ಆತ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ; ದಾನಿಗಳಿಂದ ಮಕ್ಕಳಿಗೆ ಸ್ಪೋರ್ಟ್ಸ್ ಯುನಿಫಾರ್ಮ್ ಡ್ರೆಸ್ ವಿತರಣೆ, ಸನ್ಮಾನ ಕಾರ್ಯಕ್ರಮ.

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀಮತಿ ಸಬೀನರವರು ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಕಬ್ಯಾಡಿಯವರು ಉಪಸ್ಥಿತರಿದ್ದರು. ಓಂತಿಬೆಟ್ಟು ದುರ್ಗಾ ವಿನಾಯಕ ಸ್ಟೋರ್ಸ್ ಮಾಲಕರಾದ ಪ್ರಕಾಶ್ ಪ್ರಭುರವರು ಧ್ವಜಾರೋಹಣ ಮಾಡಿದರು. ಇವರು ಶಾಲೆಯ ಎಲ್ಲಾ ಮಕ್ಕಳಿಗೆ ಸ್ಪೋರ್ಟ್ಸ್ ಯುನಿಫಾರ್ಮ್ ಡ್ರೆಸ್ ನ್ನು ಉಚಿತವಾಗಿ ನೀಡಿದರು. ಪ್ರಕಾಶ್ ಪ್ರಭುರವರು ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿರುವ ತ್ಯಾಗವನ್ನು ಸ್ಮರಿಸಿಕೊಂಡರು. ಮಕ್ಕಳು ಹೆತ್ತ ತಾಯಿಯನ್ನು […]

ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಬ್ರಹ್ಮಾವರ: ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಲಯನ್ ಐವನ್ ದೋನಾತ್ ಸುವಾರಿಸ್ ವಹಿಸಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ದಿನದ ಮಹತ್ವ, ದೇಶಭಕ್ತಿ ಹಾಗೂ ಯುವಜನರ ಜವಾಬ್ದಾರಿಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ರಾಮ್ ಪವಿತ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ವಿದ್ಯಾರ್ಥಿಗಳಿಗೆ ದೇಶಸೇವೆಯ ಮಹತ್ವ ಹಾಗೂ ಶಿಸ್ತುಬದ್ಧ ಜೀವನದ […]

ಪಕ್ಷ ರಾಜಕೀಯ ಮೀರಿದ ರಾಷ್ಟ್ರ ಪ್ರೇಮ ಎಲ್ಲರಲ್ಲೂ ತುಂಬಿಕೊಳ್ಳಲಿ: ಸ್ವಾತಂತ್ರ್ಯ ದಿನದ ವಿಶೇಷ ಬರಹ

ಇಂದಿನ 80ರ ಸ್ವಾತಂತ್ರ್ಯ ಸಂದರ್ಭದಲ್ಲಿ ನಾವೆಲ್ಲರೂ ಗಂಭೀರವಾಗಿ ಚಿಂತನೆ ಮಾಡ ಬೇಕಾದ ಘಟನೆ ಎಂದರೆ ದೇಶದ ಒಳಗು ಮತ್ತು ಹೊರಗಿನಿಂದ ಈ ರೀತಿಯಲ್ಲಿ ಒಡೆದು ಆಳುವ ಶಕ್ತಿಯಿಂದ ಎಚ್ಚರಿಕೆ ವಹಿಸಲೇಬೇಕು. ಜಾತಿ ಧಮ೯ ಭಾಷೆ ಪ್ರಾದೇಶಿಕತೆಯ ವಿಷ ಬೀಜವನ್ನು ಬಿತ್ತಿ ಈ ದೇಶದ ಭದ್ರತೆ ಸುರಕ್ಷತೆ ಐಕ್ಯತೆ ಯನ್ನು ಅಲುಗಾಡಿಸುವ ವಿಧ್ವಂಸಕ ಶಕ್ತಿ ಗಳ ಕುರಿತಾಗಿ ಜಾಗೃತಿವಹಿಸ ಬೇಕಾದ ಅಗತ್ಯವಿದೆ. *ಒಂದು ದೇಶಕ್ಕೆ ಆಥಿ೯ಕ ಬಡತನ ವೈರಿಯಲ್ಲ ಬದಲಾಗಿ ಮಾನಸಿಕ ಬಡತನವೇ ನಿಜವಾದ ಶತ್ರು. ಒಂದು ದೇಶದ […]

ನಾಗರಿಕ ಸಮಿತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಗರಿಕ ಸಮಿತಿಯ ಕಚೇರಿಯ ಮುಂಭಾಗದಲ್ಲಿ 20×14 ಅಡಿ ವಿಸ್ತೀರ್ಣದ ಬೃಹತ್ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭೀಮಾ ಜುವೆಲ್ಲರ್ಸ್‌ನ ಮ್ಯಾನೇಜರ್ ಆಶೀಶ್ ಅವರು ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಿತ್ರ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ವನಿತಾ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಸೇರಿದಂತೆ […]

ಉಡುಪಿ: ಉದ್ಯಮಿ ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ- ಕಿಶೋ‌ರ್ ಪೂಜಾರಿ, ಸದಾನಂದ ದೇವಾಡಿಗ ಬಂಧನ

ಉಡುಪಿ: ಉದ್ಯಮಿ ಡೇವಿಡ್ ಡಿ’ಸೋಜಾ ಅವರನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಮತ್ತೆರಡು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಪೊಲೀಸರು,ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಎರ್ಮಾಳ್‌ ಕಿಶೋ‌ರ್ ಪೂಜಾರಿ (47) ಹಾಗೂ ಕುತ್ಯಾರ್ ನಿವಾಸಿ ಸದಾನಂದ ದೇವಾಡಿಗ ( 45) ಬಂಧಿತರು. ಆರೋಪಿ ಕಿಶೋರ್ ಹಣವನ್ನು ಆರೋಪಿ ಸದಾನಂದನಿಗೆ ವರ್ಗಾವಣೆ ಮಾಡಿದ್ದು, ಸದಾನಂದ ಅದನ್ನು ಮೂವರು ಸುಪಾರಿ ಕೊಲೆಗಾರರಿಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.