ಮಂಗಳೂರಿನಿಂದ 21 ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರು ಪ್ರಕ್ರಿಯೆ ಆರಂಭ; ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು 30 ಪೊಲೀಸ್ ತಂಡ

ಮಂಗಳೂರು: ಅಕ್ರಮವಾಗಿ ಭಾರತ ಪ್ರವೇಶಿಸಿ ಮಂಗಳೂರಿನಲ್ಲಿ ನಕಲಿ ದಾಖಲೆಗಳೊಂದಿಗೆ ಕೆಲಸ ಮಾಡುತ್ತಿದ್ದ ಆರೋಪದಡಿ ವಶಕ್ಕೆ ಪಡೆಯಲಾಗಿರುವ 21 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು 30 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಅಲ್ಲಿ ಅವರನ್ನು ಮುಂದಿನ ಕ್ರಮ ಹಾಗೂ ಗಡಿಪಾರು ಪ್ರಕ್ರಿಯೆಗಾಗಿ **ಗಡಿ ಭದ್ರತಾ ಪಡೆ (BSF)**ಗೆ ಹಸ್ತಾಂತರಿಸಲಾಗುವುದು. ಕಳೆದ ತಿಂಗಳು ಸುರತ್ಕಲ್ ಹಾಗೂ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಾ ಮತ್ತು ಕೋಡಿಕಲ್‌ನ ನಿರ್ಮಾಣ ಸ್ಥಳಗಳಲ್ಲಿ ಮಂಗಳೂರು ನಗರ ಪೊಲೀಸರು 21 ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. […]

ಅಳಿವೆಬಾಗಿಲಿನಲ್ಲಿ ಕಲ್ಲಿಗೆ ಬಡಿದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

ಮಂಗಳೂರು: ಮೀನುಗಾರಿಕಾ ಬೋಟ್‌ನ ತಳಭಾಗ ಕಲ್ಲಿಗೆ ಬಡಿದು ಬೋಟ್ ಮುಳುಗಡೆಯಾದ ಘಟನೆ ಮಂಗಳೂರಿನ ಅಳಿವೆಬಾಗಿಲಿನಲ್ಲಿ ನಡೆದಿದೆ. ‘ಆಯಾನ್’ ಹೆಸರಿನ ಪರ್ಸಿನ್ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅಳಿವೆಬಾಗಿಲಿನಲ್ಲಿ ಬೋಟ್‌ನ ತಳಭಾಗ ಕಲ್ಲಿಗೆ ಬಡಿದಿದೆ. ಪರಿಣಾಮ ಬೋಟ್‌ಗೆ ನೀರು ನುಗ್ಗಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬೋಟ್‌ ಮಾಲೀಕತ್ವ ಇಬ್ರಾಹಿಂ ಖಲೀಲ್ ಅವರಿಗೆ ಸೇರಿದ್ದು, ಬೋಟ್ ಮುಳುಗಡೆಯಿಂದಾಗಿ ಲಕ್ಷಾಂತರ […]

ಚೀನಾ ಮಾರುಕಟ್ಟೆಯಿಂದ ಸುಮಾರು 43 ಲಕ್ಷ ವಾಹನಗಳನ್ನು ಹಿಂಪಡೆಯಲು ನಿರ್ಧಾರ, ಟೆಸ್ಲಾ ಸೇರಿದಂತೆ 9 ಪ್ರಮುಖ ಕಾರು ಕಂಪನಿಗಳಿಗೆ ಆಘಾತ

ಬೀಜಿಂಗ್: ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಸಿಲುಕಿಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಟೆಸ್ಲಾ ಸೇರಿದಂತೆ 9 ಪ್ರಮುಖ ಕಾರು ಕಂಪನಿಗಳು ಚೀನಾ ಮಾರುಕಟ್ಟೆಯಿಂದ ಸುಮಾರು 43 ಲಕ್ಷ ವಾಹನಗಳನ್ನು ಹಿಂಪಡೆಯಲು ನಿರ್ಧರಿಸಿವೆ. ಚೀನಾದ ಆಟೋಮೊಬೈಲ್ ಇತಿಹಾಸದಲ್ಲೇ ಇದು ಅತಿ ದೊಡ್ಡ ಪ್ರಮಾಣದ ರೀಕಾಲ್ ಕಾರ್ಯಾಚರಣೆ ಎಂದು ವರದಿಯಾಗಿದೆ. ಇವಿ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸುವ ಮೆಕ್ಯಾನಿಕಲ್ ಎಮರ್ಜೆನ್ಸಿ ಡೋರ್-ರಿಲೀಸ್ ಹ್ಯಾಂಡಲ್‌ಗಳು ಅಪಘಾತದ ವೇಳೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಪ್ರಯಾಣಿಕರು ಹಾಗೂ ರಕ್ಷಣಾ […]

ತಯಾರಾಯ್ತು ಸಂಪೂರ್ಣ ಸ್ವದೇಶಿ ನಿರ್ಮಿತ ಎಕೆ-203!

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನಕ್ಕೆ ಮಹತ್ವದ ಯಶಸ್ಸು ದೊರೆತಿದೆ. ಶೇ.100ರಷ್ಟು ಭಾರತೀಯ ಕಚ್ಚಾವಸ್ತು ಹಾಗೂ ಸ್ವದೇಶಿ ಬಿಡಿಭಾಗಗಳಿಂದ ನಿರ್ಮಿಸಲಾದ ಅತ್ಯಾಧುನಿಕ ಎಕೆ-203 ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉತ್ತರ ಪ್ರದೇಶದ ಅಮೇಥಿಯ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಸಂಸ್ಥೆಯು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಈ ರೈಫಲ್ ಅನ್ನು ಸಂಪೂರ್ಣವಾಗಿ ದೇಶೀಯವಾಗಿ ತಯಾರಿಸಿದೆ. ಸ್ವದೇಶಿ ಮಾದರಿಯ ಈ ರೈಫಲ್‌ಗೆ ‘ಶೇರ್’ […]

ವಿಟ್ಲಪಿಂಡಿಗೆ ಮೊಸರುಕುಡಿಕೆ ಕಂಬ ಮುಹೂರ್ತ

ಉಡುಪಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ನಡೆಯಲಿರುವ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಕೃಷ್ಣಮಠದ ಕನಕ ಗೋಪುರದ ಬಳಿ ಮೊಸರುಕುಡಿಕೆ ಕಂಬದ ಮುಹೂರ್ತ ಭಾನುವಾರ ನೆರವೇರಿತು. ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಕೃಷ್ಣಮಠದ ಕೊಟ್ಟಾರಿಗಳಾದ ರಾಮ ಕೊಡಂಚ ಉಪಸ್ಥಿತರಿದ್ದರು.