ಉಡುಪಿ: 80ನೇ ಸ್ವಾತಂತ್ರ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್

ಉಡುಪಿ: ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಷದ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವರು, ದೇವಾಲಯಗಳಲ್ಲಿ ಪ್ರತಿನಿತ್ಯ ಬಳಕೆಯಾಗುವ ಹೂವುಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸಿ, ವೈಜ್ಞಾನಿಕವಾಗಿ ಸಂಗ್ರಹಿಸಿ ಪರಿಸರ ಸ್ನೇಹಿ ಅಗರಬತ್ತಿ, ಬಿದಿರು ರಹಿತ ಧೂಪದಕಡ್ಡಿ ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸುವ ಯೋಜನೆಯನ್ನು ಜಿಲ್ಲಾಡಳಿತವು ವಿ-ಕೇರ್ ಸೊಸೈಟಿ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು. […]
ನಾಗರ ಪಂಚಮಿ: ಹುತ್ತಕ್ಕೆ ಹಾಲೆರೆಯುವ ಮುನ್ನ ಈ ವಿಷಯ ತಿಳಿಯಿರಿ; ನಾಗನಿಗೆ ಬೇಕಿರುವುದು ಹಾಲಲ್ಲ!

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಂಭ್ರಮವೂ ಶುರುವಾಗುತ್ತದೆ. ಮಳೆಯಿಂದ ಹಸಿರಾದ ಪ್ರಕೃತಿ, ತುಂಬಿ ಹರಿಯುವ ನದಿಗಳು, ಹೊಲ-ಗದ್ದೆಗಳಲ್ಲಿ ಕಾಣಿಸುವ ಹೊಸ ಚೈತನ್ಯ… ಇವೆಲ್ಲದರ ನಡುವೆ ಮನೆಮನೆಗಳಲ್ಲೂ ಹಬ್ಬದ ಸಡಗರ ಮನೆ ಮಾಡುತ್ತದೆ. ಶ್ರಾವಣದ ಮೊದಲ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದು ನಾಗರ ಪಂಚಮಿ. ನಾಗನ ಕಲ್ಲಿಗೆ ಪೂಜೆ ಸಲ್ಲಿಸುವುದು, ಹುತ್ತಕ್ಕೆ ಹಾಲು ಎರೆಯುವುದು, ಹೂವು, ಅರಿಶಿನ-ಕುಂಕುಮ ಅರ್ಪಿಸುವುದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ಬಾರಿ ನಾಗರ ಪಂಚಮಿಯಂದು ಪೂಜೆ ಮಾಡುವಾಗ ಒಂದು ಪ್ರಶ್ನೆಯನ್ನು […]
ಸ್ವಾತಂತ್ರ್ಯ ದಿನದ ನಿಜವಾದ ಉದ್ದೇಶ ಸಾಕಾರ ಮಾಡೋಣ: ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಬರಹ

