ದೆಹಲಿಯ ಮೆಟ್ರೋ, ಬಸ್ ನಿಲ್ದಾಣ ಮಹಿಳೆಯರಿಗೆ ಅಸುರಕ್ಷಿತ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಸಂಗತಿ: ರಾಷ್ಟ್ರ ರಾಜಧಾನಿಯಲ್ಲಿಯೇ ಮಹಿಳೆಯರಿಗೆ ಸುರಕ್ಷತೆಯ ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮೆಟ್ರೊ ಅಥವಾ ಬಸ್ ನಿಲ್ದಾಣಗಳಿಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿಯೂ ಮಹಿಳೆಯರು ಅಸುರಕ್ಷತೆ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.87.5ರಷ್ಟು ಮಂದಿ ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ನಡೆದು ಹೋಗುವಾಗ ಸುರಕ್ಷಿತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಇಕ್ವಿಟಿ ಆ್ಯಂಡ್ ಇನ್‌ಕ್ಲೂಷನ್ (CEQUIN) ಸಂಸ್ಥೆ ನಡೆಸಿದ ‘ಎವರಿಡೇ ಜರ್ನೀಸ್’ ಅಧ್ಯಯನದಲ್ಲಿ ಈ ಅಂಶಗಳು ಹೊರಬಂದಿವೆ.

ಅಕ್ಟೋಬರ್ 15ರಿಂದ ನವೆಂಬರ್ 2ರವರೆಗೆ ನಡೆದ ಸಮೀಕ್ಷೆಯಲ್ಲಿ ಒಟ್ಟು 1,882 ಪ್ರತಿಕ್ರಿಯೆಗಳು ಸಂಗ್ರಹವಾಗಿದ್ದು, ಅವುಗಳಲ್ಲಿ 1,588 ಪ್ರತಿಕ್ರಿಯೆಗಳನ್ನು ಮಾನ್ಯವೆಂದು ಪರಿಗಣಿಸಲಾಗಿದೆ. ಮಹಿಳೆಯರು, ಬಾಲಕಿಯರು ಹಾಗೂ ಎಲ್‌ಜಿಬಿಟಿಕ್ಯೂ+ ಸಮುದಾಯದವರ ಅಭಿಪ್ರಾಯಗಳನ್ನು ಅಧ್ಯಯನದಲ್ಲಿ ಸಂಗ್ರಹಿಸಲಾಗಿದೆ.

Make the headline more conciseClarify the survey findings