ಉಡುಪಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ನಡೆಯಲಿರುವ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಕೃಷ್ಣಮಠದ ಕನಕ ಗೋಪುರದ ಬಳಿ ಮೊಸರುಕುಡಿಕೆ ಕಂಬದ ಮುಹೂರ್ತ ಭಾನುವಾರ ನೆರವೇರಿತು.
ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಕೃಷ್ಣಮಠದ ಕೊಟ್ಟಾರಿಗಳಾದ ರಾಮ ಕೊಡಂಚ ಉಪಸ್ಥಿತರಿದ್ದರು.