1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ದಿನ. ಕೋಟ್ಯಂತರ ಭಾರತೀಯರ ಕನಸು ನನಸಾದ ಆ ದಿನವನ್ನು ನಾವು ಪ್ರತಿವರ್ಷ ಹೆಮ್ಮೆಯಿಂದ ಆಚರಿಸುತ್ತೇವೆ. ಆದರೆ ಇಂದಿನ ಸಂದರ್ಭದಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಮತ್ತೊಮ್ಮೆ ಯೋಚಿಸಬೇಕಾಗಿದೆ. ಇಂದಿನ ಯುವಜನತೆಗೆ ಸ್ವಾತಂತ್ರ್ಯ ಎಂದರೆ ಕೇವಲ ವಿದೇಶಿ ಆಡಳಿತದಿಂದ ಮುಕ್ತಿ ಅಲ್ಲ. ತನ್ನ ಶಿಕ್ಷಣ, ವೃತ್ತಿ, ಜೀವನಶೈಲಿ ಮತ್ತು ಭವಿಷ್ಯದ ಬಗ್ಗೆ ಸ್ವತಂತ್ರವಾಗಿ ನಿರ್ಧರಿಸುವ ಅವಕಾಶವೂ ಸ್ವಾತಂತ್ರ್ಯ. ಆದರೆ ನಮ್ಮ ಸ್ವಾತಂತ್ರ್ಯಕ್ಕೆ ಹಲವು ರೀತಿಯ ಬಂಧನಗಳಿವೆ. ಸಮಾಜ ಏನು ಹೇಳುತ್ತದೆ […]
80ನೇ ಸ್ವಾತಂತ್ರ್ಯ ದಿನಾಚರಣೆ: ತ್ರಿರಂಗ ಧ್ವಜವನ್ನು ಗೌರವದಿಂದ ಮಡಚುವ ಮತ್ತು ಸಂಗ್ರಹಿಸಲು ಒಂದು ಕ್ರಮವಿದೆ ಗೊತ್ತೇ? ರಾಷ್ಟ್ರಧ್ವಜ ನಮ್ಮ ಗರಿಮೆ ಮತ್ತು ಗೌರವ

ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿರುವಾಗ, ದೇಶದಾದ್ಯಂತ ಲಕ್ಷಾಂತರ ನಾಗರಿಕರು ‘ಹರ್ ಘರ್ ತ್ರಿರಂಗ’ ಅಭಿಯಾನದ ಅಡಿಯಲ್ಲಿ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತಿದ್ದಾರೆ. ಆದರೆ, ಸ್ವಾತಂತ್ರ್ಯ ದಿನದ ಆಚರಣೆ ಮುಗಿದ ನಂತರ ಧ್ವಜವನ್ನು ಸರಿಯಾದ ಗೌರವದೊಂದಿಗೆ ತೆರವುಗೊಳಿಸಿ, ಸುರಕ್ಷಿತವಾಗಿ ಮಡಚಿಡುವುದು ಸಹ ಅಷ್ಟೇ ಮುಖ್ಯವಾಗಿದೆ. ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಧ್ವಜ ಸಂಹಿತೆ (Flag Code of India) ನೀಡಿರುವ ಮಾರ್ಗದರ್ಶನದಂತೆ, ರಾಷ್ಟ್ರಧ್ವಜವನ್ನು ಮಡಚಲು ಹಾಗೂ ಸಂಗ್ರಹಿಸಿಡಲು ಅನುಸರಿಸಬೇಕಾದ ಪೂರ್ಣ ವಿಧಾನ ಇಲ್ಲಿದೆ: […]
ಭಾರತದ ಸ್ವಾತಂತ್ರ್ಯದಿನದ ಕುರಿತು ಈ ಎಲ್ಲಾ ಸಂಗತಿಗಳು ನಿಮಗೆ ತಿಳಿದಿರಲಿ

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಐತಿಹಾಸಿಕ ದಿನ 1947ರ ಆಗಸ್ಟ್ 15. ಪ್ರತಿವರ್ಷ ಈ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತದೆ. 2026ರ ಆಗಸ್ಟ್ 15ರಂದು ಭಾರತವು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಐತಿಹಾಸಿಕ ಸಂಗತಿಗಳು ಇಲ್ಲಿವೆ. ಸ್ವಾತಂತ್ರ್ಯ ಸಿಕ್ಕಾಗ ‘ಜನ ಗಣ ಮನ’ ರಾಷ್ಟ್ರಗೀತೆಯಾಗಿರಲಿಲ್ಲ 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾದಾಗ ‘ಜನ ಗಣ ಮನ’ ಅಧಿಕೃತ ರಾಷ್ಟ್ರಗೀತೆಯಾಗಿರಲಿಲ್ಲ. ಆದರೆ ಈ ಗೀತೆ ಅದಕ್ಕೂ ಬಹಳ […]