ಪಕ್ಷ ರಾಜಕೀಯ ಮೀರಿದ ರಾಷ್ಟ್ರ ಪ್ರೇಮ ಎಲ್ಲರಲ್ಲೂ ತುಂಬಿಕೊಳ್ಳಲಿ: ಸ್ವಾತಂತ್ರ್ಯ ದಿನದ ವಿಶೇಷ ಬರಹ

ಇಂದಿನ 80ರ ಸ್ವಾತಂತ್ರ್ಯ ಸಂದರ್ಭದಲ್ಲಿ ನಾವೆಲ್ಲರೂ ಗಂಭೀರವಾಗಿ ಚಿಂತನೆ ಮಾಡ ಬೇಕಾದ ಘಟನೆ ಎಂದರೆ ದೇಶದ ಒಳಗು ಮತ್ತು ಹೊರಗಿನಿಂದ ಈ ರೀತಿಯಲ್ಲಿ ಒಡೆದು ಆಳುವ ಶಕ್ತಿಯಿಂದ ಎಚ್ಚರಿಕೆ ವಹಿಸಲೇಬೇಕು.

ಜಾತಿ ಧಮ೯ ಭಾಷೆ ಪ್ರಾದೇಶಿಕತೆಯ ವಿಷ ಬೀಜವನ್ನು ಬಿತ್ತಿ ಈ ದೇಶದ ಭದ್ರತೆ ಸುರಕ್ಷತೆ ಐಕ್ಯತೆ ಯನ್ನು ಅಲುಗಾಡಿಸುವ ವಿಧ್ವಂಸಕ ಶಕ್ತಿ ಗಳ ಕುರಿತಾಗಿ ಜಾಗೃತಿವಹಿಸ ಬೇಕಾದ ಅಗತ್ಯವಿದೆ.

*ಒಂದು ದೇಶಕ್ಕೆ ಆಥಿ೯ಕ ಬಡತನ ವೈರಿಯಲ್ಲ ಬದಲಾಗಿ ಮಾನಸಿಕ ಬಡತನವೇ ನಿಜವಾದ ಶತ್ರು.

ಒಂದು ದೇಶದ ಸ್ವಾತಂತ್ರ್ಯದ ಹಿರಿಮೆ ಗೌರವ ಹೆಚ್ಚಿಸ ಬೇಕಾದರೆ ಪಕ್ಷ ರಾಜಕೀಯ ಮೀರಿದ ರಾಷ್ಟ್ರ ಪ್ರೇಮವನ್ನು ನಮ್ಮೆಲ್ಲರ ಹೃದಯದಲ್ಲಿ ತುಂಬಿಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ.ಯಾವುದೇ ಒಂದು ಪಕ್ಷ ವ್ಯಕ್ತಿ ಶಾಶ್ವತವಲ್ಲ..

ಒಂದು ಇರುತ್ತೆ ನಾಳೆ ಹೇೂಗಬಬಹುದು ಆದರೆ ದೇಶ ಹಾಗಲ್ಲ…ಅದು ಶಾಶ್ವತ.ಅನ್ನುವುದನ್ನು ನಾವು ಮರೆಯಬಾರದು.

*ದೇಶದ ಸಂರಕ್ಷಣೆ ದೇಶದ ಸಮಷ್ಟಿ ಬೆಳವಣಿಗೆಗಾಗಿ ನಾವೆಲ್ಲರೂ ದೃಢವಾದ ಸಂಕಲ್ಪ ಮಾಡಬೇಕಾದ ದಿನವೆಂದರೆ ಅದುವೇ ಸ್ವಾತಂತ್ರ್ಯ ದಿನಾಚರಣೆ.

-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ. ನಿವೃತ್ತ ಮುಖ್ಯಸ್ಥ ರಾಜಕೀಯ ಶಾಸ್ತ್ರ ವಿಭಾಗ ಎಂಜಿಎಂ.ಕಾಲೇಜು ಉಡುಪಿ.