಸಿಲುಕುತ್ತಾರೆ. ಅಲೆಗಳ ಸೆಳೆತ, ಸಮುದ್ರದ ಸುಳಿಗಳು ಹಾಗೂ ನೀರಿನ ಆಳದ ಅರಿವಿಲ್ಲದೆ ಜೀವಾಪಾಯ ಎದುರಿಸುವ ಸಂದರ್ಭಗಳೂ […]

ಕೋಟೇಶ್ವರ ಕೊಡಿ ಹಬ್ಬದಲ್ಲಿ ಮಹಿಳೆಯ 6 ಲಕ್ಷ ಮೌಲ್ಯದ ಚಿನ್ನದ ಸರ ಕಳವು: ಐವರು ಆರೋಪಿಗಳ ಬಂಧನ

ಉಡುಪಿ: ಕೋಟೇಶ್ವರ ಕೊಡಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ನ.24ರಂದು ಗೀತಾ ಅವರು ಪತಿಯೊಂದಿಗೆ ಔಷಧ ತರಲೆಂದು ಕುಂದಾಪುರಕ್ಕೆ ತೆರಳುತ್ತಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೋಟೇಶ್ವರ ಬೈಪಾಸ್‌ನಲ್ಲಿ ಬಸ್‌ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಬೆಳಿಗ್ಗೆ 11.30ರ ಸುಮಾರಿಗೆ ದೇವರ ದರ್ಶನ ಪಡೆದಿದ್ದರು. ಬಳಿಕ […]