ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀಮತಿ ಸಬೀನರವರು ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಕಬ್ಯಾಡಿಯವರು ಉಪಸ್ಥಿತರಿದ್ದರು.
ಓಂತಿಬೆಟ್ಟು ದುರ್ಗಾ ವಿನಾಯಕ ಸ್ಟೋರ್ಸ್ ಮಾಲಕರಾದ ಪ್ರಕಾಶ್ ಪ್ರಭುರವರು ಧ್ವಜಾರೋಹಣ ಮಾಡಿದರು. ಇವರು ಶಾಲೆಯ ಎಲ್ಲಾ ಮಕ್ಕಳಿಗೆ ಸ್ಪೋರ್ಟ್ಸ್ ಯುನಿಫಾರ್ಮ್ ಡ್ರೆಸ್ ನ್ನು ಉಚಿತವಾಗಿ ನೀಡಿದರು.

ಪ್ರಕಾಶ್ ಪ್ರಭುರವರು ಮಾತನಾಡುತ್ತಾ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿರುವ ತ್ಯಾಗವನ್ನು ಸ್ಮರಿಸಿಕೊಂಡರು. ಮಕ್ಕಳು ಹೆತ್ತ ತಾಯಿಯನ್ನು ಮತ್ತು ಹೊತ್ತ ತಾಯಿ ಭಾರತ ಮಾತೆಯ ಋಣವನ್ನು ಯಾವತ್ತೂ ಸ್ಮರಿಸಬೇಕು. ಗುರು ಹಿರಿಯರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ಶಾಲಾ ವತಿಯಿಂದ ಪ್ರಕಾಶ್ ಪ್ರಭುರವರಿಗೆ ಗೌರವದ ಸನ್ಮಾನ ನೀಡಲಾಯಿತು. ಮಕ್ಕಳು ವಂದೇಮಾತರಂ ಮತ್ತು ಧ್ವಜ ಗೀತೆಯನ್ನು ಹಾಡಿದರು. ತ್ರಿವರ್ಣ ಪತಾಕೆ ಹಿಡಿದು ಕೊಂಡು ಮಕ್ಕಳು ನರ್ತಿಸಿದರು.
ತ್ರಿವರ್ಣ ಫ್ಯಾನ್ ಹಿಡಿದುಕೊಂಡು ಡ್ರಿಲ್ ನೃತ್ಯ ಮಾಡಿದರು. ನಂತರ ಸಾಮೂಹಿಕ ರಾಷ್ಟ್ರ ಗೀತೆಯನ್ನು ಹಾಡಿದರು.
ಮದಗದ ಬಾಲಚಂದ್ರ ನಾಯಕ್ ರವರು ಮಕ್ಕಳಿಗೆ ಮತ್ತು ಪೋಷಕರಿಗೆ ತ್ರಿವರ್ಣ ಶಾಲನ್ನು ಉಚಿತವಾಗಿ ನೀಡಿದರು ಮತ್ತು ಸತೀಶ್ ನಾಯ್ಕ್ ಪಡು ಆತ್ರಾಡಿ ಇವರು ಮಕ್ಕಳಿಗೆ ಪೆನ್ನು ಮತ್ತು ಪೆನ್ಸಿಲ್ ನ್ನು ನೀಡಿದರು.
ಕಾರ್ಯಕ್ರಮಕ್ಕಾಗಿ ಪ್ರತೀ ವರ್ಷದಂತೆ ಈ ವರ್ಷ ಕೂಡ ಜೈ ಹನುಮಾನ್ ಸಂಘದ ಸದಸ್ಯರು ಧ್ವಜ ಕಟ್ಟೆಗೆ ಪೈಂಟ್ ಕೊಡಿಸಿ ಶಾಲಾ ಸುತ್ತ ಮುತ್ತ ಸ್ವಚ್ಛತೆಯನ್ನು ಮಾಡಿಸಿದ್ದರು.
ಪ್ರತೀ ವರ್ಷದಂತೆ ಈ ಬಾರಿ ಕೂಡ ಕುಮಾರ್ ಸೌಂಡ್ಸ್ ಮಾಲಕರಾದ ಹರೀಶ್ ಪೂಜಾರಿ ಮರಾಠಿ ತೋಟ ರಸ್ತೆ ಇವರು ಧ್ವನಿ ವರ್ಧಕದ ವ್ಯವಸ್ಥೆಯನ್ನು ಉಚಿತವಾಗಿ ಮಾಡಿದ್ದರು.
ಸಿಹಿ ತಿಂಡಿ ವ್ಯವಸ್ಥೆಯನ್ನು ಜೈ ಹನುಮಾನ್ ಸಂಘ ಆತ್ರಾಡಿ, ಶ್ರೀಮಹಾಲಿಂಗೇಶ್ವರ ಆಟೋ ಚಾಲಕ – ಮಾಲಕರ ಸಂಘ ಆತ್ರಾಡಿ, ನಿಸರ್ಗ ಆಟೋ ಚಾಲಕ – ಮಾಲಕರ ಸಂಘ ಆತ್ರಾಡಿ, ಶ್ರೀಮತಿ ಪುಷ್ಪ ಪ್ರಭಾಕರ್ ಆಚಾರ್ಯ ಕಬ್ಯಾಡಿ ಆತ್ರಾಡಿ, ಹರೀಶ್ ಹೆಗ್ಡೆ ಪರೀಕ, ಶ್ರೀಮತಿ ಸಬೀನ SDMC ಅಧ್ಯಕ್ಷರು, 7ನೇ ತರಗತಿಯ ತ್ರಿಷಾ ಮತ್ತು ದಿಶಾ, ದುರ್ಗಾ ಕ್ರಿಕೆಟರ್ಸ್ ಆತ್ರಾಡಿ, ಮಾರ್ನಿಂಗ್ ಕ್ರಿಕೆಟರ್ಸ್ ಮದಗ, ಶ್ರೀಮತಿ ವೀಣಾ ರಮೇಶ್ ಶೆಟ್ಟಿ ತೋಟ ಮನೆ ಪರೀಕ, ಆಟೋ ಮಾಲಕ ಪ್ರಕಾಶ್ ಓತಿಬೆಟ್ಟು ಇವರುಗಳು ನೀಡಿರುತ್ತಾರೆ. ಒಟ್ಟಾರೆ ಮಕ್ಕಳಿಗೆ ಕೈ ಚೀಲದಲ್ಲಿ ಒಯ್ಯುವಷ್ಟು ಸಿಹಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿಯವರು ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಕೊನೆಗೆ ವಂದನಾರ್ಪಣೆ ನೀಡಿದರು.
ಕಾರ್ಯಕ್ರಮ ಮುಗಿದ ನಂತರ ಸ್ವಚ್ಛತೆಗಾಗಿ ಶಿಕ್ಷಕಿ ಯವರೊಂದಿಗೆ ಆಟೋ ಚಾಲಕ ಪ್ರಕಾಶ್ ಓಂತಿ ಬೆಟ್ಟು, ಬಾಲಚಂದ್ರ ನಾಯಕ್ ಮದಗ, ಪ್ರಕಾಶ್ ಪ್ರಭು ಕೆಳ ಆತ್ರಾಡಿ ಇವರುಗಳು ಕೈ ಜೋಡಿಸಿದ್ದರು.















